ಗುಡ್ಡಾಪುರ ದಾನಮ್ಮದೇವಿಗೆ ಪಾದಯಾತ್ರೆ : ಭಕ್ತಾದಿಗಳಿಗೆ ಅನ್ನಪ್ರಸಾದ
ಕಾಗವಾಡ 11:ಇಡೀ ಜಗತ್ತಿನಲ್ಲಿ ಧಾರ್ಮಿಕ ಪರಂಪರೆ ಆಚರಣೆ ಸಂಪ್ರದಾಯ, ಸಂಸ್ಕಾರಕ್ಕೆ ಹೆಸರು ವಾಸಿಯಾದ ರಾಷ್ಟ್ರ ನಮ್ಮದು ವಿವಿಧತೆಯಲ್ಲಿ ಏಕತೆ ಎಂಬುದನ್ನು ತೋರಿಸಿಕೊಟ್ಟ ನಮ್ಮ ದೇಶದಲ್ಲಿ ನಾವೆಲ್ಲರೂ ಒಂದು ಎಂಬ ಸದ್ಬಾವನೆದಿಂದ ಬದುಕುತ್ತಿದ್ದೆವೆ ಪರಸ್ಪರ ಸಹೋದರತೆ -ಭಾತೃತ್ವದೊಂದಿಗೆ ಒಂದಡೆ ಎಲ್ಲ ಧರ್ಮಯರು ಶಾಂತಿಯುತ ಜೀವನ ನಡೆಸಲು ಆಶ್ರಯ ನೀಡಿದ ಪವಿತ್ರ ದೇಶ ನಮ್ಮದಾಗಿದೆ ಎಂದು ಶ್ರೀದಾನಮ್ಮದೇವಿ ಮಹಿಳಾ ಪಾದಯಾತ್ರಾ ಕಮೀಟಿ ನೇತೃತ್ವ ವಹಿಸಿದ ವಿಜಯಾ ಮಹಾಜನ ಹೇಳಿದರು.
ಅವರು ದಿ.11ರಂದು ರವಿವಾರ ಐನಾಪುರ ಪಟ್ಟಣದ ವಿರಭದ್ರಶ್ವರ ದೇವಸ್ಥಾನದಲ್ಲಿ ಶ್ರೀದಾನಮ್ಮದೇವಿ ಮಹಿಳಾ ಪಾದಯಾತ್ರಾ ಕಮೀಟಿ ವತಿಯಿಂದ ಪ್ರತಿವರ್ಷ ಶ್ರೀಕ್ಷೇತ್ರ ಗುಡ್ಡಾಪುರ ದಾನಮ್ಮದೇವಿ ಪಾದಯಾತ್ರೆ ಮೂಲಕ ತೆರಳಿ ದರ್ಶನ ಪಡೆದು ನಂತರ ಸಹಸ್ರಾರು ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಮಾಡುತ್ತಾ ಬಂದಿದು ಸುಮಾರು 25 ವರ್ಷದಿಂದ ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಮಾಡುತ್ತಿದ್ದು, ಇನ್ನು ಹಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆ ಬೇಳಸಬೇಕಾಗಿದೆ ಎಂದರು. ಮುಂಜಾನೆ ದೇವಿಗೆ ಅಭಿಷೇಕ ಪೂಜೆ ಸಲ್ಲಿಸಿ ಮಂಗಳಾರತಿ, ನೈವೇದ್ಯ ಮಾಡಿ ಪ್ರಸಾದ ಹಂಚಿದರು. ಪಟ್ಟಣದ ಸಹಸ್ರಾರು ಮುತೈದೆಯರು ಉಡಿತುಂಬಿಕೊಂಡು ದೇವರ ದರ್ಶನ ಆರ್ಶಿವಾದ ಪಡೆದುಕೊಂಡರು.
ಪ್ರತಿ ವರ್ಷವೂ ದಾನಮ್ಮದೇವಿ ಉಡಿತುಂಬವ ಕಾರ್ಯಕ್ರಮಕ್ಕೆ ಬರುವಂತಹ ಭಕ್ತಾದಿಗಳಿಗೆ ಇಲ್ಲಿ ಅನ್ನಪ್ರಸಾದ ನೀಡಲಾಗುತ್ತದೆ. ಸಂದರ್ಭದಲ್ಲಿ ಜಯಶ್ರೀ ಕಾರ್ಚಿ, ನೇಹಾ ಕಾರ್ಚಿ, ಸುಜಾತಾ ಕರಾಳೆ, ಭಾಗ್ಯಶ್ರೀ ಕಮತಗಿ, ಸುಭದಾ ಕಮತಗಿ, ರಾಣಿ ಕಾರ್ಚಿ, ದೀಪಾ ಕಾರ್ಚಿ ,ಮಹಾದೇವಿ ಕಾರ್ಚಿ, ಅನುಸೂಯಾ ಸಾವಳಿ, ಶಾಂತಾ ಕಟಗೇರಿ, ವಿದ್ಯಾ ಕಮತಗಿ, ಶಾಂತಾ ಕೊಲಾರ, ಅನುಸೂಯಾ ಕಮತಗಿ ಸಾವಿತ್ರಿ ಕಮತಗಿ, ರಾಣಿ ಮಹಾಜನ, ನೀಕಿಲ ಮಹಾಜನ ಈರಣಾ ಕೋಲಾರ ಸುಮೀತ ಕಾರ್ಚಿ,ಕಾಂತೇಶ ಕಮತಗಿ, ಸಂಗಮ ಕರಾಳೆ,ಮತ್ತು , ಅಪಾರ ಭಕ್ತರು ಭಾಗವಹಿಸಿದರು