ಗುಳೇಗುಡ್ಡ

ಪಂಚಾಯ್ತಿಯಲ್ಲಿ ಕಿರುಕುಳ ವಿಕಲಚೇತನ ಮಹಿಳೆ ಸಿಬ್ಬಂದಿ ಆತ್ಮಹತ್ಯೆ

ಪಂಚಾಯ್ತಿಯಲ್ಲಿ ಕಿರುಕುಳ ವಿಕಲಚೇತನ ಮಹಿಳೆ ಸಿಬ್ಬಂದಿ ಆತ್ಮಹತ್ಯೆ

ಗುಳೇದಗುಡ್ಡ 20:  ಸಮೀಪದ ಅಲ್ಲೂರ ಎಸ್ಪಿ ಗ್ರಾಮದ ನಿವಾಸಿ ಹಳದೂರ ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ವಿಕಲಚೇತನ ಮಹಿಳೆ ಕುಮಾರಿ ಅನ್ನಪೂರ್ಣ ಪಾದನಕಟ್ಟಿ (35) ಸೋಮವಾರ ಹಳದೂರ ಗ್ರಾಮ ಪಂಚಾಯತಿಯಲ್ಲಿ ಕೆಲ ವ್ಯಕ್ತಿಗಳ ಕಿರುಕುಳ ತಾಳಲಾರದೇ ವಿಷ ಸೇವಿಸಿದ ಪರಿಣಾಮವಾಗಿ ಚಿಕಿತ್ಸೆ ಫಲಕಾರಿಯಗದೇ  ಸಾವನ್ನಪ್ಪದ ಘಟನೆ ಜರುಗಿದೆ. 

ಅಲ್ಲೂರ ಎಸ್ಪಿ ಗ್ರಾಮದ ಯುವತಿ ಹಳದೂರ ಗ್ರಾಮ ಪಂಚಯತಿಯಲ್ಲಿ ಕಂಪ್ಯೂಟರ್ ಆಪರೇಟರ್ ಅಂತಾ ಕಾರ್ಯ ನಿರ್ವಹಿಸುತ್ತಿಳು. ಅವಳಿಗೆ ತನ್ನ ಅಲ್ಲೂರ ಎಸ್ಪಿ ಗ್ರಾಮದವರೇ ಆದ ಸಂಗಮೇಶ ರುದ್ರ​‍್ಪ ಚಲವಾದಿ, ಈರಯ್ಯ ಅಲ್ಮಯ್ಯ ಹೊಸಮಠ, ರಾಮಣ್ಣಾ ಯಮನಪ್ಪ ಲೆಂಕೆನ್ನವರ್, ಯಮನಪ್ಪ ಹನಮಪ್ಪ ಲೆಂಕೆನ್ನವರ್, ದ್ಯಾಮಣ್ಣ ಮರಿಯಪ್ಪ ಚಲವಾದಿ, ಶಿವಾನಂದ ತುರಚಪ್ಪ ಹಾಲನ್ನವರ್, ರಮೇಶ ಯಮನಪ್ಪ ತಿಮ್ಮಣ್ಣವರ್ ಹಾಗೂ ದೇವಕೆವ್ವ ಶಂಕರಗೌಡ ಪಾಟೀಲ ಇವರು ಪಂಚಾಯತಿಯ ನರೇಗಾ ಕೆಲಸದಲ್ಲಿ ಕೂಲಿ ವೇತನದ ಕುರಿತಾಗಿ ಕೊಡುತ್ತಿದ್ದ ಮಾನಸಿಕ ಕಿರುಕುಳ ಸಹಿಸಲಾಗದೇ ಬೇಸತ್ತು ವಿಷ ಸೇವಿಸಿ  ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾಯಂಕಾಲ ನಿಧನರಾಗಿದ್ದಾರೆಂದು  ಮೃತಳ ಅಣ್ಣ ಕನಕಪ್ಪ ಹಣಮಂತ ಪಾದನಕಟ್ಟಿ ಇವರು ಗುಳೇದಗುಡ್ಡ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಮುಗಿಲು ಮುಟ್ಟಿದ ಆಕ್ರಂದನ: ಬಾಗಲಕೋಟೆಯಿಂದ ಮಂಗಳವಾರ ಅಲ್ಲೂರ ಎಸ್ಪಿ ಗ್ರಾಮಕ್ಕೆ ಅನ್ನಪೂರ್ಣ ಇವಳ ಮೃತ ದೇಹವನ್ನು ತರುತ್ತಿದ್ದಂತೆ ಕುಟುಂಬ ವರ್ಗದವರ ಹಾಗೂ ಸಂಬಂಧಿಗಳ ದು:ಖ ಕರುಳು ಕಿತ್ತು ಬರುವಂತಿತ್ತು. ಅಣ್ಣಂದಿರು, ಅಕ್ಕ, ಅಕ್ಕನ ಮಕ್ಕಳು ಹಾಗೂ ವೃದ್ಧ ತಾಯಿಯ ಆಕ್ರಂಧನ ಸೇರಿದ ಜನಸ್ತೋಮವನ್ನೂ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿತ್ತು. ತಮ್ಮ ತಂಗಿಗೆ ಅನ್ಯಾಯವಾಗಿದೆ. ಆರೋಪಿಗಳಿಗೆ ಶಿಕ್ಷೆಯಗಬೇಕೆಂದು ಮೃತ ಅನ್ನಪೂರ್ಣಳ ಅಣ್ಣಂದಿರು ಹೇಳುತ್ತ ತಮ್ಮ ದು:ಖ ತೊಡಿಕೊಂಡರು.  

ಸಹಾಯ ಹಸ್ತ : ಬಡತನ ಅನುಭವಿಸುತ್ತಿರುವ ಈ ತುಂಬು ಕುಟುಂಬದಲ್ಲಿ ಅನ್ನಪೂರ್ಣಾಳ ಸಾವಿನಿಂದ ದಿಕ್ಕು ತೋಚದಾಗಿದೆ. ಸುಮಾರು 20 ಜನ ಇರುವ ತುಂಬು ಕುಟುಂಬಕ್ಕೆ ಸರ್ಕಾರದ ಸಹಾಯ ಹಸ್ತ ಅಗತ್ಯವಾಗಿದೆ. ಅಂಗವಿಕಲಳಾಗಿದ್ದರೂ ನನ್ನ ಮಗಳು ನನಗೆ ಆಸರೆಯಾಗಿದ್ದಳು ಎಂದು ಅಳುತ್ತ ಮೃತಳ ತಾಯಿ 75 ವರ್ಷದ ರುದ್ದವ್ವ ಕಣ್ಣೀರಿಟ್ಟಳು. 


ಸುದ್ದಿ ಓದಿ