ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ: ಸಿದ್ದರಾಮಯ್ಯ
ಕಾಗವಾಡ 26: ರಾಜ್ಯದ ಜನತೆ ಬದಲಾವಣೆ ಬಯಸಿದ್ದು ಎಲ್ಲ ಕಡ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಅವರು ಉಗಾರ ಖುರ್ದ ವಿಹಾರ ಮೈದಾನದಲ್ಲಿ ಕಾಗವಾಡ ವಿಧಾನ ಸಭಾ
ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಹಾಗೂ ಮಾಜಿ ಶಾಸಕ ರಾಜು ಕಾಗೆಯವರು ಪರ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡುತ್ತಾ ರಾಜ್ಯದಲ್ಲಿರುವ ಸರಕಾರ ಜನವಿರೋಧಿ ಹಾಗೂ ಭ್ರಷ್ಟ ಸರಕಾರವಾಗಿದ್ದು, ಇದನ್ನು ಬದಲಿಸಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರುವದು ರಾಜ್ಯದ ಜನತೆಯ ಅಭಿಲಾಷೆಯಾಗಿದೆ.
ನನ್ನ ಐದು ವರ್ಷಗಳ ಆಡಳಿತದಲ್ಲಿ ಜನಪರ ಕಾರ್ಯಕ್ರಮಗಳನ್ನು ಎಲ್ಲ ಸಮಾಜದ ಬಡ ಜನರಿಗೆ ಕೊಟ್ಟಿದ್ದೇನೆ. ನಮ್ಮ ಸರಕಾರ ನುಡಿದಂತ ನಡೆದು ಜನತೆಗೆ ನೀಡಿದ 165 ಭರವಸೆಗಳಲ್ಲಿ 151 ಭರವಸೆಗಳನ್ನು ಈಡೇರಿಸಿ ಬಡವರ ಬದುಕನ್ನು ಹಸನು ಮಾಡಿದ್ದೇನೆ.ಎಂದರು.
ಕೆಪಿಸಿಸಿ ಕಾಯರ್ಾಧ್ಯಕ್ಷ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ, ಮಾಜಿ ಸಚಿವ ಲಕ್ಷ್ಮಣ ಸವದಿ ಮಾತನಾಡಿದರು. ಕಾಂಗ್ರೆಸ್ ಅಭ್ಯಥರ್ಿ, ರಾಜು ಕಾಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಧಾನಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮಾಜಿ ಶಾಸಕ ಮೋಹನರಾವ್ ಶಹಾ, ಗಜಾನನ ಮಂಗಸೂಳಿ, ಅಜೀತ ಚೌಗಲಾ, ದಿಗ್ವವಿಜಯ ಪವಾರ ದೇಸಾಯಿ, ವಿನಾಯಕ ಬಾಗಡೆ, ರವಿಂದ್ರ ಪೂಜಾರಿ, ಸಿದ್ಧಾರ್ಥ ಸಿಂಗೆ, ರಾವಸಾಬ ಐಹೊಳೆ, ಅರುಣ ಗಾಣಿಗೇರ, ವಿಜಯ ಅಕಿವಾಟೆ, ಮದಭಾವಿ ಖಂಡೇರಾವ ಘೋರ್ಪಡೆ ಸರಕಾರ, ವಿಶ್ವನಾಥ ಭಂಡಾರೆ ವಕೀಲರಾದ ಶಿವಾಜಿ ಕಾಂಬಳೆ, ಬಾಬಾ ಸಾಹೇಬ ಅಭ್ಯಂಕರ, ಪ್ರವೀಣ ನಾಯಿಕ, ರಾಹುಲ ಕಟಗೇರಿ ಸೇರಿದಂತೆ ಪಕ್ಷದ ಎಲ್ಲ ಮುಖಂಡರು ಕಾರ್ಯಕರ್ತರು ಇತರರು ಇದ್ದರು.