15ರಂದು ಪದ್ಮಾವತಿ ದೇವಿ ಮೂರ್ತಿಗಳ ಪುರ ಪ್ರವೇಶ
ಕಾಗವಾಡ ಫೆ.6 : ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವ ಅತಿಶಯ ಕ್ಷೇತ್ರ ಉಗಾರ ಬುದ್ರುಕ ಗ್ರಾಮದ ಆರಾಧ್ಯ ದೇವಿ ಪದ್ಮಾವತಿ ದೇವಿಯ ರಜತ ಮತ್ತು ಸುವರ್ಣ ಮೂರ್ತಿಗಳ ಪುರ ಪ್ರವೇಶ ಕಾರ್ಯಕ್ರಮ ಫೆ.15 ರಂದು ಬೆಳಿಗ್ಗೆ 9.30ಕ್ಕೆ ಜರುಗಲಿದೆ ಎಂದು ಶ್ರೀ ಪದ್ಮಾವತಿ ಮಂದಿರದ ಮುಖ್ಯಸ್ಥ ಶೀತಲಗೌಡ ಪಾಟೀಲ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿಮಿತ್ತ ಫೆ.14ರಂದು ಶ್ರೀ ಭೈರವ ಪದ್ಮಾವತಿ ದೇವಿ ಆರಾಧನಾ ಕಾರ್ಯಕ್ರಮದ ಸಾನಿಧ್ಯವನ್ನು ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಸ್ವಾದಿ ದಿಗಂಬರ ಜೈನ ಮಠ ಸೋಂದಾ ಸಾನಿಧ್ಯ. ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಮತ್ತು ಸ್ವಸ್ಥಿಶ್ರೀ ಜಿನಸೇನಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಜೈನ ಮಠ ನಾಂದಣಿ ಇವರ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ.
15 ರಂದು ಶ್ರೀ ಪದ್ಮಾವತಿ ಅಮ್ಮನವರ ಮೂರ್ತಿ ಪುರ ಪ್ರವೇಶದ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ಶ್ರಾವಕ ರತ್ನ ರಾವಸಾಹೇಬ ಪಾಟೀಲ ಪ್ರಮುಖ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ,ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಮಹಾರಾಷ್ಟ್ರದ ಸಚಿವ ರಾಜೇಂದ್ರ ಯಪಾಟೀಲ(ಯಡ್ರಾಂವಕರ) ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಅಭಯ ಪಾಟೀಲ, ಮಾಜಿ ಸಂಸದರು ಹಾಲಿ ಶಾಸಕರಾದ ಪ್ರಕಾಶ ಅವಾಡೆ, ಶಾಸಕರಾದ ಪಿ.ರಾಜೀವ,ದುರ್ಯೋದನ ಐಹೋಳೆ, ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ವಿವೇಕರಾವ ಪಾಟೀಲ, ಮಾಜಿ ಸಂಸದರಾದ ಪ್ರಕಾಶ ಹುಕ್ಕೇರಿ, ರಾಜು ಶೆಟ್ಟಿ, ಮಾಜಿ ಶಾಸಕರಾದ ವೀರಕುಮಾರ ಪಾಟೀಲ,ಸಂಜಯ ಪಾಟೀಲ, ಕಲ್ಲಪ್ಪಣ್ಣ ಮಗೆಣ್ಣವರ, ರಾಜು ಕಾಗೆ, ಮೋಹನರಾವ್ ಶಹಾ,ಮುಖಂಡರಾದ ಕಿರಣಕುಮಾರ ಪಾಟೀಲ, ಉದ್ಯಮಿಗಳಾದ ಚಂದನ ಶಿರಗಾಂವಕರ, ಪದ್ಮಜಿತ ನಾಡಗೌಡರ ಜಿನ್ನಪ್ಪ ಅಸ್ಕಿ, ಡಿ.ಸಿ.ಸದಲಗಿ ಉಪಸ್ಥಿತರಿರುವರು ಎಂದು ಮಂದಿರದ ಮುಖ್ಯಸ್ಥ ಶೀತಲಗೌಡ ಪಾಟೀಲ ತಿಳಿಸಿದರು. ಈ ವೇಳೆ ಗ್ರಾಮ ಪಂಚಾಯತ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ವೃಷಭ ಪಾಟೀಲ, ಅಪ್ಪಾಸಾಬ ಚೌಗುಲೆ ಇದ್ದರು.