ರಾಜಕೀಯ ವ್ಯವಹಾರವಲ್ಲ ಪವಿತ್ರವಾದ ಜನಸೇವೆ - ಕೆ.ಬಿ. ಕೋಳಿವಾಡ
ರಾಣೇಬೆನ್ನೂರಲ್ಲಿ ಅಪ್ಪಟ ದಿಟ್ಟ ರಾಜಕಾರಣಿ ಕೋಳಿವಾಡ ಅವರ ಹುಟ್ಟುಹಬ್ಬ
ರಾಣೇಬೆನ್ನೂರು 01: ರಾಜಕೀಯ ವ್ಯವಹಾರವಲ್ಲ ನೊಂದವರ, ಬೆಂದವರ ನೋವು ನಲಿವುಗಳಿಗೆ ಸ್ಪಂದಿಸಿ ಮಾಡುವ ಪವಿತ್ರವಾದ ಜನ ಸೇವೆ ಎನ್ನುವುದನ್ನು ಅರ್ಥ ಮಾಡಿಕೊಂಡರೆ, ನಂಬಿದ ಜನರು ಎಂದಿಗೂ ಕೈಬಿಡುವುದಿಲ್ಲ ಎಂದು ಮಾಜಿ ವಿಧಾನಸಭಾಧ್ಯಕ್ಷ, ಕೆ. ಬಿ. ಕೋಳಿವಾಡ ಹೇಳಿದರು.
ನಗರದ ಎಪಿಎಂಸಿ ವರ್ತಕರ ಸಂಘದ ಕಲ್ಯಾಣ ಮಂಟಪದಲ್ಲಿ, ಕೋಳಿವಾಡ ಅವರ ಅಭಿಮಾನಿ ಬಳಗವು ಆಯೋಜಿಸಿದ್ದ ಅವರ 80ನೇ ಹುಟ್ಟು ಹಬ್ಬದ ಅಭಿನಂದನಾ ಸಮಾರಂಭದಲ್ಲಿ ಹೃದಯ ಸ್ಪರ್ಶಿ, ಸಾರ್ವಜನಿಕವಾಗಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು . ಸಮಾಜ ಸೇವೆ ಮಾಡುವುದು ಸುಲಭವಲ್ಲ, ಸೇವೆ ಮಾಡುವ ಸಂಕಲ್ಪವಿದ್ದರೆ ನಾಗರೀಕರ ಎಂತಹ ಸಮಸ್ಯೆಗಳಿದ್ದರೂ ಸಹಾ ಸುಲಭವಾಗಿ ಮಾಡಬಹುದು. ರಾಜಕಾರಣಿಗಳು ಜನಸೇವಕರೇ ಹೊರತು ಜನರ ಮೇಲೆ ಕುಳಿತು ಅಧಿಕಾರ ಮಾಡುವವರಲ್ಲ ಎನ್ನುವ ವಾಸ್ತವಿಕ ಸಂಗತಿಯನ್ನು ಅರಿತುಕೊಂಡು, ಭವಿಷ್ಯದ ರಾಜಕಾರಣಿಗಳು ಮುನ್ನಡೆಯಬೇಕು ಎಂದರು.
ತಾಲೂಕಿನ ಜನತೆ ನನಗೆ ಹಲವಾರು ಬಾರಿ, ಆಡಳಿತ ನಡೆಸಲು ನನ್ನ ಮೇಲೆ ಪ್ರೀತಿ, ವಿಶ್ವಾಸ ಮತ್ತು ನಂಬಿಕೆ ಇಟ್ಟು ಆರಿಸಿ ಕಳಿಸಿದ್ದಾರೆ. ಶಾಸಕನಾಗಿ, ಸಚಿವನಾಗಿ ಸರ್ಕಾರದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿ ಸೇವೆ ಮಾಡಿದ ತೃಪ್ತಿ ನನಗಿದೆ ಎಂದು ತಮ್ಮ ಆಡಳಿತದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದ, 80 ವರ್ಷದ ಹಿರಿಯ ರಾಜಕಾರಣಿ ಕೋಳಿವಾಡ ಅವರು ತಾಲೂಕಿನ, ಜಿಲ್ಲೆಯ ಹಾಗೂ ನಾಡಿನ ಜನತೆಗೆ ತಮ್ಮ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ, ಮಾಜಿ ಸಚಿವ, ಡಿ.ಆರ್. ಪಾಟೀಲ್, ಕೆಪಿಸಿಸಿಯ ಸಲೀಂ ಅಹಮ್ಮದ್, ಮಾಜಿ ಸಚಿವ ಪ್ರೊ: ಐ.ಜಿ.ಸನದಿ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್, ಎಸ್. ಆರ್.ಪಾಟೀಲ್, ಡಿ.ಎಂ. ಸಾಲಿ, ಮಂಜನಗೌಡ ಪಾಟೀಲ್, ಸೋಮಣ್ಣ ಬೇವಿನಮರದ, ಬಿ. ಹೆಚ್. ಬನ್ನಿಕೊಡ, ಅಜ್ಜಂಪೀರ್ ಖಾದ್ರಿ, ಡಿ ಬಸವರಾಜ್, ಶಿವಕುಮಾರಗೌಡ ಪಾಟೀಲ್, ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು, ಕೋಳಿವಾಡ ಅವರ ಜೀವನ ಸಾಧನೆ, ರಾಜಕೀಯ ಮತ್ತು ಅವರುದೇಶಕ್ಕೆ ನೀಡಿದ ಕೊಡುಗೆ ಕುರಿತು, ವಿಶ್ಲೇಷಿಸಿ ಅಭಿನಂದಿಸಿ ಮಾತನಾಡಿದರು. ತಂದೆ ಕೆ.ಬಿ.ಕೋಳಿವಾಡ ಅವರ 80ನೇ ಹುಟ್ಟುಹಬ್ಬದ ನಿಮಿತ್ತ, ಸಾರ್ವಜನಿಕ ಸಮಸ್ಯೆ ಪರಿಹಾರ ಸೇವೆ 24+7, ನಮ್ಮ ಧ್ವನಿ, ಹೃದಯಾಘಾತ ತಡೆಗಟ್ಟುವಿಕೆ ತರಬೇತಿ ಕಾರ್ಯಕ್ರಮ ಮತ್ತು ಮೊಬೈಲ್ ಡಯಾಲಿಸಿಸ್ ಇಕ್ವಿಪ್ಮೆಂಟ್ ( ಸಿಪಿಆರ್ ತರಬೇತಿ,) ಯೋಜನೆಗಳನ್ನು ಲೋಕಾರೆ್ಣಗೂಳಿಸಲಾಗಿದೆ ಎಂದು ಪುತ್ರ,ಶಾಸಕ ಪ್ರಕಾಶ ಕೋಳಿವಾಡ ಅವರು ವಿವರಿಸಿ ಮಾತನಾಡಿದರು. ವೇದಿಕೆಯಲ್ಲಿ ರುಕ್ಮಿಣಿ ಸಾವಕಾರ, ಪೂರ್ಣಿಮಾ ಕೋಳಿವಾಡ, ಮಂಜನ ಗೌಡ ಪಾಟೀಲ್, ಶೇರುಖಾನ್ ಕಾಬೂಲಿ, ಕೃಷ್ಣಪ್ಪ ಕಂಬಳಿ, ಸಣ್ಣ ತಮ್ಮಪ್ಪ ಬಾರ್ಕಿ, ಇಕ್ಬಾಲ್ ಸಾಬ್ ರಾಣೇಬೆನ್ನೂರ, ರವೀಂದ್ರಗೌಡ ಪಾಟೀಲ್,ಏಕಾಂತ ಮುದಿಗೌಡ್ರ, ಮಧು ಕೋಳಿವಾಡ, ಜಾಕಿರ ಸನದಿ,ತಿರುಪತಿ ಅಜ್ಜನವರ್, ಪ್ರಕಾಶ್ ಜೈನ್, ಬಸವರಾಜ ಸವಣೊರ, ಶೇಖಣ್ಣ ಹೊಸಗೌಡ್ರ್, ಕೃಷ್ಣ ಮಣ್ಣಣ್ಣನವರ, ಚಂದ್ರಣ್ಣ ಬೇಡರ, ಏಕನಾಥ ಭಾನುವಳ್ಳಿ, ಶಶಿಧರ ಬಸೇನಾಯಕ, ಪರಮೇಶಪ್ಪ ಮೇಗಳಮನಿ, ಸೇರಿದಂತೆ ಮತ್ತತರ ಮುಖಂಡರು ಕಾರ್ಯಕರ್ತರು, ಪಾಲ್ಗೊಂಡಿದ್ದರು. ಅಭಿನಂದನಾ ಗೌರವ, ಸನ್ಮಾನ ಸಮಾರಂಭದಲ್ಲಿ, ಮಾಜಿ ಶಾಸಕರಾದ ಬಿ.ಸಿ.ಪಾಟೀಲ್, ಸುರೇಶಗೌಡ್ರ ಪಾಟೀಲ್, ಮತ್ತಿತರ ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು, ರಾಜಕೀಯ ಗಣ್ಯಾತಿಗಣ್ಯರು, ಧಾವಿಸಿ, ತಮ್ಮ ಶುಭ ಕೋರಿ, ಸನ್ಮಾನಿಸಿ ಗೌರವಿಸಿದರು. ಅಭಿಮಾನಿ ಬಳಗವು ಅತ್ಯಂತ ವ್ಯವಸ್ಥಿತವಾಗಿ, ಹುಟ್ಟುಹಬ್ಬವನ್ನು ಆಯೋಜಿಸಿ ಸಾರ್ವಜನಿಕರ ಪ್ರಸಂಸೆಗೆ ಪಾತ್ರರಾಗಿದ್ದರು. ಕಲಾವಿದರಾದ ವೀಣಾ ಭೋಸಲೆ, ಅನಸೂಯ ರಾಠೋಡ ಪ್ರಾರ್ಥಿಸಿದರು. ಪ್ರಕಾಶ್ ಗಚ್ಚಿನಮಠ, ನಾಡಗೀತೆ ಹಾಡಿದರು. ಫುಟ್ಟಪ್ಪ ಮರಿಯಮ್ಮನವರ, ಸ್ವಾಗತಿಸಿದರು. ಬಸನಗೌಡ ಮರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಬಿ. ಮಾಳಗುಡ್ಡಪ್ಪನವರ ನಿರೂಪಿಸಿ, ಇರ್ಫಾನ್ ದಿಡಗೂರ್ ವಂಸಿದರು.