ಕಾಗವಾಡ

ಉಗಾರ ಲೈನ್ಸ್‌ ಕ್ಲಬ್ ಅಧ್ಯಕ್ಷರಾಗಿ ಪಾಟೀಲ ಅಧಿಕಾರ ಸ್ವೀಕಾರ

ಉಗಾರ ಲೈನ್ಸ್‌ ಕ್ಲಬ್ ಅಧ್ಯಕ್ಷರಾಗಿ  ಪಾಟೀಲ  ಅಧಿಕಾರ ಸ್ವೀಕಾರ

ಕಾಗವಾಡ 28: ಉಗಾರ ಲೈನ್ಸ್‌ ಕ್ಲಬ್ ಅಧ್ಯಕ್ಷರಾಗಿ ಕಾಗವಾಡದ ವಿದ್ಯಾವರ್ಧಕ ಶಿಕ್ಷಣ ಸಮಿತಿ ಅಧ್ಯಕ್ಷ ಹಾಗೂ ಕಾಗವಾಡ ಪಿಕೆಪಿಎಸ್ ಅಧ್ಯಕ್ಷ ಜ್ಯೋತಿಕುಮಾರ್ ಸಿದ್ದುಗೌಡ ಪಾಟೀಲ ಇವರನ್ನು ಆಯ್ಕೆ ಮಾಡಲಾಗಿದ್ದು ಜುಲೈ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ. 

ಉಗಾರ್ ಲೈನ್ಸ್‌ ಕ್ಲಬ್ಬಿನ 2022-23 ವರ್ಷಕ್ಕಾಗಿ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭ ಜುಲೈ 1ರಂದು ಸಂಜೆ ಉಗಾರದಲ್ಲಿ ಜರುಗಲಿದೆ. 

ಅಧ್ಯಕ್ಷರಾಗಿ ಜ್ಯೋತಿಕುಮಾರ್ ಪಾಟೀಲ್, ಕಾರ್ಯದರ್ಶಿ ರಾಜೇಂದ್ರ ಪೋತದಾರ್, ಡಾ.ಮೋಹನ್ ಕಟಗೇರಿ, ಹಾಗೂ ಸದಸ್ಯರು ಅಧಿಕಾರ ಸ್ವೀಕರಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಡಿಸ್ಟಿಕ್ ಗೌರ್ನರ್ ಲಾಯನ್ ಅರ್ಲ್‌ಬ್ರಿಟೂ ಆಗಮಿಸಲಿದ್ದಾರೆ ಅಧ್ಯಕ್ಷತೆ ಉಗಾರ್ ಲೈನ್ಸ್‌ ಕ್ಲಬ್ ಅಧ್ಯಕ್ಷ ಡಾ.ಬಾಬಾಗೌಡ ಪಾಟೀಲ ವಹಿಸಲಿದ್ದಾರೆ ಎಂದು ಸಹ ಕಾರ್ಯದರ್ಶಿ ಜಗದೀಶ್ ಪಟವರ್ಧನ್ ತಿಳಿಸಿದರು. 


ಸುದ್ದಿ ಓದಿ