ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ
ರಾಣಿಬೆನ್ನೂರ:-6 ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಯಕ, ವ್ಯವಸ್ಥಾಪಕ ನಾಡಕರ್ಣಿ, ನಾಗರಾಜ, ರೂಪಾ ಬಾರ್ಕಿ, ಮಾಧವಿ ನಾಡಗೇರಿ, ಮುಲ್ಲಾ, ರಾಜೇಶ ಮುದ್ದಿ, ಸಿ.ಎಚ್. ಮೇಗಳಮನಿ, ಮೃತ್ಯುಂಜಯ ಪ್ರೌಢ ಶಾಲೆಯ ನಾಗರಾಜ ನಲವಾಗಲ, ರಾಜೇಂದ್ರ ಕುಲಕರ್ಣಿ, ಮೋಹನ ಇದ್ದರು.