ಶಿಗ್ಗಾವ್

ಗಾಂಧಿ ಜಯಂತಿ ನಿಮಿತ್ಯ ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮ

ಗಾಂಧಿ ಜಯಂತಿ ನಿಮಿತ್ಯ ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ 20: ಮಕ್ಕಳು ಗಾಂಧೀಜಿಯವರ ತತ್ವಗಳನ್ನು ಮಕ್ಕಳು ಅಳವಡಿಸಿಕೊಳ್ಳುವ ಸಲುವಾಗಿ 5 ರಿಂದ 16 ವರ್ಷದ ಮಕ್ಕಳಿಗೆ ಈ ಕಾರ್ಯಕ್ರಮ ನಡೆಸುತ್ತಿದ್ದು, ಮಕ್ಕಳು ಸಕ್ರೀಯವಾಗಿ ಭಾಗವಹಿಸಿ ತಮ ್ಮ ಪ್ರತಿಭೆ ಹೊರಹಾಕಲು ಹಾಗೂ ಈ ಕಾರ್ಯಕ್ರಮದ ಪ ್ರಯೋಜನವನ್ನು ಪಡೆಯಬೇಕೆಂದು ಸಿ.ಡಿ.ಪಿ.ಓ ಕುಮಾರಿ ನೀತಾ ಪಿ. ವಾಡಕರ ತಿಳಿಸಿದರು. 

ಪಟ್ಟಣದ ಶಿಶು ಅಭಿವೃಧ್ಧಿ  ಯೋಜನಾಧಿಕಾರಿಗಳ ಕಛೇರಿ ಸಭಾಭವನದಲ್ಲಿ ಬಾಲಭವನ ಸೊಸೈಟಿ ಬೆಂಗಳೂರ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಹಾವೇರಿ, ತಾಲೂಕಾ ಬಾಲ ಭವನ ಶಿಗ್ಗಾವಿ ಹಾಗೂ ಶಿಶು ಅಭಿವೃಧ್ಧಿ ಯೋಜನೆ ವತಿಯಿಂದ 05 ರಿಂದ 16 ವರ್ಷದ ಮಕ್ಕಳಿಗೆ ಗಾಂಧಿ ಜಯಂತಿ ಅಂಗವಾಗಿ ಚಿತ್ರಕಲೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ 5 ರಿಂದ 8 ವರ್ಷದ ಮಕ್ಕಳಲ್ಲಿ  ರಾಧಾ ಸಿ. ಕಮ್ಮಾರ ಪ್ರಥಮ,  ದಿವ್ಯಾ ಎಂ. ಬಾರಕೇರ ದ್ವಿತೀಯ ಹಾಗೂ ದೀಪಕ ಡಿ. ಕೋರಿವಾಡ ತೃತೀಯ ಬಹುಮಾನ ಪಡೆದರು. 9 ರಿಂದ 12  ವರ್ಷದ ಮಕ್ಕಳಲ್ಲಿ  ರಾಘವೇಂದ್ರ ಎಂ. ಕಮ್ಮಾರ ಪ್ರಥಮ ರಕ್ಷಿತಾ ಪಿ. ಬ್ರಹ್ಮಾವರ  ದ್ವಿತೀಯ ಹಾಗೂ ವರ್ಷಾಣಿ ಎಸ್. ನವಲಗುಂದ ತೃತೀಯ ಬಹುಮಾನ ಪಡೆದರು. 13 ರಿಂದ 16 ವರ್ಷದ ಮಕ್ಕಳಲ್ಲಿ  ವಂದನಾ ಬಿ. ಜೋಳದ ಪ್ರಥಮ, ನೇಹಾ ಡಿ ಬಳಿಗಾರ ದ್ವಿತೀಯ ಹಾಗೂ ಕುಮಾರ ಆಶಾ ಎಂ. ಮುಳಗುಂದ ತೃತೀಯ ಬಹುಮಾನ ಪಡೆದರು. ನಗದು ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಂಸನಾ ಪತ್ರ ನೀಡಲಾಯಿತು. 

 ಎಂ. ಎ. ಮಿರಜಕರ, ಎ. ಜಿ. ಸಿಂಗಟಾಲೂರ ಇವರು ತೀರ್ಪು ಗಾರರಾಗಿ ಪಾಲ್ಗೊಂಡಿದ್ದರು.  ಹಿರಿಯ ಮೇಲ್ವಿಚಾರಕಿ ನಿರ್ಮಲಾ ಇಟಗಿ, ಪ್ರ.ದ.ಸ. ಎಸ್. ಬಿ. ಕೋಳೂರ ಭಾಗವಹಿಸಿದ್ದರು.  ಕುಮಾರಿ ಅನುಷಾ ಜೋಳದ ಹಾಗೂ ಸಂಗಡಿಗರಿಂದ ಪ್ರಾರ್ಥಿಸಲಾಯಿತು, ಮೇಲ್ವಿಚಾರಕಿ ಲಕ್ಮೀಬಾಯಿ ಎಫ್. ಬಗಾಡೆ ನಿರೂಪಿಸಿದರು, ರೇಣುಕಾ ಬಿ ತಾಯಮ್ಮನವರ ಸ್ವಾಗತಿಸಿದರು, ಉಮಾ ಎಂ. ಪತ್ತಾರ ವಂದಿಸಿದರು 

ಸುದ್ದಿ ಓದಿ