ಕಾಗವಾಡ

ಮಹಿಳೆಯು ಶಾರೀರಿಕ, ಮಾನಸಿಕವಾಗಿ ಸದೃಢವಾಗಿರಲಿ: ಡಾ. ಶಾಲ್ಮಲಿ

ಮಹಿಳೆಯು ಶಾರೀರಿಕ, ಮಾನಸಿಕವಾಗಿ ಸದೃಢವಾಗಿರಲಿ: ಡಾ. ಶಾಲ್ಮಲಿ

ಶೇಡಬಾಳ 15: ಮಹಿಳೆಯು ಶಾರೀರಿಕವಾಗಿ, ಮಾನಸಿಕವಾಗಿ ಸದೃಢವಾದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಮಿರಜದ ನಿರ್ಮಲ ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದ ವೈದ್ಯರಾದ ಡಾ. ಶಾಲ್ಮಲಿ ಕುಲಕರ್ಣಿ  ಹೇಳಿದರು. 

ಅವರು ಸೋಮವಾರ ದಿ. 13 ರಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಿರಜ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಮಹಿಳೆಯು ಇಂದು ಪ್ರತಿಕ್ಷೇತ್ರಗಳಲ್ಲಿಯೂ ಪುರುಷ ಸಮಾನಳಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಅವಳು ಸಾರ್ವಜನಿಕ ಜೀವನದಲ್ಲಿ ಕಾರ್ಯ ನಿರ್ವಹಿಸುವಾಗ ಮಾನಸಿಕವಾಗಿ ಸದೃಢವಾಗಿರುವುದು ಮಹತ್ವದ್ದಾಗಿದೆ. ಪ್ರತಿಯೊಬ್ಬ ಮಹಿಳೆಯು ಸಕಾರಾತ್ಮಕ ಯೋಚನೆ ಮಾಡುತ್ತಾ ಭಾವನೆಗಳ ಮೇಲೆ ನಿಯಂತ್ರಣ ಹೊಂದಿದಾಗ ಅವಳು ಮಾನಸಿಕವಾಗಿ ಸದೃಢವಾಗಲು ಸಾಧ್ಯ. ಯುವತಿಯರು ಶಾರೀರಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವು ಕಾಪಾಡಿಕೊಂಡು ಹೋಗುವುದು ಅತ್ಯವಶ್ಯವಾಗಿದೆ ಎಂದು ಹೇಳಿದರು. 

ಮಿರಜದ ಯಶವಂತ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾದ ವಿನಯಶ್ರೀ ಪಾಟೀಲ, ಡಾ. ವೈಶಾಲಿ ದೇವಶ್ರೀ, ಉಪಪ್ರಾಚಾರ್ಯ ಶುಭಾಂಗಿ ಪಾಟೀಲ, ಡಾ. ಸುವರ್ಣಾ  ಪಾಟೀಲ, ಬಿ.ಯು.ಪಾಟೀಲ ಸೇರಿದಂತೆ ಉಪನ್ಯಾಸಕರು, ವಿದ್ಯಾಥರ್ಿ, ವಿದ್ಯಾಥರ್ಿನಿಯರು ಸಿಬ್ಬಂದಿ ವರ್ಗದವರು ಇದ್ದರು.

ಸುದ್ದಿ ಓದಿ