ಶಿಗ್ಗಾವ್

ತಾಲೂಕ ಪಿಂಜಾರ ಸಂಘದ ತಾಲೂಕ ಅಧ್ಯಕ್ಷರಾಗಿ ಪೀರಸಾಬ್ ನದಾಫ್ ಆಯ್ಕೆ

ತಾಲೂಕ ಪಿಂಜಾರ ಸಂಘದ ತಾಲೂಕ ಅಧ್ಯಕ್ಷರಾಗಿ ಪೀರಸಾಬ್ ನದಾಫ್ ಆಯ್ಕೆ

ಲೋಕದರ್ಶನ ವರದಿ

 ಶಿಗ್ಗಾವಿ 15: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಶಿಗ್ಗಾವಿ ತಾಲೂಕ ಪಿಂಜಾರ ಸಮುದಾಯದ ಸಭೆ ಜರುಗಿತು ಸಭೆಯಲ್ಲಿ ನೂತನ ತಾಲೂಕ ಅಧ್ಯಕ್ಷರ ಆಯ್ಕೆಗೆ ವಿಸ್ತೃತ ಚರ್ಚೆಯಾಗಿ ನೂತನ ತಾಲೂಕ ಅಧ್ಯಕ್ಷರಾಗಿ ಪೀರಸಾಬ್ ನದಾಫ್ ವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹಿರೇಮಣಕಟ್ಟಿ ಗ್ರಾಮದ ಕರೀಂಸಾಬ್ ನದಾಫ್ ಅವರನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ ಪೀರಸಾಬ ನದಾಫ ಮಾತನಾಡಿ  ಸಮಾಜದ ಏಳಿಗೆಗಾಗಿ ನನ್ನ ಸೇವೆ ನಿರಂತರವಾಗಿದ್ದು ಈ ಜವಾಬ್ದಾರಿಯಿಂದ ನನ್ನ ಮೇಲೆ ಜವಾಬ್ದಾರಿ ಹೆಚ್ಚಾಗಿದೆ ತಾಲೂಕಿಗೆ ಧಕ್ಕೆ ಆಗದಂತೆ ಕೆಲಸ ಮಾಡುವುದಾಗಿ ನೂತನ ಅಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದರು.

 ಸಮುದಾಯದ ನಿಕಟಪೂರ್ವ ಅಧ್ಯಕ್ಷ ಶರೀಪಸಾಬ ನದಾಫ್, ತಾಲೂಕ ಕಾರ್ಯದರ್ಶಿ ಹಜಾರೆ ಸಾಬ್ ಬೆಳಗಲಿ, ಪತ್ರಕರ್ತ ಹಜಾರೆ ಸಾಬ್ ಹರಕುಣಿ ಮೌಲಾಲಿ ನದಾಫ್ ದಾದಾ ಕಲಂದರ್ ಹರಕುಣಿ ಮನಸುರಲಿ ನದಾಫ್ ಚಮನ್ ಸಾಬ್ ಗುರುನಳ್ಳಿ ಸಿಕಂದರ್ ನದಾಫ್ ಇಸಾಕ್ಸಾಬ್ ನದಾಫ್ ಮಾಬು ಸಾಬ್ ಬೆಳೆಬಾಳ ಖಾಸಿಂಸಾಬ್ ನದಾಫ್ ತಾಲೂಕಿನ ವಿವಿಧ ಗ್ರಾಮಗಳ ಸಮಾಜದ ಮುಖಂಡರು ಯುವಕರು ಉಪಸ್ಥಿತರಿದ್ದರು 

ಸುದ್ದಿ ಓದಿ