ಜಮಖಂಡಿ

ಕೆಸರು ಗದ್ದೆಯಾದ ರಸ್ತೆ: ಜನರು ಆಕ್ರೋಶ

ಕೆಸರು ಗದ್ದೆಯಾದ ರಸ್ತೆ:  ಜನರು ಆಕ್ರೋಶ

ಜಮಖಂಡಿ  23:  ನಗರದ ದಾನಮ್ಮ ಬಡಾವಣೆಯ ನಿವಾಸಿಗಳಾದ ನಮ್ಮ ಗೋಳು ಕೇಳುವರು ಯಾರು,? ನಾವು ನಮ್ಮ ದೇಶದಲ್ಲಿ ಇದ್ದೇವಾ,? ಅಥವಾ ಬೇರೆ ದೇಶದಲ್ಲಿ ಇದ್ದೇವಾ ಎಂದು ಶಾಸಕ ಮತ್ತು ಅಧಿಕಾರಿಗಳನ್ನು ಪ್ರಶ್ನಿಸಿದ ದಾನಮ್ಮ ಬಡಾವಣೆಯ ನಿವಾಸಿಗಳು. 

ಸರಿಸುಮಾರು 20 ವರ್ಷಗಳ ಕಾಲವಾಗಿ ದಾನಮ್ಮ ಬಡಾವಣೆಯಲ್ಲಿ ವಾಸವಾಗಿದ್ದು. ಪ್ರತಿವರ್ಷ ಮಳೆಗಾಲ ಬಂದರೆ ಸಾಕು. ಕೆಸರು ಗದ್ದೆಯಾಗುತ್ತಿರುವ ರಸ್ತೆಗಳು. ಶಾಲಾಮಕ್ಕಳಿಗೆ ಹಾಗೂ ವಯೋವೃದ್ದರು ರಸ್ತೆ ಮೇಲೆ ಹಾಯ್ದು ಹೋಗಲು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಸರಿಯಾದ ಶುದ್ಧಕುಡಿಯುವ ನೀರು ಬರುವುದಿಲ್ಲ. ಎಲ್ಲಿ ನೋಡಿದರಲ್ಲಿ ಕಸದ ರಾಶಿ, ತೆಗ್ಗು, ಗುಂಡಿಗಳಾಗಿರುವ ರಸ್ತೆಗಳು ಹೀಗೆ ಹಲವಾರು ಸಮಸ್ಯೆಗಳನ್ನು ಎದ್ದುರಿಸುತ್ತಾ ಜೀವನ ಸಾಗಿಸುವ ಪರಿಸ್ಥಿತಿ ಬಂದಿದೆ ಎಂದು ಅಲ್ಲಿನ ನಿವಾಸಿಗಳ ಅಳಲು. 

ಆಕ್ರೋಶ ವ್ಯಕ್ತ ಪಡಿಸಿದ ನಿವಾಸಿಗಳು : 

ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಶಾಸಕ ಜಗದೀಶ ಗುಡಗುಂಟಿ ಅವರ ಗಮನಕ್ಕೆ ತಂದರು ಪ್ರಯೋಜನವಾಗುತ್ತಿಲ್ಲ. ಚುನಾವಣೆ ಸಮಯದಲ್ಲಿ ಬಂದ ಶಾಸಕರು ಮತ್ತೇ ದಾನಮ್ಮ ಬಂಡಾವಣೆಯ ನಿವಾಸಿಗಳ ಕಡೆಗೆ ಬಂದೆ ಇಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ಆಲಿಸದೆ ಇದ್ದಾರೆ ಎಂದು ಆರೋಪಿಸಿ, ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. 

ಡೆಂಗ್ಯು, ಚಿಕ್ಕನ ಗುನ್ಯಾ ಕಾಟ : 

ಕಸರಾಶಿಯಿಂದ ಚಿಕ್ಕಮಕ್ಕಳಿಗೆ ವಯೋವೃದ್ದರಿಗೆ ಸೊಳೆ ಕಾಟ್ಟದಿಂದ ಮಲೇರಿಯಾ, ಡೆಂಗ್ಯು, ಚಿಕ್ಕನ ಗುನ್ಯಾ ರೋಗದಿಂದ ಬಳಲುತ್ತಿದ್ದೇವೆ. ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೇಳುತ್ತಾರೆ. ಆದರೆ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಜನತೆಗೆ ತಲುಪುತ್ತಿಲ್ಲ. ಇದರಿಂದ ವಿವಿಧ ಬಗ್ಗೆಯ ರೋಗದಿಂದ ಬಳಲುವ ಪರಿಸ್ಥಿತಿ ಬಂದಿದೆಂದು ಅಧಿಕಾರಿಗಳಿಗೆ ಶಾಪ ಹಾಕಿದರು. 

ನಾವು ನಮ್ಮ ದೇಶದಲ್ಲಿ ಇದ್ದೇವಾ : 

ದಾನಮ್ಮ ಬಡಾವಣೆಯ ನಿವಾಸಿಗಳು ಸಂಬಂಧಪಟ್ಟ ನಗರಸಭೆಗೆ ನಮ್ಮ ಸಮಸ್ಯೆಯ ಕುರಿತು ಹೇಳಲು ಹೋದರೆ, ಅಲ್ಲಿನ ಅಧಿಕಾರಿಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನೀವುಗಳು ಕುಂಬಾರಹಳ್ಳ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುತ್ತಿರಿ ಎಂದು ಹೇಳುತ್ತಾರೆ. ಕುಂಬಾರಹಳ್ಳ ಗ್ರಾಮ ಪಂಚಾಯತ ಅಧಿಕಾರಿಗಳನ್ನು ಕೇಳಿದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಶಾಸಕರ ಕಡೆಗೆ ಬೆರಳು ತೊರಿಸುತ್ತಾರೆ. ಹಾಗಾದರೆ ನಾವುಗಳು ನಮ್ಮ ದೇಶದಲ್ಲಿ ಇದ್ದೇವಾ,,? ಅಥವಾ ಬೇರೆ ದೇಶದಲ್ಲಿ ಇದ್ದೇವಾ ಎಂಬ ಪ್ರಶ್ನೇ ನಮ್ಮನ್ನು ಕಾಡುತ್ತಿದೆ ಎಂದು ಅಲ್ಲಿನ ನಿವಾಸಿಯಾದ ನಿವೃತ್ತ ಅಧಿಕಾರಿಯೊಬ್ಬರು ನಮ್ಮ ಪ್ರಶ್ನೇಯಾಗಿಯೇ ಉಳಿದಿದೆ ಎಂದರು. 

ಮೂಲಭೂತ ಸೌಕರ್ಯಗಳಿಂದ ವಂಚಿತ :  

ಸರಿಯಾದ ರಸ್ತೆಗಳು ಇಲ್ಲ, ಶುದ್ದಕುಡಿಯುವ ನೀರು ಬರುತ್ತಿಲ್ಲ, ವಿದ್ಯುತ್ ಸರಿಯಾಗಿ ಬರುತ್ತಿಲ್ಲ ಹೀಗೆ ಹಲವಾರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿದರು ಕ್ಯಾರೆ ಮಾಡುತ್ತಿಲ್ಲ ಎಂದರು. 

ಮನವಿ : 

ಜಿಲ್ಲಾಧಿಕಾರಿ, ತಾಲೂಕಮಟ್ಟದ ಅಧಿಕಾರಿಗಳು,ಶಾಸಕರಿಗೆ ಸಾಕಷ್ಟು ಬಾರಿ ಮನವಿ ಸಲಿಸಿದರು ಪ್ರಯೋಜವಾಗುತ್ತಿಲ್ಲ. ನಮ್ಮ ಸಮಸ್ಯೆಯನ್ನು ಯಾರು ಮುಂದೆ ಹೇಳಬೇಕು. ಸ್ಥಳೀಯ ಶಾಸಕ ಜಗದೀಶ ಗುಡಗುಂಟಿ ಅವರ ಗಮನಕ್ಕೆ ತಂದರು ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗುತ್ತಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. 

ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಉಮೇಶ ಆಲಮೇಲಕರ,ಎ,ಎಸ್,ಪಡಗಾನೂರ, ಡಿ,ಎ,ಗಲಗಲಿ, ಚಂದ್ರಶೇಖರ ದೊಡಮನಿ, ಲಕ್ಷ್ಮೀ ಡಾಲನ್ನವರ, ಗಂಗು ನಂದೇಶ್ವರ, ಸಿಂಧು ಆಲಮೇಲಕರ, ಸುಜಾತಾ ಝಂಜರವಾಡ, ಜಯಶ್ರೀ ಕದಮ, ದೀಪಾ ಮುದಿಗೌಡರ, ಕಲ್ಪನಾ ನ್ಯಾಮಗೌಡ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ