ಕಾಗವಾಡ

ಬಿಎ ಪದವಿ ಶಿಕ್ಷಣಕ್ಕೆ ಅನುಮತಿ; ಸಹಕಾರ ನೀಡಿದ ಶಾಸಕ ರಾಜು ಕಾಗೆರವರಿಗೆ ಅಭಿನಂದನೆ

ಬಿಎ ಪದವಿ ಶಿಕ್ಷಣಕ್ಕೆ ಅನುಮತಿ; ಸಹಕಾರ ನೀಡಿದ ಶಾಸಕ ರಾಜು ಕಾಗೆರವರಿಗೆ ಅಭಿನಂದನೆ

ಕಾಗವಾಡ 14: ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಶಿಕ್ಷಣ ಸಮೂಹ ಸಂಸ್ಥೆಯ ಸನ್ಮತಿ ಪದವಿ ಮಹಾವಿದ್ಯಾಲಯಕ್ಕೆ ಪ್ರಸಕ್ತ ಸಾಲಿಗೆ ಬಿಎ ಪದವಿ ಶಿಕ್ಷಣಕ್ಕೆ ಅನುಮತಿ ದೊರಕಿದ್ದು, ಇದಕ್ಕೆ ಸಹಕಾರ ನೀಡಿದ ಶಾಸಕ ರಾಜು ಕಾಗೆ ಅವರನ್ನು ಸಮಿತಿಯ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ. 

ಸೋಮವಾರ ದಿ. 14 ರಂದು ಶಾಸಕ ರಾಜು ಕಾಗೆ ಅವರ ಗೃಹ ಕಚೇರಿಗೆ ಭೇಟ್ಟಿ ನೀಡಿದ ಸನ್ಮತಿ ಶಿಕ್ಷಣ ಸಮಿತಿಯ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿ ವರ್ಗದವರು, ಶಾಸಕರನ್ನು ಸನ್ಮಾನಿಸಿ, ಅಭಿನಂದಿಸಿದ್ದಾರೆ. ಈ ಸಮಯದಲ್ಲಿ ಸಮಿತಿಯ ಆಡಳಿತ ಮಂಡಳಿಯ ಅಧ್ಯಕ್ಷ ವಿನೋದ ಬರಗಾಲೆ ಮಾತನಾಡಿ, ನಮ್ಮ ಸಂಸ್ಥೆಗೆ ತಮ್ಮ ಸಹಕಾರದಿಂದಾಗಿ ಸನ್ 2024-25 ನೇ ಸಾಲಿನ ಬಿಎ ಪದವಿ ಶಿಕ್ಷಣಕ್ಕೆ ಸರ್ಕಾರದ ಅನುಮತಿ ದೊರಕಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ. 1951 ರಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದಾಗಿ ಸ್ಥಾಪನೆಗೊಂಡಿರುವ ಸನ್ಮತಿ ಶಿಕ್ಷಣ ಸಮಿತಿಯು ಈಗಾಗಲೇ ಶೇಡಬಾಳ ಪಟ್ಟಣದಲ್ಲಿ ಪ್ರೌಢ ಶಿಕ್ಷಣ, ಪದವಿ ಪೂರ್ವ, ಪದವಿ ವಾಣಿಜ್ಯ ವಿಭಾದಲ್ಲಿ ಶಿಕ್ಷಣ ನೀಡುತ್ತಿದ್ದು, ಜೊತೆಗೆ ಬೆಳಗಾವಿಯಲ್ಲಿಯೂ ಪೂರ್ವ ಪ್ರಾಥಮಿಕದಿಂದ ಹಿಡಿದು ಪದವಿಯ ವರೆಗೆ ಶಿಕ್ಷಣ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಶೇಡಬಾಳ ಪಟ್ಟಣದಲ್ಲಿ ಕಲಾ (ಬಿಎ) ವಿಭಾಗದ ಶಿಕ್ಷಣವನ್ನು ನೀಡಲಾಗುವುದು.  

ಶಾಸಕರು ನಮ್ಮ ಸಂಸ್ಥೆಗೆ ಸದಾ ಸಹಕಾರ ನೀಡುತ್ತಾ ಬಂದಿದ್ದು, ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಸನ್ಮತಿ ಶಿಕ್ಷಣ ಸಮಿತಿಯು ಉನ್ನತವಾಗಿ ಬೆಳೆಯುತ್ತಿದೆ ಎಂದರು. 

ಈ ಸಮಯದಲ್ಲಿ ಸನ್ಮತಿ ಸಹಕಾರ ಶಿಕ್ಷಣ ಸಮಿತಿಯ ಅಧ್ಯಕ್ಷ ವಿನೋಧ ಬರಗಾಲೆ, ಉಪಾಧ್ಯಕ್ಷ ಅಜೀತ ನಾಂದ್ರೆ, ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಬಿ.ಡಿ. ಬನಜವಾಡೆ, ಸೇರಿದಂತೆ ಸನ್ಮತಿ ಸಹಕಾರ ಶಿಕ್ಷಣ ಸಮಿತಿಯ ಆಡಳಿತ ಮಂಡಳಿಯ ನಿರ್ದೇಶಕರು, ಸದಸ್ಯರು, ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ