ರಾಣೆಬೆನ್ನೂರ

ಪಾಟೀಲ್ ಪುಟ್ಟಪ್ಪ ಜನ್ಮ ತಪೋ ಭೂಮಿಯಲ್ಲಿ ನಾಲ್ಕನೇ ಪುಣ್ಯ ಸ್ಮರಣೆ

ಪಾಟೀಲ್ ಪುಟ್ಟಪ್ಪ ಜನ್ಮ ತಪೋ ಭೂಮಿಯಲ್ಲಿ ನಾಲ್ಕನೇ ಪುಣ್ಯ ಸ್ಮರಣೆ

ರಾಣೇಬೆನ್ನೂರು 08:  ಸಮಾಜದಲ್ಲಿ ಇದು, ನಾಡು ನುಡಿ, ಕನ್ನಡ ಭಾಷೆ, ನೆಲ, ಜಲ ಮತ್ತು ಕನ್ನಡದ ರಕ್ಷಣೆಗಾಗಿ ನಿರಂತರ ಹೋರಾಟ ಮಾಡಿ ಮಡಿದ, ನಾಡು ಕಂಡ ಅಪರೂಪದ ವ್ಯಕ್ತಿ ಡಾ. ಪಾಟೀಲ್ ಪುಟ್ಟಪ್ಪನವರು ಎಂದು ಬ್ಯಾಡಗಿಯ ಕವಿ, ಸಾಹಿತಿ ಸಂಕಮ್ಮ ಸಂಕಣ್ಣನವರ ಹೇಳಿದರು.       ಅವರು ತಾಲೂಕಿನ ಪಾಪು ಅವರ ಜನ್ಮ ತಪೋಭೂಮಿ, ಹಲಗೇರಿ ಗ್ರಾಮದ, ಸಂಜೀವಿನಿ ಪಾಲಿ ಕ್ಲಿನಿಕ್‌- ಶಿವ ಮೆಡಿಕಲ್ಸ್‌  ಹಲಗೇರಿ ಡೈಗ್ನೋಸ್ಟಿಕ್ ಲ್ಯಾಬ್ ಜಿಲ್ಲಾ ರಕ್ತ ಕೇಂದ್ರ ಆಯೋಜಿಸಿದ್ದ, ಲಿಂ, ಡಾ. ಪಾಟೀಲ್ ಪುಟ್ಟಪ್ಪ ಅವರ 4ನೇ ವರ್ಷದ ಪುಣ್ಯ ಸ್ಮರಣೋತ್ಸವ, ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ 134ನೇ ಜಯಂತೋತ್ಸವ ಮತ್ತು ವಿಶ್ವ ಆರೋಗ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾಪು ಅವರು, ಕನ್ನಡ ನಾಡು ಕಂಡ ಧೀಮಂತ ವೀರ ನಾಯಕ, ಪತ್ರಕರ್ತರಾಗಿ, ಸಾಹಿತಿಯಾಗಿ, ಕನ್ನಡದ ಕಾಯಕವನ್ನು ಮನಸಾ ಅಪ್ಪಿಕೊಂಡು, ತಮ್ಮ ನೇರ ನಡೆ-ನುಡಿಯ ಮೂಲಕ ಸರಕಾರಗಳು ಮಾಡುವ ತಪ್ಪನ್ನು, ಯಾವುದೇ ಮುಲಾಜಿಲ್ಲದೆ ಖಂಡಿಸಿ, ಜಾಗೃತಿಗೊಳಿಸುವ ಮಹತ್ವದ ಕಾರ್ಯದಲ್ಲಿ ಮುಂದಾಗುತ್ತಿದ್ದರು ಎಂದರು.  

ಅಂದು ಅವರು ಮಾಡಿದ ಹೋರಾಟಗಳು, ಯಾವ ಸರಕಾರಗಳು ಮರೆತಿಲ್ಲ, ಮರೆಯುವಂತಿಲ್ಲ. ಸರಕಾರಕ್ಕೆ ಮಾರ್ಗದರ್ಶನ ನೀಡುವ ಮಹಾನ್ ಚೇತನ ಅವರಾಗಿದ್ದರು. ಅವರು ನಮ್ಮ ಜಿಲ್ಲೆಯವರು ಎನ್ನುವುದೇ ನಾಡಿಗೆ ಹೆಮ್ಮೆಯ ಸಂಗತಿ. ಭೌತಿಕವಾಗಿ ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರು ನಾಡಿಗೆ  ಮಾಡಿದ ಜನ ಜಾಗೃತಿಯ ಸೇವೆ ನಮ್ಮೊಂದಿಗೆ ಇಂದಿಗೂ ಇದೆ ಎಂದರು. 

ಮಾಜಿ ಶಾಸಕ ಡಾ.ಬಿ ಜಿ ಪಾಟೀಲ ಅವರು, ಪುಣ್ಯ ಸ್ಮರಣೆಯಲ್ಲಿ ಪಾಲ್ಗೊಂಡ ನಾಡಿನ ಎಲ್ಲ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಸ್ವಾಕರವೇ ರಾಜ್ಯ ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮಿ, ಡಾ.ನಾರಾಯಣ ಪವಾರ, ಆಶಾ ಪಾಟೀಲ್, ಡಾ:ಗಣೇಶ್ ಕುಲಕರ್ಣಿ  ಶಿಲ್ಪಕಲಾ ಅಕಾಡೆಮಿ ಸದಸ್ಯ ಹರೀಶ್ ಮಾಳಪ್ಪನವರ, ಸಿದ್ದಲಿಂಗನಗೌಡ ಪಾಟೀಲ್, ಶಿವಕುಮಾರ ಮುದ್ದಪ್ಪಳವರ, ಸೇರಿದಂತೆ ಮತ್ತಿತರ ಗಣ್ಯರು, ಪಾಟೀಲ್ ಪುಟ್ಟಪ್ಪನವರ, ಅನುಯಾಯಿಗಳು, ಅಭಿಮಾನಿಗಳು, ಉಪಸ್ಥಿತರಿದ್ದರು. ಆರಾಧ್ಯ ಎಸ್‌. ಪಾಟೀಲ್ ಪ್ರಾರ್ಥಿಸಿದರು. ರಶ್ಮಿ ಬಿ ಪಾಟೀಲ ಸ್ವಾಗತಿಸಿದರು. ಸಂಜೀವ್ ಕನವಳ್ಳಿ ನಿರೂಪಿಸಿ, ಗುರನಗೌಡ ಪಾಟೀಲ್, ವಂದಿಸಿದರು.ರಕ್ತದಾನ ಶಿಬಿರದಲ್ಲಿ, ಹಲಗೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು, ನಮ್ಮ ಅಮೂಲ್ಯ ರಕ್ತವನ್ನು ದಾನ ಮಾಡುವುದರ ಮೂಲಕ, ಮಾನವೀಯತೆ ಮೆರೆದರು. 


ಸುದ್ದಿ ಓದಿ