ರಾಣೆಬೆನ್ನೂರ

ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪಾಲಕರ ಪೋಷಕರ ಸಭೆ

ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪಾಲಕರ ಪೋಷಕರ ಸಭೆ

ರಾಣೇಬೆನ್ನೂರು 24:  ಪಾಲಕರು ಮತ್ತು ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿವಹಿಸಿದಾಗ ಅಂತಹ ಮಕ್ಕಳು ಜವಾಬ್ದಾರಿಯುತ ಸ್ಥಾನದಲ್ಲಿ ಮುಂದೆ ಬರಲು ಸಾಧ್ಯ ಈ ನಿಟ್ಟಿನಲ್ಲಿ ಪಾಲಕರು ಹೆಚ್ಚಿನ ಗಮನವನ್ನು ಮಕ್ಕಳ ವಿದ್ಯಾಭ್ಯಾಸದ ಕಡೆ ನೀಡಬೇಕು ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಜಿ.ವಿ.ದೀಪಾವಳಿ ಹೇಳಿದರು. 

ಶನಿವಾರದಂದು ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಏರಿ​‍್ಡಸಿದ್ದ 10ನೇ ತರಗತಿ ಮಕ್ಕಳ ಪಾಲಕರ ಹಾಗೂ ಪೋಷಕರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷಕರು ವಿದ್ಯಾಭ್ಯಾಸದ ಕುರಿತು ತರಗತಿ ಅವಧಿಯಲ್ಲಿ ಅವರುಗಳು ತಮ್ಮ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಕೇವಲ ಶಿಕ್ಷಕರ ಮೇಲೆ ಅವಲಂಬನೆಯಾಗದೆ ಮಕ್ಕಳ ಬಗ್ಗೆ ತಂದೆ ತಾಯಿಗಳು ಕಾಳಜಿ ಹೊಂದಬೇಕು ಎಂದರು. 

ಮುಖ್ಯೋಪಾಧ್ಯಾಯ ವಿಜಯ ಪೂಜಾರ ಮಾತನಾಡಿ, ಶಿಕ್ಷಣದಲ್ಲಿ ಯಾರು ಆಸಕ್ತಿಯನ್ನು ಹೊಂದುತ್ತಾರೋ ಅಂತಹ ವಿದ್ಯಾರ್ಥಿಗಳು ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯ. ಶಿಕ್ಷಣದಿಂದ ಮಾತ್ರ ಪ್ರಗತಿಯನ್ನು ಕಾಣಬಹುದು ಆದ್ದರಿಂದ ಬರುವ ದಿನಮಾನಗಳಲ್ಲಿ ವಾರ್ಷಿಕ ಪರೀಕ್ಷಾ ಅವಧಿ ಸಮೀಪಿಸುತ್ತಿದ್ದೆ. ಇಂದಿನಿಂದಲೇ ಮಕ್ಕಳು ಹೆಚ್ಚಾಗಿ ವಿದ್ಯಾಭ್ಯಾಸ ಮಾಡುವದರತ್ತ ತೊಡಗಬೇಕು ಎಂದರು. 

ಸಹ ಶಿಕ್ಷಕರಾದ ಎಸ್ ಎಸ್ ಮುಳಗುಂದ, ಮಹೇಶ ಹುಣಸಿಕಟ್ಟಿ, ನವೀನ್ ಅಂಬಿಗೇರ, ಭರಮೇಶ ಹಿರೇಕೆರೂರ, ಕೀಮಪ್ಪ ಲಮಾಣಿ ಸೇರಿದಂತೆ ಪಾಲಕರು ಮತ್ತು ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು. 


ಸುದ್ದಿ ಓದಿ