ಅಪಘಾತಗಳ ಹೆದ್ದಾರಿಯಗುತ್ತಿದೆ ಕಾಗವಾಡ-ಅಥಣಿ ರಸ್ತೆ
ಅದೇ ರಸ್ತೆಯಲ್ಲಿಯೇ ಕಣ್ಮುಚ್ಚಿ ಪ್ರಯಾಣಿಸುತ್ತಿರುವ ಜನಪ್ರತಿಧಿಗಳು, ಅಧಿಕಾರಿಗಳು..!!
ಕಾಗವಾಡ 09: ಪಟ್ಟಣದಿಂದ ಅಥಣಿ ಕಡೆಗೆ ಹೋಗುವ ಹೆದ್ದಾರಿಯು ಮುರಗುಂಡಿಯ ವರೆಗೆ ಸಂಪೂರ್ಣ ಹೆದಗೆಟ್ಟು ಹೋಗಿದೆ. ರಸ್ತೆಯಲ್ಲಿ ಗುಂಡಿಗಳಿವೇಯೋ..? ಅಥವಾ ಗುಂಡಿಯಲ್ಲಿ ರಸ್ತೆ ಇದಯೋ ಎಂಬಂತಾಗಿದ್ದು, ಈ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಇದೇ ಮಾರ್ಗವಾಗಿ ಪ್ರತಿದಿನ ವಿಜಯಪೂರದಿಂದ ಬೆಳಗಾವಿ ಸೇರಿದಂತೆ ಮಹಾರಾಷ್ಟ್ರದ ಇನ್ನೂಳಿದ ಪ್ರಮುಖ ನಗರಗಳಿಗೆ ಸಂಚರಿಸುವ ಸಾವಿರಾರು ಬಸ್ಗಳಲ್ಲಿಯ ಪ್ರಯಾಣಿಕರು, ಚುನಾಯಿತ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಚುನಾಯಿತ ಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ನೇರವಾಗಿ ಪ್ರಶ್ನಿಸುತ್ತಿದ್ದಾರೆ.
ಸುಮಾರು 2 ರಿಂದ 3 ಅಡಿ ವರೆಗೆ ಗುಂಡಿಗಳು ನಿರ್ಮಾಣಗೊಂಡಿದ್ದು, ವಾಹನ ಸವಾರರು ಮಳೆಯ ನೀರಿನಿಂದ ಗುಂಡಿಗಳು ತುಂಬಿ, ಗುಂಡಿಯ ಆಳ ಗೊತ್ತಾಗದೇ ಅಪಘಾತ ಮಾಡಿಕೊಳ್ಳುತ್ತಿರುವ ಘಟನೆಗಳು ಸಾಮಾನ್ಯವಾಗಿದೆ. ರಾತ್ರಿ ಸಮಯದಲ್ಲಿ ಈ ರಸ್ತೆಗಳಲ್ಲಿ ಪ್ರಯಾಣಿಸುವುದೆಂದರೇ ಬೆಟ್ಟ-ಗುಡ್ಡಗಳಲ್ಲಿ ಟ್ರ್ಯಾಕಿಂಗ್ ಮಾಡಿದ ಅನುಭವ ನೀಡುತ್ತಿದ್ದು, ಸ್ವಲ್ಪ ಯಾಮಾರಿದರೂ ಸ್ವರ್ಗವೇ ಗತಿ ಎಂಬಂತಾಗಿದೆ.
ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನಗೊಂಡಿರುವ ಈ ರಸ್ತೆಯ ಉಸ್ತವಾರಿ ನಿಜವಾಗಿಯೂ ಯಾವ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂಬ ಗೊಂದಲದಲ್ಲಿರುವ ಪ್ರಯಾಣಿಕರು ಒಂದಡೆಯಾದರೇ ಅದನ್ನೆ ಅಸ್ತ್ರವಾಗಿಸಿಕೊಂಡಿರುವ ಅಧಿಕಾರಿಗಳು ಮತ್ತೊಬ್ಬರ ಕಡೆ ಬೊಟ್ಟು ತೋರಿಸಿ, ನೂಣುಚಿಕೊಳ್ಳುತ್ತಿದ್ದಾರೆ.
ಈ ಕುರಿತು ಸಂಬಂಧ ಪಟ್ಟ ಇಲಾಖೆಯವರನ್ನು ಸಂಪರ್ಕಿಸಲು ಪ್ರತಿ ಬಾರಿ ಪ್ರಯತ್ನಿಸಿದರೂ ಯಾವಬ್ಬ ಇಲಾಖೆಯ ಅಧಿಕಾರಿಗಳು ಸಮರಾ್ವಗಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಈ ರಸ್ತೆಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಸ್ಥಳಿಯರಾದ ಕಲಗೌಡಾ ಪಾಟೀಲ ಮತ್ತು ಸಿದಗೌಡಾ ಪಾಟೀಲ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ತಾವೇ ದಿನಾಲೂ ಇದೇ ರಸ್ತೆ ಬಳಸುವ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು. ಜನಪ್ರತಿನಿಧಿಗಳು ದೊಡ್ಡ ಅಪಘಾತ ಆಗುವ ವರೆಗೆ ಕಾದು, ಆಮೇಲೇಯೇ ಎಚ್ಚತ್ತುಕೊಳ್ಳುತ್ತಾರೆಯೇ ಅಥವಾ ಕೂಡಲೇ ಇತ್ತ ಗಮನ ಹರಿಸಿ, ರಸ್ತೆ ದುರಸ್ಥಿಗೆ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದು ಪ್ರಯಾಣಿಕರ ಪ್ರಶ್ನೇಯಾಗಿದೆ.