ಪಂಕಜ್ ಕಾಗದಗಾರ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನ
ರಾಣೇಬೆನ್ನೂರು:ಸೆ 3 ನಗರದ ಪ್ರತಿಷ್ಠಿತ ಕಲಾವಿದ ನಾಮದೇವ ಕಾಗದಗಾರ ಅವರ ಪುತ್ರ ಪಂಕಜ್ ಕಾಗದಗಾರ ಚಿಕ್ಕ ವಯಸ್ಸಿನಲ್ಲಿ ನೀಡುವ ಹಿರಿಯ ಕಲಾವಿದ ಸಿ.ಎನ್.ಪಾಟೀಲ್ ಹೆಸರಿನಲ್ಲಿ ಕೊಡುವ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕರ್ನಾಟಕ ಸರ್ಕಾರ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಬಾಲ ಭವನ ಬೆಂಗಳೂರು ಹಾಗೂ ಬಣ್ಣದ ಮನೆ ಸಾಂಸ್ಕ್ರತಿಕ ವೇದಿಕೆ ಇವರು ಆಯೋಜಿಸಿದ್ದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ( ಓಚಿಣಠಚಿಟ ಐಜತಜಟ ಆಡಿಚಿತಿಟಿರ ಅಠಠಿಜಣಣಠ)ಭಾಗವಹಿಸಿದ್ದರು. ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಮತ್ತು ಅಂತರಾಷ್ಟ್ರೀಯ ಕಲಾವಿದರಾದ ಚಿ.ಸು. ಕೃಷ್ಣಶೆಟ್ಟಿ, ಕೆ.ವಿ.ಸುಬ್ರಹ್ಮಣ್ಯಯವರು ಹಿರಿಯ ಕಲಾವಿದ ಸಿ ಎನ್ ಪಾಟೀಲ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಿದರು