ಉನ್ನತ ಶಿಕ್ಷಣಕ್ಕಾಗಿ ಬಡವರು ಶ್ರೀಮಂತರು ಅವಶ್ಯಕತೆ ಇಲ್ಲ: ಶಾಸಕ ಶ್ರೀಮಂತ ಪಾಟೀಲ್
ಲೋಕದರ್ಶನ ವರದಿ
ಕಾಗವಾಡ 16: ಅಧಿಕಾರ ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಲ್ಲರು, ಉನ್ನತ ಶಿಕ್ಷಣಕ್ಕಾಗಿ ಬಡವರು ಶ್ರೀಮಂತರು ಅವಶ್ಯಕತೆ ಇಲ್ಲ. ಛಲವಿದ್ದರೆ ಏನೆಲ್ಲಾ ಸಾಧಿಸಬಹುದು ಇದಕ್ಕೆ ಉದಾರಣೆ ಅಂದರೆ ಮೋಳೆ ಗ್ರಾಮದ ಬಡ ಅಡಹಳ್ಳಿ ಕುಟುಂಬದ ಯುವಕರು ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಶ್ಲಾಘಿಸಿದರು.
ಶುಕ್ರವಾರ ರಂದು ಕೆಂಪವಾಡದ ಅಥಣಿ ಸಕ್ಕರೆ ಕಾರ್ಖಾನೆ ಸಭಾಭವನದಲ್ಲಿ ಅಡಹಳ್ಳಿ ಕುಟುಂಬದ ಇಬ್ಬರು ಯುವಕರು ಅದರಲ್ಲಿ ಜಗದೀಶ್ ಅಡಹಳ್ಳಿ ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಂಧ್ರ್ರದೇಶದಲ್ಲಿ ಐಪಿಎಸ್ ಅಧಿಕರಿ ಎಂದು ಸೇವೆ ಪ್ರಾರಂಭಿಸಿದ್ದಾರೆ. ಅವರ ಸಹೋದರ ಮಾಂತೇಶ ಅಡಹಳ್ಳಿ ಸಿಎ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಉತ್ತರರಾಗಿದ್ದಾರೆ. ಈ ಇಬ್ಬರು ಯುವಕರು ಅವರ ತಂದೆ ತಾಯಿ ಕನಸು ನೆನಸು ಮಾಡಿದಾರೆ.
ಶ್ರೀಕಾಂತ್ ಅಡಹಳ್ಳಿ ಸಕ್ಕರೆ ಕಾರ್ಖಾನೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಚಾಲಕನ ಬಡ ಮಕ್ಕಳು ಮನಸಾರೆ ಓದಿ ಒಳ್ಳೆ ಸ್ಥಾನವನ್ನು ಪಡೆದುಕೊಂಡು ಕಾಗವಾಡ ತಾಲೂಕಿನಲ್ಲಿ ಒಂದು ಮಾದರಿ ಕುಟುಂಬ ಆಗಿದ್ದೆ. ಈ ಯುವಕರು ಮಾಡಿರುವ ಸಾಧನೆ ಇಂದಿನ ಯುವಕರಿಗೆ ಸಾಧನೆ ಮಾಡಲು ದಾರೀದೀಪವಾಗಿದೆ ಎಂದು ಶಾಸಕ ಶ್ರೀಮಂತ ಪಾಟೀಲರು ಮಾತನಾಡಿ ಸಾಧನೆ ಹೊಗಳಿದರು.
ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಅಡಹಳ್ಳಿ ಕುಟುಂಬದ ಯುವಕರು ಕಷ್ಟಪಟ್ಟು ಓದಿದ್ದಾರೆ ಸಹೋದರರು ಇವತ್ತು ಒಂದು ಉನ್ನತ ಹುದ್ದೆ ಅಲಂಕರಿಸುವುದರ ಮೂಲಕ ಇತರ ಬಡ ಮಕ್ಕಳಿಗೆ ಹಾಗೂ ಬಡ ರೈತನ ಮಕ್ಕಳಿಗೆ ಮಾದರಿವಾಗಿದ್ದಾರೆ. ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು, ಇಂದು ಚಾಲಕರ ಮಕ್ಕಳು ಇಬ್ಬರೂ ಸಹೋದರರು ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡುವ ಮೂಲಕ ಮೋಳೆ ಗ್ರಾಮಕ್ಕೆ ಅಷ್ಟೇ ಅಲ್ಲ ನಮ್ಮ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಅವರ ಈ ಪರಿಶ್ರಮಕ್ಕೆ ತುಂಬ ಹೃದಯದ ಅಭಿನಂದನೆಗಳು.
ಸನ್ಮಾನ ಸಮಾರಂಭದಲ್ಲಿ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಯೋಗೇಶ್ ಪಾಟೀಲ, ಕಾರ್ಖಾನೆಯ ಜನರಲ್ ಮ್ಯಾನೇಜರ್ ಆರ್.ಎ.ಲಟಕೆ ಹಾಗೂ ಸ್ಥಳೀಯ ಮುಖಂಡರಾದ ಶ್ರೀಕಾಂತ ಅಡಹಳ್ಳಿ, ಮುರಗೆಪ್ಪಾ ಮಗದುಮ್, ರಾಮ ಸೊಡ್ಡಿ, ಅಬ್ದುಲ್ ಮುಲ್ಲಾ, ಸಂಜಯ ತೆಲಸಂಗ, ರಾಜು ಚವ್ಹಾಣ, ಸುನಿಲ ಪಾಟೀಲ, ದೀಲೀಪ ಪವಾರ, ರಮೇಶ ಗೋಡಸೆ, ಬಾಪು ಪಾಟೀಲ, ವಿನಾಯಕ ಪಾಟೀಲ, ರವಿ ಬನಜವಾಡ ಸೇರಿದಂತೆ ಮತ್ತಿತರ ಮುಖಂಡರು, ಕಾರ್ಖಾನೆಯ ಹಲವಾರು ವಿಭಾಗದ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.