2022ರ ಕೊಲೆ ಪ್ರಕರಣ ಭೇದಿಸಿದ ಪೋಲಿಸರು: ಆರೋಪಿಗಳ ಬಂಧನ




ಜಮಖಂಡಿ 3: ಇತ್ತೀಚೆಗೆ ತಾಲ್ಲೂಕಿನ ಜಂಬಗಿ ಹತ್ತಿರ ಅನಾಮಧೇಯ ಶವ ಸಿಕ್ಕಿರುವ ಪ್ರಕರಣವನ್ನು ತನಿಖೆ ಮಾಡುವಾಗ, 2022ರಲ್ಲಿ ಕೊಲೆಯಾದ ವ್ಯಕಿಯ ಪ್ರಕರಣ ಬೆಳಕಿಗೆ ಬಂದಿದ್ದು. ಗೋಕಾಕ ತಾಲೂಕಿನ 4 ಜನ ಆರೋಪಿತರನ್ನು ಹೆಡೆಮುರಿಕಟ್ಟಿ ಬಂಧಿಸುವಲ್ಲಿ ಗ್ರಾಮೀಣ ಠಾಣೆಯ ಪೋಲಿಸರು ಯಶಸ್ವಿಯಾಗಿದ್ದಾರೆ.
ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣವನ್ನು ಬೆನ್ನು ಹತ್ತಿದ ಪೊಲೀಸರು, ಕಾಣೆಯಾದ ವ್ಯಕ್ತಿಯ ಸಹೋದರನಿಗೆ ಇತ್ತೀಚೆಗೆ ಅನಾಮಧೇಯ ಶವದ ಪೋಟೊಗಳನ್ನು ತೋರಿಸಿದಾಗ ಯಾವುದೇ ಗುರುತು ಸಿಕ್ಕಿರಲಿಲ್ಲ, ಆದರೆ ಪೊಲೀಸರು 2022 ರಲ್ಲಿ ಅನಾಮಧೇಯವಾಗಿ ಕೊಲೆಯಾದ ಪೋಟೊಗಳನ್ನು ತೋರಿಸಿದಾಗ ನನ್ನ ಸಹೋದರ ರವಿ ಚುನಮುರಿ ಎಂದು ಗುರುತು ಹಿಡಿದಿದ್ದು, ಅವನನ್ನು ವಿಚಾರಿಸಿದಾಗ ಕೊಲೆಯಾದವನ ಹೆಂಡತಿ ಮೇಲೆ ಸಂಶಯ ವ್ಯಕ್ತಪಡಿಸಿರುತ್ತಾನೆ.
ಹಿನ್ನೆಲೆ: ಕೊಲೆಯಾದ ರಬಕವಿ-ಬನಹಟ್ಟಿ ತಾಲ್ಲೂಕಿನ ರಾಂಪೂರ ಗ್ರಾಮದ ರವಿ ಮಹಾದೇವ ಚುನಮುರಿ ಹಾಗೂ ಅವನ ಹೆಂಡತಿ ಗೌರಿ ಮಧ್ಯೆ ಮೇಲಿಂದ ಮೇಲೆ ಜಗಳವಾಗುತ್ತಿತ್ತು, ಗೌರಿ ರವಿ ಚುನಮುರಿ (35) ಇವಳು ಗೋಕಾಕ ತಾಲ್ಲೂಕಿನ ಈರನಟ್ಟಿ ಗ್ರಾಮದ ತಮ್ಮ ಮಾವನಾದ ಸತೀಶ ರಾಯಪ್ಪ ಮೂಶಪ್ಪಗೋಳ ಇವನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು, ಗಂಡನ ಜೊತೆ ಜಗಳವಾಗುವದನ್ನು ಹಾಗೂ ಗಂಡ ತೊಂದರೆ ಕೊಡುವದನ್ನು ಪೋನ್ ಮೂಲಕ ಮಾವನಿಗೆ ಹೇಳುತ್ತಿರುತ್ತಾಳೆ.
16 ಪೆಬ್ರುವರಿ 2022ರಂದು ಪೋನ್ ಮಾಡಿ ನನಗೆ ನನ್ನ ಗಂಡ ತುಂಬಾ ತೊಂದರೆ ಕೊಡುತ್ತಿದ್ದಾನೆ, ಅವನನ್ನು ಮುಗಿಸಿಬಿಡು ಅಂತಾ ಹೇಳಿರುತ್ತಾಳೆ, ಅವಳ ಮಾತನ್ನು ಕೇಳಿ ಸತೀಶ ಮೂಶಪ್ಪಗೋಳ (37) ಹಾಗೂ ಅವನ ಹತ್ತಿರ ಪೆಂಡಾಲ್ ಕೆಲಸ ಮಾಡುತ್ತಿರುವ ಈರನಟ್ಟಿ ಗ್ರಾಮದ ಬಸವರಾಜ ವಾಲಿ (34), ಪಾಂಡುರಂಗ ಖಾನಾಪೂರ (55), ಕಬಲಾಪೂರ ಗ್ರಾಮದ ದೇವರಾಜ ಸನದಿಯನ್ನು ಕರೆದುಕೊಂಡು ಬನಹಟ್ಟಿಯ ರವಿ ಚುನಮುರಿ ಮನೆಗೆ ಬಂದು ಜಮಖಂಡಿಯ ಚೌಡಯ್ಯನಗರದಲ್ಲಿರುವ ಪ್ಲಾಟ್ ತೋರಿಸಲು ಅಂತಾ ತಮ್ಮ ಕಾರಿನಲ್ಲಿ ಕರೆದುಕೊಂಡು ಬಂದು ಜಮಖಂಡಿ ಸಮೀಪದ ಮಧುರಖಂಡಿಯ ಕೆಂಪುಕೆರೆಯ ಹತ್ತಿರ ಕಾರು ನಿಲ್ಲಿಸಿ ಕುತ್ತಿಗೆಗೆ ಟವೆಲ್ ನಿಂದ ಬಿಗಿದು ಕೊಲೆ ಮಾಡಿ ಜಮಖಂಡಿ ನಗರಸಭೆ ಘನತ್ಯಾಜ್ಯ ಘಟಕದ ಹತ್ತಿರ ರಸ್ತೆಯ ಪಕ್ಕದಲ್ಲಿ ಎಸೆದು ಹೋಗಿರುತ್ತಾರೆ.
ಎರಡು ವರ್ಷದಿಂದ ವಿವಿಧ ಆಯಾಮಗಳಲ್ಲಿ ತಣಿಖೆ ಮಾಡಿದ್ದರು ಅನಾಮಧೇಯವಾಗಿ ಕೊಲೆಯಾದ ವ್ಯಕ್ತಿಯ ಗುರುತು ಸಿಕ್ಕಿರಲಿಲ್ಲ, ಬೇರೆ ಪ್ರಕರಣದ ತಣಿಖೆ ಮಾಡುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ, ನಾಲ್ಕು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ಕಳೆದ 10 ವರ್ಷದಿಂದ ಕಾಣೆಯಾದ ಪ್ರಕರಣಗಳನ್ನು ಮರು ತಣಿಖೆ ಮಾಡುತ್ತಿದ್ದೆವೆ, ಪ್ರಕರಣ ಬೇಧಿಸಿದ ಗ್ರಾಮೀಣ ಠಾಣೆಯ ಪೊಲೀಸರಿಗೆ ಬಹುಮಾನವನ್ನು ನೀಡಲಾಗಿದೆ ಎಂದು ಡಿವಾಯ್ಎಸ್ಪಿ ಶಾಂತವೀರ.ಈ ತಿಳಿಸಿದರು.
ಡಿವಾಯ್ಎಸ್ಪಿ ಶಾಂತವೀರ ಈ, ಮಾರ್ಗದರ್ಶನದಲ್ಲಿ ತಣಿಖೆಯಲ್ಲಿ ಸಿಪಿಐ ಮಲ್ಲಪ್ಪ ಮಡ್ಡಿ, ಗ್ರಾಮೀಣ ಠಾಣೆ ಪಿಎಸ ಐ ಮಹೇಶ ಸಂಖ, ಎಚ್.ಎಮ್.ಹೊಸಮನಿ, ಬಿ.ಎಂ.ಕುಂಬಾರ, ಎಸ್.ಎಸ್.ಗಾಣಗೇರ, ಪಿ.ಎಚ್.ಘಾಟಗೆ, ಎಸ್.ಬಿ.ಹನಗಂಡಿ, ಎಸ್.ಎಚ್.ಕೋಟಿ, ಬಿ.ಪಿ.ಕುಸನಾಳೆ, ಆರ್.ಎಚ್.ಪೂಜಾರಿ, ಪಿ.ಎಮ್.ಹೊಸಮನಿ, ಎಸ್.ಪಿ.ತುಪ್ಪದ, ಬಿ,ಡಿ.ಕಾಂಬಳೆ, ಐ.ಕೆ.ಕೊಕಳೆ, ಎಸ್.ಐ.ಹುದ್ದಾರ ಇದ್ದರು.
ತನಿಖೆಯಲ್ಲಿ ಭೇದಿಸಿದ ಪೋಲಿಸರಿಗೆ ನಗದು ಬಹುಮಾನ ನೀಡಿದರು. ಈಲ್ಲಾ ವರಿಷ್ಠಾಅಧಿಕಾರಿ ಅಮರನಾಥ ರೆಡ್ಡಿ, ಹೆಚ್ಚುವರಿ ಎಸ್ಪಿ ಪ್ರಸನ್ ದೇಸಾಯಿ, ಡಿಎಸ್ಪಿ ಶಾಂತವೀರ ಈ ಅವರು ಕಾರ್ಯವೈಕರಿಯನ್ನು ಮೆಚ್ಚುಗೆ ವ್ಯಕ್ತಪಡಿಸಿ. ಪ್ರಶಂಸಿದ್ದಾರೆ.