ಕಾಗವಾಡ

ಪದೋನ್ನತಿ ವರ್ಗಾವಣೆ: ಸಿ.ಎಂ.ಸಾಂಗ್ಲಿಗೆ ಬೀಳ್ಕೊಡುಗೆ

ಪದೋನ್ನತಿ ವರ್ಗಾವಣೆ: ಸಿ.ಎಂ.ಸಾಂಗ್ಲಿಗೆ ಬೀಳ್ಕೊಡುಗೆ

ಲೋಕದರ್ಶನ ವರದಿ 

ಕಾಗವಾಡ 31: ಸರಕಾರಿ ನೌಕರಿ ಸೇರಿದ ಮೇಲೆ ಪದೋನ್ನತಿ, ನಿವೃತ್ತಿ ಅನಿವಾರ್ಯ, ಇದರ ಮಧ್ಯೆ ಇದ್ದಷ್ಟು ದಿನ ಯಾವ ರೀತಿಯಾಗಿ ಸೇವೆ ಸಲ್ಲಿಸಿದೇವು ಎನ್ನುವುದು ಮುಖ್ಯ ಎಂದು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್‌.ಮುಂಜೆ ಹೇಳಿದರು. 

 ಮಂಗಳವಾರ ದಿ.31 ರಂದು ಕಾಗವಾಡ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ದೈಹಿಕ ಶಿಕ್ಷಕರ ಸಂಘದ ವತಿಯಿಂದ ಏರಿ​‍್ಡಸಿದ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು, ಸಿ.ಎಂ.ಸಾಂಗ್ಲಿಯವರು ದೈಹಿಕ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಈಗ ಉತ್ತರ ಕನ್ನಡ ಜಿಲ್ಲೆಗೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾಗಿ ಪದೋನ್ನತಿ ಪಡೆದು ವರ್ಗಾವಣೆ ಹೊಂದುತ್ತಿದ್ದು ಅವರಿಗೆ ಶಿಕ್ಷಣಾಧಿಕಾರಿ  ಎಂ.ಆರ್‌.ಮುಂಜೆಯವರು ಶಾಲು ಹೊದಿಸಿ ಸನ್ಮಾನಿಸಿ ಮಾತನಾಡುತ್ತಿದರು. ಸಿ.ಎಂ.ಸಾಗ್ಲಿಯಯರು ಕಳೆದ ಹಲವಾರು ವರ್ಷಗಳಿಂದ ಕಾಗವಾಡ ವಲಯದಲ್ಲಿ ದೈಹಿಕ ಶಿಕ್ಷಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಎಲ್ಲ ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂಬುವುದಕ್ಕೆ ಈಗ ನಡೆಯುತ್ತಿರುವ ಸನ್ಮಾನವೇ ಸಾಕ್ಚಿ ಎಂದರು.  

ಸಿ,ಎಂ.ಸಾಂಗ್ಲಿಯವರು ನಾವು ಈ ತಾಲೂಕಿನಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿದೇವು ಎನ್ನುವುದು ಮುಖ್ಯವಲ್ಲ, ಇದ್ದಷ್ಟು ದಿನ ನಾವು ಪ್ರಾಮಾಣಿಕವಾದ ಸೇವೆ ಸಲ್ಲಿಸಿರುವ ತೃಪ್ತಿ ನನಗಿದೆ ಎಂದರು. ಕಳೆದ ಹಲವಾರು ವರ್ಷಗಳಿಂದ ಸೇವೆ ಮಾಡುವಾಗ ಜಿಲ್ಲಾ, ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದೇವೆ. ಅದಕ್ಕೆಲ್ಲ ಶಿಕ್ಷಕರ ಸಹಕಾರವೇ ಕಾರಣ ಎಂದರು. ನನಗೆ ನೀಡಿರುವ ಸಹಕಾರವನ್ನು ಮುಂಬರುವ ದೈಹಿಕ ಶಿಕ್ಷಣಾಧಿಕಾರಿ ಎಂ.ವೈ. ಪುಜಾರಿಯವರಿಗೂ ಸಹಕಾರ ನೀಡುವಂತೆ ಕೋರಿದರು.  

  ಶ್ರೀಶೈಲ ಸಂಬೋಝಿ, ಎಂ.ಕೆ.ಕಾಂಬಳೆ ಸೇರಿದಂತೆ ಅನೇಕರು ಸಿ.ಎಂ. ಸಾಗ್ಲಿಯವರನ್ನು ಕೊಂಡಾಡಿದರು. 

 ವೇದಿಕೆಯ ಮೇಲೆ ಸಮನ್ವಯ ಅಧಿಕಾರಿ ರವೀಂದ್ರ ಖಡಾಖಡಿ, ವಿಷಯ ಪರೀವೀಕ್ಷಕರಾದ ಎಸ್‌.ಬಿ.ಪಾಟೀಲ, ಶಿರಗುಪ್ಪಿ ಸರಕಾರಿ ಪ್ರಾಢ ಶಾಲೆಯ ಮುಖ್ಯೋಪಾದ್ಯಾಯನಿ ಉಜ್ವಲಾ ಮಗದುಮ್, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಗೌಡಪ್ಪ ಸಡ್ಡಿ, ಎಸ್,ಪಿ, ಕಬಾಡಗಿ, ಎಸ್‌.ಆರ್‌.ಮೋರೆ, ಎಲ್‌.ವೈ ಚೌಗುಲೆ, ಮೃತ್ಯೂಂಜಯ ಹವಳೆ, ಸಿ.ಎಂ ಸಂತೋಷ, ಪಿ,ಜೆ.ಕಾಂಬಳೆ, ಬಿ.ಎಸ್,ಯರಂಡೋಲಿ, ಎಂ.ಕೆ.ಕಾಂಬಳೆ, ದೀಲೀಪ ಜಾಧವ, ಎ.ಡಿ,ಖಾತೇದಾರ, ಎಸ್‌.ಬಿ.ಕೊಳೇಕರ, ಡಿ.ಕೆ. ಗುಪ್ತೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆರ್‌.ಎಸ್‌.ಕಾಂಬಳೆ ನಿರೂಪಿಸಿದರು. ಎಲ್‌.ವೈ ಚೌಗುಲೆ ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ