ಬೈಲಹೊಂಗಲ

ವಕೀಲ ಈರಣಗೌಡ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಮನವಿ

ವಕೀಲ ಈರಣಗೌಡ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಮನವಿ

ಬೈಲಹೊಂಗಲ 12: ಕಲಬುರಗಿಯಲ್ಲಿ ವಕೀಲ ಈರಣಗೌಡ ಪಾಟೀಲ ಹತ್ಯೆ ಖಂಡಿಸಿ ಪಟ್ಟಣದ ನ್ಯಾಯವಾದಿಗಳು ನ್ಯಾಯಾಲಯದ ಕಲಾಪದಿಂದ ದೂರ ಉಳಿದು  ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ವಕೀಲರ ರಕ್ಷಣಾ ಕಾರ್ಯ ಜಾರಿಗೆ ತರಬೇಕು  ಎಂದು ಒತ್ತಾಯಿಸಿ ಸೋಮವಾರ ಉಪವಿಭಾಗಾಧಿಕಾರಿ ಪ್ರಭಾವತಿ ಎಫ್  ಅವರ ಮೂಲಕ ಮುಖ್ಯಮಂತ್ರಿಗಳಿಗೆ  ಮನವಿ ಸಲ್ಲಿಸಿದರು. 

ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ    ಎ  ಎಂ ಸಿದ್ರಾಮನಿ ಮಾತನಾಡಿ,  ವಕೀಲರ ಮೇಲೆ ದಿನದಿಂದ ದಿನಕ್ಕೆ ಪೊಲೀಸರ ದೌರ್ಜನ್ಯ, ದೈಹಿಕ ಹಿಂಸೆ, ಇತರೇ ವ್ಯಕ್ತಿಗಳಿಂದ ಕೊಲೆ ಬೆದರಿಕೆ ನಡೆಯುತ್ತಿದ್ದು ವಕೀಲರಿಗೆ  ರಕ್ಷಣೆಯೇ ಇಲ್ಲದಂತಾಗಿದೆ. ಪದೇ ಪದೇ ವಕೀಲರ ಮೇಲೆ ಹಲ್ಲೆ ಹಾಗೂ ಹತ್ಯೆ ನಡೆಯುತ್ತಿದ್ದು ವಕೀಲರಿಗೆ ಸೂಕ್ತ ರಕ್ಷಣೆಗೆ ತಕ್ಷಣವೇ ರಾಜ್ಯ ಸರ್ಕಾರ ಧಾವಿಸಬೇಕು. ವಕೀಲರ ರಕ್ಷಣಾ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುವಂತೆ ಒತ್ತಾಯಿಸಿದರು. 

ನ್ಯಾಯವಾದಿಗಳಾದ ಎಸ್ ವಿ ಬೆಳಗಾವಿ, ಎಸ್ ಬಿ ಹಣ್ಣಿಕೇರಿ, ಐಎಂ ಗುಡದಮ್ಮನವರ, ಐ ಎಂ ಅನಿಗೋಳ, ಪಿ ಬಿ ದೇಸಾಯಿ, ಝ. ಎ ಗೋಕಾಕ,ಆರ್ ಎ ಪಾಟೀಲ, ಡಿ ಆರ್ ಜೋಶಿ, ಎಸ್ ಟಿ ಮಲ್ಲಾರಿ, ಬಿ ಜಿ ಹಮ್ಮಣ್ಣವರ, ಸಿ ಎಸ್ ಚಿಕ್ಕನಗೌಡರ, ಎಸ್ ಐ ಪಾಟೀಲ,ಪಿ ಡಿ ಮರಕಟ್ಟಿ, ಆರ್ ಎಫ್ ಕುರುಬರ,ವಿಜಯಲಕ್ಷ್ಮೀ ಹಿರೇಮಠ, ಎಸ್ ಬಿ ಬಡಿಗೇರ, ಎ ಎಂ ಕಾರೆಕಾಜಿ, ಎಂ ಜಿ ತಳವಾರ, ಎ ಎ ಕರಾಡೆ, ಆರ್ ಬಿ ರುದ್ರಾಪುರ, ಆರ್ ಎಸ್ ಗೌಡರ, ಬಿ ಬಿ ದೋತ್ರದ, ಸಕ್ಲೇನ ನದಾಫ, ಆರ್ ಎಸ್ ಪಟ್ಟಣಶೆಟ್ಟಿ, ಎಸ್ ಪಿ ಕುಲಕರ್ಣಿ, ಜಗಜಂಪಿ, ಶಫೀ ಅಂಕಲಗಿ ಅನೇಕರು ಇದ್ದರು. 


ಸುದ್ದಿ ಓದಿ