ರಾಣೆಬೆನ್ನೂರ

ಕ್ರೀಡಾ ಚಟುವಟಿಕೆಯಿಂದ ವ್ಯಕ್ತಿತ್ವ ನಿರ್ಮಾಣ: ಮುಲ್ಕಿಗೌಡರ

ಕ್ರೀಡಾ ಚಟುವಟಿಕೆಯಿಂದ ವ್ಯಕ್ತಿತ್ವ ನಿರ್ಮಾಣ: ಮುಲ್ಕಿಗೌಡರ

ರಾಣೇಬೆನ್ನೂರು 06:  ವಿದ್ಯಾರ್ಥಿಗಳು, ಮಾನಸಿಕ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಕ್ರೀಡಾ ಚಟುವಟಿಕೆಗಳು ಅಳವಡಿಸಿಕೊಳ್ಳಬೇಕಾದ ಇಂದಿನ ಬಹು ಅಗತ್ಯವಾಗಿದೆ ಎಂದು ಇಟಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್ ಬಿ ಮುಲ್ಕಿಗೌಡರ ಹೇಳಿದರು. ಅವರು ಇಟಗಿ,ಗ್ರಾಮದ, ಸರಕಾರಿ ಪ್ರೌಢಶಾಲೆಯ, ವಿದ್ಯಾರ್ಥಿಗಳು, ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ  ಭಾಗವಹಿಸಿ, ತಮ್ಮ ಕ್ರಿಡಾ ಸಾಧನೆ ಮೆರೆದು, ರಾಜ್ಯಮಟ್ಟಕ್ಕೆ, ಆಯ್ಕೆಯಾದ ಕಾರಣ, ಆಯೋಜಿಸಿದ್ದ,, ಗೌರವ ಸಮರ​‍್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಭವಿಷ್ಯದಲ್ಲಿ ಶಿಕ್ಷಣ ಬದುಕನ್ನು ಕಟ್ಟಿಕೊಟ್ಟರೆ, ಕ್ರೀಡೆ, ವ್ಯಕ್ತಿತ್ವ ನಿರ್ಮಾಣದ ಜೊತೆಗೆ, ನೌಕರಿ ಮಾಡಲು ಸಹಕಾರಿಯಾಗುತ್ತದೆ. ಅಷ್ಟೇ ಅಲ್ಲದೆ ಸಮಾಜದಲ್ಲಿ, ಮಾನ ಸನ್ಮಾನ, ಜೊತೆಗೆ ವ್ಯಕ್ತಿತ್ವ ನಿರ್ಮಾಣಕ್ಕೆ ತುಂಬಾ ಸಹಕಾರಿಯಾಗುತ್ತದೆ ಎಂದರು. ಎತ್ತರ ಜಿಗಿತದಲ್ಲಿ   ಸಾಧಕ ವಿದ್ಯಾರ್ಥಿನಿ ಪ್ರಿಯಾಂಕಾ ಚೌಡಕಿ ಮತ್ತು ವಿಶೇಷ ಚೇತನ ಗುಂಡು ಮತ್ತು ಬರ್ಚಿ ಎಸೆತದಲ್ಲಿ ( ಪ್ರಥಮ ) ರೇವಣಸಿದ್ದಪ್ಪ ಹರಪನಹಳ್ಳಿ ಇವರಿಗೆ ಸೂಕ್ತ ಮಾರ್ಗದರ್ಶನ ನೀಡಿದ  ದೈಹಿಕ ಶಿಕ್ಷಣ ಶಿಕ್ಷಕ, ಎಚ್‌ಎಸ್ ಹುಡೇದ ಅವರು, ನಮ್ಮ ಶಾಲೆ ವಿದ್ಯಾರ್ಥಿಗಳಿಂದ, ಗ್ರಾಮಕ್ಕೆ ಕೀರ್ತಿ ಬಂದಂತಾಗಿದೆ. ಶಾರೆಯ ಮಕ್ಕಳಿಗೆ ಸೂಕ್ತ ತರಬೇತಿ ನೀಡಿದರೆ, ಇಲ್ಲಿನ ಮಕ್ಕಳು  ಮತ್ತಷ್ಟು ಸಾಧನೆ ಮಾಡುವ ಸಾದ್ಯತೆ ಇದೆ. ಎಂದ ಅವರು, ಗ್ರಾಮದ ಈ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಹಿಂದೆ ಅನೇಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮೆರೆದಿದ್ದಾರೆ, ನೀರೀಕ್ಷೆಯಂತೆ ನಮ್ಮ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಸಾಧನೆ ಮೆರೆದಿರುವುದು, ಸಂತೋಷವಾಗಿದೆ ಎಂದರು. ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ, ಈ ವಿದ್ಯಾರ್ಥಿಗಳ ಕ್ರೀಡಾಕೂಟವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆಯಲಿದೆ. ಅವರಿಗೆ ಮತ್ತಷ್ಟು ಹೆಚ್ಚಿನ ತರಬೇತಿಯನ್ನು ನೀಡಿ ಮತ್ತಷ್ಟು ಪ್ರೋತ್ಸಾಹವನ್ನು ನೀಡಲಾಗುವುದು ಎಂದರು. ಗೌರವ ಸಮರಾ​‍್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ,   ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಕ್ರೀಡಾ  ಅಭಿಮಾನಿಗಳು ಶಾಲಾ ಶಿಕ್ಷಕರು, ಮತ್ತು ಗ್ರಾಮಸ್ಥರು ಸಾಧಕ ವಿದ್ಯಾರ್ಥಿಗಳಿಗೆ, ಶುಭ ಹಾರೈಸಿ ಗೌರವಿಸಿದರು. 


ಸುದ್ದಿ ಓದಿ