ಶಿಗ್ಗಾವ್

ಸಸ್ಯ ಶ್ರಾವಣ- ಗಣಪತಿ ಮಹಾಪೂಜೆ ಕಾರ್ಯಕ್ರಮ

ಸಸ್ಯ ಶ್ರಾವಣ- ಗಣಪತಿ ಮಹಾಪೂಜೆ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ 04: ಗಣೇಶೋತ್ಸವ ನಮಗೆ ಸ್ವಾತಂತ್ರ್ಯ ದೊರಕಲು ಜನರನ್ನು ಹೋರಾಟಕ್ಕೆ ಪ್ರೇರೇಪಿಸಿದ ಹುರುದುಂಬಿಸದ ಉತ್ಸವ. ಈ ಉತ್ಸವ ಆಚರಣೆಗೆ ಯಾವುದೇ ಧರ್ಮ, ಜಾತಿ, ಪಂಥ ಅಡ್ಡಿಯಾಗದು. ಗಣೇಶ ವಿಶ್ವ ವ್ಯಾಪಿ. ಗಣೇಶ ಯಾವುದೇ ಒಂದು ಮತಕ್ಕೆ ಅಥವಾ ಜಾತಿಗೆ ಸೀಮಿತವಾದ ದೇವರಲ್ಲ. ಸರ್ವ ಸಮುದಾಯದವರು ಕೂಡಿಕೊಂಡು ಆಚರಿಸಬೇಕಾದ ಸಾರ್ವಜನಿಕ ಹಬ್ಬವನ್ನು ಹೋತನಹಳ್ಳಿ ಬಾಲಕರ ವಸತಿ ನಿಲಯದಲ್ಲಿ ಶ್ರದ್ಧಾಭಕ್ತಿ ಮತ್ತು ವಿಶೇಷ, ವಿಭಿನ್ನವಾದ ಆಚರಣೆಗೆ ಸಾಕ್ಷಿಯಾಗಿದ್ದು ಶ್ಲಾಘನೀಯವಾಗಿದೆ ಎಂದು ಸಮಾಜ ಸೇವಕ ಶಶಿದರ ಯಲಿಗಾರ ಅಭಿಪ್ರಾಯಿಸಿದರು.

ತಾಲೂಕಿನ ಹೋತನಹಳ್ಳಿ ಮೆಟ್ರೀಕ್ ಪೂರ್ವ ಬಾಲಕರ ವಸತಿ ನಿಲಯ ಆಯೋಜಿಸಿದ್ದ ಸಸ್ಯ ಶ್ರಾವಣ ಮತ್ತು ಗಣಪತಿ ಮಹಾಪೂಜೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಿಲಯವ ನ್ನು ಸುಂದರವನವನ್ನಾಗಿಸಿದ ಮೇಲ್ವೀಚಾರಕ, ಸಿಬ್ಬಂದಿಗಳ ಕಾರ್ಯವೈಖರಿ ಸಾಮಾಜಿಕವಾಗಿ ಶ್ಲಾಘನೀಯ. ಮಕ್ಕಳ ಸಾಮಾನ್ಯ ಜ್ಞಾನ ವೃದ್ಧಿಸುವ ನಿಲಯದ ಗೋಡೆಬರಹ, ಸ್ವಚ್ಛತೆ, ಸುತ್ತುವರೆದ ಶುಚಿಯಾದ ಪರಿಸರ ಆರೋಗ್ಯಕರವಾದ ಸಮಾಜ ನಿಮರ್ಾಣಕ್ಕೆ ಕೈಗನ್ನಡಿಯಾಗಿದೆ ಎಂದರು.

ಗ್ರಾಮದ ಹಿರಿಯರಾದ ಧರ್ಮಣ್ಣ ಭಂಗಿ, ಸುರೇಶ ಗೂಳಣ್ಣವವರ ಮಾತನಾಡಿ, ನಿಲಯದ ಮೇಲ್ವೀಚಾಕರ ಶ್ರಮ ಮತ್ತು ಇಚ್ಛಾಸಕ್ತಿಯ ಫಲವಾಗಿ ಹೋತನಹಳ್ಳಿ ಬಾಲಕರ ವಸತಿ ನಿಲಯ ಜಿಲ್ಲೆಯಲ್ಲೇ ಗುಣಾತ್ಮಕ ಶಿಕ್ಷಣದ ಕೇಂದ್ರವಾಗಿ ಹೊರ ಹೊಮ್ಮಿದೆ ಎಂದರು. 

ವಸತಿ ನಿಲಯದ ಮೇಲ್ವಿಚಾರಕ ರಮೇಶ ಹರಿಜನ ಮಾತನಾಡಿ ಗ್ರಾಮಸ್ಥರ ಮತ್ತು ಶಿಕ್ಷಣ ಪ್ರೇಮಿಗಳ ಸಹಾಯ, ಸಹಕಾರದಿಂದ ಶೈಕ್ಷಣಿಕ ಅಭಿವೃದ್ಧಿ ಕಂಡಿದೆ. ಎಲ್ಲರ ಸಹಕಾರದಿಂದ ಈ ವರ್ಷ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಭಾಜನಾದೆ ಮತ್ತು ಅಗತ್ಯ ಭೌತಿಕ ಸೌಲಭ್ಯಗಳ ಪೂರೈಕೆಗೆ ದಾನಿಗಳ ಸಹಕಾರ ಅಗತ್ಯವಾಗಿದೆ ಎಂದರು. 

ಬಿಸಿಎಂ ಅಧಿಕಾರಿ ರಾಜಶೇಖರ ಪಾರ್ವತೇರ ಮಾತನಾಡಿದರು. ಸಿಂದಗಿಮಠದ ಶಾಂತವೀರ ಶಂಭುಲಿಂಗ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗ್ರಾಪಂ.ಸದಸ್ಯ ಮಾಹಾಂತೇಶ ಮೂಡೂರು, ಮೆಲ್ಚೀಚಾರಕರಾದ ಸಂಗಪ್ಪ ಗುದಗಿ, ಪ್ರವೀಣ ಹೊಸಮನಿ, ಗುರುಶಾಂತ, ಬಾಬುಲ್ ಖವಾಸ್, ಹನುಂತಪ್ಪ ಕೊಪ್ಪದ, ಸಿಬ್ಬಂದಿಗಳಾದ ದೇವರಾಜ ದೊಡ್ಡಮನಿ, ಸಚಿನ್ ಗಿರಿಯಣ್ಣವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಡ್ತಿ ಪಡೆದು ವರ್ಗಾವಣೆಗೊಂಡ ಶಿವಣ್ಣ ಹೇರಣ್ಣವರ ಅವರನ್ನು ಸನ್ಮಾನಿಸಲಾಯಿತು. ಚನ್ನಪ್ಪ ಸಣ್ಣಮನಿ ನಿರೂಪಿಸಿದರು 

ಸುದ್ದಿ ಓದಿ