ಇಂಡಿ

ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಮನವಿ

ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಮನವಿ

ಇಂಡಿ: ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು ಅದನ್ನು ಈ ಕೂಡಲೇ ತಡೆಗಟ್ಟಬೇಕು ಇಲ್ಲವಾದಲ್ಲಿ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಜಿ.ಪಂ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಆಕ್ರೋಶ ಹೊರಹಾಕಿದರು. 

ಬುಧವಾರ ಪಟ್ಟಣದ ಅಬಕಾರಿ ನೀರೀಕ್ಷಕರ ಕಚೇರಿಗೆ ನೂರಾರು ಸಾರ್ವಜನಿಕರೊಂದಿಗೆ ಭಾಗಿಯಾಗಿ ಅಕ್ರಮ ಮದ್ಯ ಮಾರಾಟ ತಡೆಗೆ ಅಬಕಾರಿ ನೀರೀಕ್ಷಕ ಎಂ.ಎಸ್‌. ಪಡಸಲಗಿ ಅವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದರು. 

ತಾಲೂಕಿನಾದ್ಯಂತ ಅವ್ಯಾಹತವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಆದರೆ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಸಾವಿರಾರು ಬಡ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಇಂಡಿ ಸೇರಿದಂತೆ ನಾದ, ತಾಂಬಾ, ತಡವಲಗಾ, ಬಂಥನಾಳ, ಲಚ್ಯಾಣ, ಝಳಕಿ, ಬಳ್ಳೊಳ್ಳಿ, ಹೊರ್ತಿ, ಸಾಲೋಟಗಿ, ಸಂಗೋಗಿ, ಸಾತಲಗಾಂವ, ರೋಡಗಿ, ಖೇಡಗಿ, ಲಾಳಸಂಗಿ ಸೇರಿಸಿದಂತೆ ಹಲವು ಗ್ರಾಮಗಳಲ್ಲಿ ಅಕ್ರಮ ಮಧ್ಯೆ ಮಾರಾಟ ನಡೆಯುತ್ತಿದೆ ಎಂದು ತಿಳಿಸಿದರು. 

ತಾಲೂಕಿನಾದ್ಯಂತ ಕಿರಾಣಿ, ಬೀಡಾ ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದೆ. ಆದರೆ ಸಂಬಂಧಿಸಿದ ಅಬಕಾರಿ ಅಧಿಕಾರಿಗಳು ಅವರ ಮೇಲೆ ಕ್ರಮಕೈಗೊಳ್ಳುತ್ತಿಲ್ಲ. ಎರಡು ದಿನದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯದಿದ್ದರೆ ಸಾವಿರಾರು ಜನ ಸೇರಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. 

ಶಿವಯೋಗೆಪ್ಪ ನೇದಲಗಿ ಜಿ.ಪಂ ಮಾಜಿ ಅಧ್ಯಕ್ಷ. 

ಮನವಿ ಸ್ವೀಕರಿಸಿದ ಅಬಕಾರಿ ಉಪನೀರೀಕ್ಷಕ ಎಂ.ಎಸ್‌. ಪಡಸಲಗಿ ಅಕ್ರಮ ಮದ್ಯದಂಗಡಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಕಲ್ಲಯ್ಯ ಹಿರೇಪಟ್ಟ, ಎಂ.ಎಸ್‌. ಗಿಣ್ಣಿ, ಮಹೇಶ ಹಸನಾಪೂರ, ಸಿದ್ದಾರಾಮ ಈಶ್ವರಗೊಂಡ, ಎಸ್‌.ಎ. ಲೋಣಿ, ವಿಠ್ಠಲ ತೆನ್ನೆಳ್ಳಿ,  ಚನ್ನಪ್ಪ ಪಡಗಾನೂರ, ಎಚ್‌.ಎಲ್‌. ಹಂಜಗಿ, ಡಿ.ಎಸ್‌. ಸಾಲೋಟಗಿ, ಎಸ್‌.ಎಸ್‌. ನಂದಾಗೋಳ, ಮಹೇಶ ಚಾಂದಕವಠೆ ಮತ್ತಿತರರು ಇದ್ದರು. 


ಸುದ್ದಿ ಓದಿ