ಸಾಧನೆ ಮಾಡಬೇಕಾದರೆ ನಿರಂತರವಾದ ಪ್ರಯತ್ನ ಬಹಳ ಮುಖ್ಯ: ಗಿಣ್ಣಿ
ಇಂಡಿ: ಯಾವುದೇ ಒಂದು ಕ್ಷೇತ್ರದಲ್ಲಿ ನಾವು ಸಾಧನೆ ಮಾಡಬೇಕಾದರೆ ನಿರಂತರವಾದ ಪ್ರಯತ್ನ ಬಹಳ ಮುಖ್ಯ. ಅಂತಹ ಸಾಧಕರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ನಿಜವಾಗಿಯೂ ಇದೊಂದು ಉತ್ತಮ ಕಾರ್ಯಕ್ರಮ ಎಂದು ಪ್ರೌಢ ಶಾಲಾ ಶಿಕ್ಷಕ ರವಿ ಗಿಣ್ಣಿ ಹೇಳಿದರು.
ಇತ್ತೀಚೆಗೆ ತಾಲ್ಲೂಕಿನ ಹಿರೇರೂಗಿ ಗ್ರಾಮದ ಸ್ನೇಹ ಜ್ಯೋತಿ ಪ್ರವಾಸಿ ಸಂಘ ಆಶ್ರಯದಲ್ಲಿ ಹಮ್ಮಿಕೊಂಡ ವಿವಿಧ ಕ್ಷೇತ್ರದಲ್ಲಿ ಸಾಧನಗೈದ ಸಾಧಕರ ಸನ್ಮಾನ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
1500 ಮೀಟರ್ ಓಟದಲ್ಲಿ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದಲ್ಲಿ ವಿಜಯಶಾಲಿ ಹೊಂದಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಕುಮಾರಿ ಆರತಿ ಮಠಪತಿ, ಮರಗಾಲವನ್ನು ಕಟ್ಟಿಕೊಂಡು ಶ್ರೀಶೈಲದವರೆಗೂ ಪಾದಯಾತ್ರೆ ಮಾಡಿರುವ ಕುಮಾರ ಶಿವಾನಂದ ಗಿಣ್ಣಿ ಹಾಗೂ 39 ವರ್ಷ ವರ್ಷಗಳವರೆಗೆ ಏಖಖಖಿಅ ಚಾಲಕರಾಗಿ ಸೇವೆ ಸಲ್ಲಿಸಿ ಯಶಸ್ವಿಯಾಗಿ ನಿವೃತ್ತಿ ಹೊಂದಿರುವ ಶ್ರೀಮಂತ ಜಮಾದರ ಅವರಿಗೆ ಸನ್ಮಾನಿಸಲಾಯಿತು.
ರಾಜಕುಮಾರ ನಿಂಬರಗಿ ಮತ್ತು ನಿವೃತ ಮುಖ್ಯ ಶಿಕ್ಷಕ ಬಿ.ಎಸ್. ತಳವಾರ ಮಾತನಾಡಿ, ಸಂಘದಿಂದ ಮುಂದಿನ ಕ್ರೀಡಾ ಜೀವನಕ್ಕೆ ಅನಕೂಲವಾಗಲೆಂದು ವಿಧ್ಯಾರ್ಥಿನಿಗೆ ಸನ್ಮಾನ ಹಾಗೂ ಧನಸಹಾಯವನ್ನು ನೀಡಿದ್ದು ವಿಶಾಲ ಹೃದಯವಂತಿಕೆಗೆ ಸಾಕ್ಷಿಯಾಗಿದೆ ಎಂದರು. ಎಲೆಮರೆಕಾಯಿಯಂತೆ ಇರುವ ಈ ಸಂಘವು ಈ ಗ್ರಾಮದ ಸಾಧಕರನ್ನು ಸನ್ಮಾನಿಸುವ ಕಾರ್ಯದಲ್ಲಿ ಹಾಗೂ ಪ್ರೋತ್ಸಾಹಿಸುವ ಕೆಲಸದಲ್ಲಿ ನಿರತರಾಗಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ವಿವರಿಸಿದರು.
ಸಂಘದ ಉದ್ದೇಶ ಹಾಗೂ ಸಂಘದ ಕಾರ್ಯ ಚಟುವಟಿಕೆಗಳು, ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥದಿಂದ ಸಂಘ ತನ್ನ ಕಾರ್ಯವನ್ನು ನಿರಂತರವಾಗಿ ಮುನ್ನಡೆಸುತ್ತಾ ಹೋಗಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಗುರುಪಾದ ದಳವಾಯಿ, ಸದಸ್ಯ ಮಂಜುನಾಥ್ ತೇಲಿ, ಮಹೇಶ ಮಡಿವಾಳ, ಸಾಯಬಣ್ಣ ಗುಂಜುಟಗಿ, ರಾಜಕುಮಾರ ರೋಡಗಿ, ರಾಜಕುಮಾರ ನಿಂಬರಗಿ, ಮಂಜುನಾಥ ಹೋಟಗಿ, ಗಜಾನಂದ ಗಿಣ್ಣಿ, ಶ್ರೀಶೈಲ್ ಗುನ್ನಾಪುರ್, ಶರಣಬಸು ಹಡಪದ, ಸುನೀಲ ರೂಗಿ, ನಿಂಗು ಗಿಣ್ಣಿ, ಶಿವಕುಮಾರ್ ತೇಲಿ, ಶಿವಪುತ್ರಯ್ಯ ಮಠಪತಿ, ಸೋಮಯ್ಯ ಮಠಪತಿ, ರವಿ ಕರಜಗಿ, ಆಕಾಶ ಗಿಣ್ಣಿ, ಪ್ರವಿಣ್ ನಿಂಬರಗಿ ಗ್ರಾಮದ ಮುಖಂಡರು ಅನೇಕರು ಉಪಸ್ಥಿತರಿದ್ದರು.ತಾಲ್ಲೂಕಿನ ಹಿರೇರೂಗಿ ಗ್ರಾಮದ ಸ್ನೇಹ ಜ್ಯೋತಿ ಪ್ರವಾಸಿ ಸಂಘ ಆಶ್ರಯದಲ್ಲಿ ಹಮ್ಮಿಕೊಂಡ ವಿವಿಧ ಕ್ಷೇತ್ರದಲ್ಲಿ ಸಾಧನಗೈದ ಸಾಧಕರ ಸನ್ಮಾನ ಸಮಾರಂಭದ ಸಾಧಕರನ್ನು ಸನ್ಮಾನಿಸಲಾಯಿತು.