ಸಿರುಗುಪ್ಪ

ಸತತ ಸುರಿದ ಮಳೆಯಿಂದ ಭತ್ತ ಹಾಗೂ ಹತ್ತಿ ಬೆಳೆ ನಾಶ

ಸತತ ಸುರಿದ ಮಳೆಯಿಂದ ಭತ್ತ ಹಾಗೂ ಹತ್ತಿ ಬೆಳೆ ನಾಶ
ಸಿರುಗುಪ್ಪ -ತಾಲ್ಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಭತ್ತ ಹತ್ತಿ ಸೇರಿ ವಿವಿಧ ಬೆಳೆಗಳು ನೆಲಕ್ಕುರುಳಿ ಬಿದ್ದಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ತಾಲ್ಲೂಕಿನ ತುಂಗಭದ್ರಾ ನದಿ ದಂಡೆಯಲ್ಲಿರುವ ಮಣ್ಣೂರು ಸೂಗೂರು, ನಿಟ್ಟೂರು,ನಡಿವಿ,ಉಡೇಗೋಳ,ರುದ್ರಪಾದ, ಮುದ್ದಟನೂರು,ಮಾಳಾಪುರ ಮುಂತಾದ ಗ್ರಾಮಗಳ ರೈತರು ಬೆಳೆದ ಭತ್ತದ ಬೆಳೆಯೂ ನೆಲಕ್ಕುರುಳಿ ಬಿದ್ದಿದೆ ಮತ್ತು ಹಚ್ಚೊಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಬಿ ಎಂ ಸೂಗೂರು,ಇಟ್ಟಿಗೆ ಹಾಳು, ನಾಗರಹಾಳು ಗ್ರಾಮಗಳ ರೈತರು ಬೆಳೆದ ಹತ್ತಿ ಹೊಲಗಳಿಗೆ ಗರ್ಜಿ ಹಳ್ಳದ ನೀರು ನುಗ್ಗಿ ಹತ್ತಿ ಬೆಳೆ ನಾಶವಾಗಿದೆ.
ಬಳ್ಳಾರಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ಜಿಲ್ಲಾ ಉಪನಿರ್ದೇಶಕ ಚಂದ್ರಶೇಖರ್ ಸಹಾಯಕ ಕೃಷಿ ನಿರ್ದೇಶಕ ಎಸ್ ಬಿ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಪಡೆದರು. ನಮಗೆ ಸೂಕ್ತ ಪರಿಹಾರ ಕೊಡಿಸಿ ಎಂದು ಅಧಿಕಾರಿಗಳಿಗೆ ರೈತರು ಮನವಿ ಮಾಡಿಕೊಂಡರು ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ಇಲ್ಲಿಯವರೆಗೆ 300ಹೆಕ್ಟೇರ್ ಭತ್ತ 30ಹೆಕ್ಟೇರ್ ಹತ್ತಿ ಬೆಳೆಯೂ ನಾಶವಾಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್ ಬಿ ಪಾಟೀಲ್ ತಿಳಿಸಿದರು. ಸಿರುಗುಪ್ಪ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 7ರವರೆಗೆ ಸುರಿದ ಮಳೆಗೆ ವಿವಿಧ ಗ್ರಾಮಗಳಲ್ಲಿ 62ಮನೆಗಳು ಬಿದ್ದಿವೆ ಪ್ರಕೃತಿ ವಿಕೋಪ ಇಲಾಖೆಯು ಪ್ರಕಟಿಸಿದ್ದಾರೆ ಎಂದು ಸಮಾಜ ಕಾರ್ಯಕರ್ತ ಅಬ್ದುಲ್ ನಬಿ ಅವರು ತಿಳಿಸಿದರು.

ಸುದ್ದಿ ಓದಿ