ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರು ವಿಫಲ: ಶ್ರೀಮಂತ
ಕಾಗವಾಡ 22: ಕಳೆದ ಕೆಲ ತಿಂಗಳಗಳಿಂದ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಯಲು ಕಾಗವಾಡ ಪೊಲೀಸರು ಅಯಶಸ್ವಿಯಾಗಿದ್ದಾರೆ. ಈ ಬಗ್ಗೆ ಗೃಹ ಸಚಿವರಿಗೆ ದೂರು ಸಲ್ಲಿಸಿದ್ದೇನೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಸ್ಪಷ್ಟಪಡಿಸಿದ್ದರು.
ಕಾಗವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ಅರಳಿಹಟ್ಟಿ ಗ್ರಾಮದಲ್ಲಿ ಕಾಯಕ್ರಮ ನಿಮಿತ್ಯೆ ಆಗಮಿಸಿದಾಗ ಶಾಸಕರು ಮಾಹಿತಿ ನೀಡಿದರು. ಮತಕ್ಷೇತ್ರದಲ್ಲಿ ದಿನನಿತ್ಯ ಸರಣಿಗಳ್ಳತನ, ಮನೆ ದರೋಡೆ, ನದಿ ತೀರದ ಪಂಪ ಸೆಟ್ಗಳ ಕೇಬಲ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆೆ. ಈ ಪ್ರಕರಣಗಳ ತನಿಖೆ ಮಾಡಿ ಕಳ್ಳರನ್ನು ಬಂಧಿಸುವಲ್ಲಿ ಕಾಗವಾಡ ಪೊಲೀಸರು ಅಯಶಸ್ವಿಯಾಗಿದ್ದಾರೆ.
ಜುಗುಳ ಗ್ರಾಮದಲ್ಲಿ ಒಂದು ಮನೆ ದರೋಡೆ ಮಾಡಿ 16 ಲಕ್ಷ ರೂಪಾಯಿ ಚಿನ್ನ ಕಳ್ಳತನವಾಗಿದೆ ಇಂತಹ ಪ್ರಕರಣಗಳು ತನಿಖೆ ಮಾಡಲು ನಾನು ಪದೇ ಪದೇ ಪೊಲೀಸರ ಸಭೆಯಲ್ಲಿ ವಾರ್ನ್ ಮಾಡಿದ್ದೆ. ಆದರೆ ಈವರೆಗೆ ಕಳ್ಳರನ್ನು ಬಂಧಿಸಲಾಗಿಲ್ಲ. ಯಾವುದೇ ಪ್ರಕರಣಗಳನ್ನು ಭೇದಿಸಲಾಗಿಲ್ಲ.
ಇಲ್ಲಿ ಜನರ ಬೇಡಿಕೆಗಳು, ಅವರ ಸಮಸ್ಯೆಗಳು, ನನ್ನ ಗಮನದಲ್ಲಿದೆ. ಅನೇಕ ಜನರು ನನ್ನ ಮುಂದೆ ಕಣ್ಣೀರು ಇಟ್ಟಿದ್ದಾರೆ. ಈ ಎಲ್ಲ ಪ್ರಕರಣಗಳ ಬಗ್ಗೆ ಹಾಗೂ ಪೋಲಿಸ್ ಸಿಬಂದ್ದಿಗಳ ಕೊರತೆಯಿದೆ. ಈ ಬಗ್ಗೆಯೂ ಗೃಹ ಸಚಿವ ಅರಗ ಜ್ಞಾನೇಂದ್ರ ಇವರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದ್ದೇನೆ. ಗೃಹ ಸಚಿವರು ಕೂಡಲೇ ಜಿಲ್ಲಾ ಪೊಲೀಸ್ ಪ್ರಮುಖರಿಗೆ ಖಡಕ್ ಸೂಚನೆ ನೀಡಿ ತಮ್ಮ ಆದೇಶ ನೀಡಿದ್ದಾರೆ ಎಂದು ಶಾಸಕರು ಹೇಳಿದರು.
ಮದಭಾವಿ ಭಾಗದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ನಿರ್ಮಿಸಲು ನಾನು ಪ್ರಯತ್ನಿಸುತ್ತೇನೆ ಎಂದು ಶಾಸಕರು ಸಾರ್ವಜನಿಕರಿಗೆ ಭರವಸೆ ನೀಡಿದರು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ವಿನಾಯಕ ಬಾಗ, ಆರ್.ಎಂ. ಪಾಟೀಲ್, ರಾಮ ಸಡ್ಡಿ, ಅಬ್ದುಲ್ ಮುಲ್ಲಾ, ಮುರಗೆಪ್ಪ ಮಗದುಮ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.