ಎಲ್ಲ ಸ್ಪರ್ಧೆ, ಪುರಸ್ಕಾರ, ಕಾರ್ಯಾಗಾರಗಳಲ್ಲಿ ಭಾಗವಹಿಸಿ ಪ್ರಶಸ್ತಿಗೆ ಭಾಜನರಾಗಿ : ಕುನ್ನೂರ
ಲೋಕದರ್ಶನ ವರದಿ
ಶಿಗ್ಗಾವಿ : ಇಂದಿನ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಎಲ್ಲ ತರಹದ ಸ್ಪರ್ಧೆ, ಪುರಸ್ಕಾರ ಹಾಗೂ ಕಾರ್ಯಾಗಾರಗಳಲ್ಲಿ ಭಾಗವಹಿಸುವಿಕೆ ಜೊತೆಗೆ ಪ್ರಶಸ್ತಿಗೆ ಭಾಜನರಾಗಬೇಕು ಎಂದು ಕುನ್ನೂರ ಇಂಟರನ್ಯಾಶನಲ್ ಆಂಗ್ಲ ಮಾಧ್ಯಮದ ಅಧ್ಯಕ್ಷೆ ಸ್ನೇಹಲತಾ ಕುನ್ನೂರ ಹೇಳಿದರು.
ಪಟ್ಟಣದ ಕುನ್ನೂರ ಇಂಟರನ್ಯಾಶನಲ್ ಆಂಗ್ಲ ಮಾಧ್ಯಮದಲ್ಲಿ ನಡೆದ ಸಿರಿಗನ್ನಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಭಾಗವಹಿಸುವಿಕೆ ಪ್ರಮಾಣ ಬಹಳ ಕಡಿಮೆ ಇರುವುದರಿಂದ ಇಂತಹ ಪ್ರತಿಯೊಂದು ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಸ್ವಾವಲಂಬಿಯಾಗಿ ಬದುಕಿ ಇತರರಿಗೆ ಮಾದರಿಯಾಗಬೇಕು ಎಂದು ಕಿವಿ ಮಾತು ಹೇಳಿದರು.
ಕುನ್ನೂರ ಇಂಟರನ್ಯಾಶನಲ್ ಸಂಸ್ಥೆ ಕಾರ್ಯದರ್ಶಿ ರಾಜು ಕುನ್ನೂರ ಮಾತನಾಡಿ ವಿಧ್ಯಾರ್ಥಿ ಜೀವನ ಬಂಗಾರದ ಜೀವನ ಅನ್ನುತ್ತಾರೆ ಅಂದರೆ ವಿಧ್ಯಾರ್ಥಿ ಜೀವನವನ್ನು ಸದುಪಯೋಗ ಪಡಿಸಿಕೊಂಡು ಯಶಸ್ವಿಯಾದರೆ ಮುಂದೆ ಉನ್ನತ ಹುದ್ದೆಗಳನ್ನು ಅಲಂಕರಿಸಿ ಯಶಸ್ವಿ ಜೀವನ ನಡೆಸಬಹುದು ಮತ್ತು 120 ವಿಧ್ಯಾರ್ಥಿಗಳಲ್ಲಿ 12 ವಿಧ್ಯಾರ್ಥಿಗಳು ರಾ್ಯಂಕು ಪಡೆದು ರಾಜ್ಯ, ಜಿಲ್ಲಾ, ತಾಲೂಕ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದು ಸಂತೋಷ ಅವರೆಲ್ಲರಿಗೂ ಸಹಿತ ಸಂಸ್ಥೆ ಮತ್ತು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದರು.
ಪರೀಕ್ಷೆ ನೇತೃತ್ವವಹಿಸಿ ಮತ್ತು ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಮಾಡಿದ ಶಿಕ್ಷಕಿಯರಾದ ಮಂಜುಳಾ ಪಾಟೀಲ, ಗಾಯತ್ರಿ ದೈವಜ್ಞ ಅವರಿಗೆ ಅಭಿನಂದಿಸಿದರು.
---------------------------------------
ಭಾಕ್ಸ ಸುದ್ದಿ : ಸಿರಿಗನ್ನಡ ಪರೀಕ್ಷೆ ಬರೆದ 120 ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಮತ್ತು ಪದಕ ನೀಡಿ ಗೌರವಿಸಲಾಯಿತು.
ಪ್ರಾಚಾರ್ಯ ಎಸ್.ಹೆಚ್.ಹಾವೇರಿ
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಈರಣ್ಣಾ ಬಡ್ಡಿ, ಶಿವಪುತ್ರ್ಪ ಜಕ್ಕಣ್ಣವರ ಸೇರಿದಂತೆ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಶಿಕ್ಷಕಿ ಮಂಜುಳಾ ಪಾಟೀಲ ಮಾತನಾಡಿದರು, ಪ್ರಾಚಾರ್ಯ ಎಸ್.ಹೆಚ್.ಹಾವೇರಿ ಸ್ವಾಗತಿಸಿದರು, ಶಿಕ್ಷಕಿ ಪವಿತ್ರಾ ಕಿರೇಸೂರ ಕಾರ್ಯಕ್ರಮ ನಿರ್ವಹಿಸಿದರು.