ಪಾರಿವಾಳ ಹಾರಿಸುವ ಕಲೆಗೆ ಪ್ರೋತ್ಸಾಹ ಅಗತ್ಯ: ಶೆಟ್ಟರ
ಗುಳೇದಗುಡ್ಡ7: ಪಾರಿವಾಳಗಳನ್ನು ಆಕಾಶದಲ್ಲಿ ಗಂಟೆಗಳ ಕಾಲ ಹಾರಾಡಿಸುವುದು ಒಂದು ಕಲೆ. ಅಂತಹ ಕಲೆಯಲ್ಲಿ ಪರಿಣಿತಿ ಹೊಂದಿದ ಗುಳೇದಗುಡ್ಡದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಕಲೆ ಹಾಗೂ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ನಾವೆಲ್ಲ ಮಾಡಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ ಹೇಳಿದರು.
ಭಾನುವಾರ ಪಟ್ಟಣದ ಶಕ್ತಿ ಕಲ್ಯಾಣಮಂಟಪದಲ್ಲಿ ಸ್ಟಾರ್ ಫಿಜನ್ ಕ್ಲಬ್ ಕಮೀಟಿ ವತಿಯಿಂದ ಪಾರಿವಾಳ ಹಾರಾಟದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರತಿಯೊಬ್ಬರೂ ಒಂದೊಂದು ಕಲೆಯಲ್ಲಿ ಪರಿಣತಿ ಹೊಂದಿರುತ್ತಾರೆ. ಅದರಲ್ಲಿ ಪಾರಿವಳಗಳನ್ನು ಸಾಕಿ ಅವುಗಳಿಗೆ ಮಾತಿಗೆ ತಕ್ಕಂತೆ ನಡೆದುಕೊಳ್ಳಲು ಕಲಿಸಿ ಆಕಶದಲ್ಲಿ ಗಂಟೆಗಟ್ಟಲೇ ಹಾರಾಡಿಸುವುದೆಂದರೆ ಸಾಮಾನ್ಯವಾದ ಕಲೆಯಲ್ಲ. ಅಂಥಹ ವಿಶಿಷ್ಠ ಹಾಗೂ ಪ್ರತಿಭಾವಂತ ಕಲಾವಿದರ ಕಲೆಯ ಬೆಳವಣಿಗೆಗೆ ಎಲ್ಲರೂ ಪ್ರೋತ್ಸಾಹಿಸಬೇಕೆಂದು ಹೊಳಬಸು ಶೆಟ್ಟರ ಹೇಳಿದರು.
3ನೇ ವರ್ಷಕ್ಕೆ ಪಾದಾರೆ್ಣ ಮಾಡಿರುವ ಪಟ್ಟಣದ ಸ್ಟಾರ್ ಫಿಜನ್ ಕ್ಲಬ್ದ ಸಿಕ್ಕಂದರ ಪೆಂಡಾರಿ ಹಾಗೂ ಚಂದ್ರಶೇಖರ ಪತ್ತಾರ ನೇತೃತ್ವದಲ್ಲಿ ನಡೆದ ನಡೆದ ಕಾರ್ಯಕ್ರಮದಲ್ಲಿ ವಿಜೇತ ಪಾರಿವಾಳದ ಮಾಲೀಕರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ಆಕಾಶದಲ್ಲಿ ಪಾರಿವಾಳವನ್ನು 8 ಗಂಟೆ 18 ನಿಮಿಷಗಳ ಕಾಲ ಹಾರಾಡಿಸಿದ ಮುಕ್ಕಪ್ಪ ದಾಸರ ಅವರಿಗೆ ಪ್ರಥಮ ಬುಮಾನ, 7 ಗಂಟೆಗಳ ಕಾಲ ಪಾರಿವಾಳವನ್ನು ಹಾರಾಡಿಸಿದ ಚಂದ್ರಶೇಖರ ಪತ್ತಾರ ಅವರಿಗೆ ದ್ವಿತೀಯ ಹಾಗೂ ನಿಂಗಪ್ಪ ಬೆಣ್ಣೂರ ತೃತೀಯ, ಬಿಲಾಲ ಕೆರೂರ ಅವರಿಗೆ ಚತುರ್ಥ ಹಾಗೂ ಲಕ್ಷ್ಮಣ ಪುಡುರ ಅವರಿಗೆ ಐದನೇ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಮುಬಾರಕ ಮಂಗಳೂರು, ಸಲೀಮ್ ಮೋಮಿನ, ಸಿಕ್ಕಂದರ ಪೆಂಡಾರಿ, ಹುಸೇನಸಾಬ್ ತಹಶೀಲ್ದಾರ, ಬಾಳು ಗೌಳಿ, ಕಲಂದರ ಮುಲ್ಲಾ, ಯಾದಗಿರಿ, ಶಂಕರ ಚವ್ಹಾಣ, ಮೂಕಪ್ಪ ದಾಸರ, ಮುಸ್ತಾಕ ವಂದಾಲ ಮತ್ತಿತರರು ಈ ಕಾರ್ಯಕ್ರಮದಲ್ಲಿ ಇದ್ದರು.