ಇಂಡಿ

ಚಿತ್ರಕಲೆ/ಪ್ರಬಂಧ ಸ್ಪರ್ಧೆ

ಚಿತ್ರಕಲೆ/ಪ್ರಬಂಧ ಸ್ಪರ್ಧೆ

ಇಂಡಿ: ಮರಗೂರ ಮುರಾರ್ಜಿ ದೇಸಾಯಿ ವಸತಿ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ತಂಬಾಕು ಸೇವನೆಯಿಂದ ದುಷ್ಪರಿಣಾಮದ ಕುರಿತು ಚಿತ್ರಕಲೆ/ಪ್ರಬಂಧ ಸ್ಪರ್ಧೆ ಏರಿ​‍್ಡಸಲಾಗಿತ್ತು. 

ಪಾಚಾರ್ಯ ಜಿ.ಕೆ. ವಾಲೀಕಾರ ಮಾತನಾಡಿ ಧೂಮಪಾನ, ಮಧ್ಯಪಾನ ಮಾಡುವುದರಿಂದ ಆಗುವ ದುಷ್ಪರಿಣಾಮದ ಜೊತೆಗೆ ತಂಬಾಕು ಸೇವನೆಯಿಂದ ಬರುವ ರೋಗದ ಬಗ್ಗೆ ಮಾಹಿತಿ ನೀಡಿದರು. 

ಕನ್ನಡ ಉಪನ್ಯಾಸಕ ಮಲ್ಲಿಕಾರ್ಜುನ ಪಾಟೀಲ, ರತ್ನಾಕರ್ ಬಿರಾದಾರ, ಸಂಗಣ್ಣ ತೇಲಿ, ಶಾರದಾ ಹೀರೆಮಠ, ನಿಲಯಪಾಲಕ ಶ್ರೀಮಂತರಾಯ ಉಮರಜ ಉಪಸ್ಥಿತರಿದ್ದರು. 

ಚಿತ್ರಕಲೆ ಸ್ಪರ್ಧೆಯಲ್ಲಿ ಕುಮಾರಗೌಡ ಪಾಟೀಲ, ಪ್ರಬಂಧದಲ್ಲಿ ಭಾಗ್ಯಶ್ರೀ ಬಿರಾದಾರ, ರೇಣುಕಾ ಮಾದರ, ರಾಜಶೇಖರ ಶಿರಗಾ ಸೇರಿದಂತೆ ಇತರೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು. 


ಸುದ್ದಿ ಓದಿ