ಮನರಂಜನೆ

ಸುದೀಪ್ ಬಯೋಗ್ರಫಿ ಬಿಡುಗಡೆಗೊಳಿಸಿದ ಪವರ್ ಸ್ಟಾರ್

ಸುದೀಪ್ ಬಯೋಗ್ರಫಿ ಬಿಡುಗಡೆಗೊಳಿಸಿದ ಪವರ್ ಸ್ಟಾರ್

ಬೆಂಗಳೂರು-02 ಕಿಚ್ಚ ಸುದೀಪ್ ಜನ್ಮದಿನದಂದು ಅವರ ಬಯೋಗ್ರಫಿ ಬಿಡುಗಡೆ ಮಾಡುವ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಭ ಕೋರಿದ್ದಾರೆ.

 ಪತ್ರಕರ್ತ ಶರಣು ಹುಲ್ಲೂರು ಬರೆದ ಈ ಪುಸ್ತಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಪುನೀತ್ ರಾಜ್ ಕುಮಾರ್, ಸಮಗ್ರ ಮಾಹಿತಿ, ಅಪರೂಪದ ಫೋಟೋ ಒಳಗೊಂಡಿರುವ ಕೃತಿ ಓದುಗರನ್ನು ಸೆಳೆಯಲಿದೆ ಎಂದರು.

 ಈ ಪುಸ್ತಕದಲ್ಲಿ ಸುದೀಪ್ ಮತ್ತು ಪುನೀತ್ ಅವರ ಬಾಲ್ಯದ ಅಪರೂಪದ ಫೋಟೋ ಇದ್ದು, ಅದನ್ನು ಕಂಡು ಸಂಭ್ರಮಿಸಿದರು. ಮತ್ತು ಈ ಹೊತ್ತಿನಲ್ಲಿ ಬಾಲ್ಯದ ಹಲವು ನೆನಪುಗಳನ್ನು ಹಂಚಿಕೊಂಡರು.

 ಪುಸ್ತಕ ಬಿಡುಗಡೆ ಸಂಧರ್ಭದಲ್ಲಿ ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ನಿರ್ಮಾಪಕ ಜಾಕ್ ಮಂಜು ಉಪಸ್ಥಿತರಿದ್ದರು.

  -:ಕಿಚ್ಚನ ಬದುಕಿನ ಅಪರೂಪದ ಸಂಗತಿ ಅನಾವರಣ:-

ಪುಸ್ತಕದಲ್ಲಿ ಸುದೀಪ್ ಅವರ ಬಾಲ್ಯದಿಂದ ಈವರೆಗಿನ ಅನೇಕ ಸಂಗತಿಗಳನ್ನು ಹಿಡಿದಿಡಲಾಗಿದ್ದು, ಸಿನಿಮಾ ರಂಗದ ಅನೇಕ ಘಟನೆಗಳಿಗೆ ಈ ಪುಸ್ತಕ ಸಾಕ್ಷಿಯಾಗಲಿದೆ.

 ಅಪರೂಪದ ಭಾವಚಿತ್ರಗಳೊಂದಿಗೆ ಸುದೀಪ್ ಅವರ ತಂದೆ, ತಾಯಿ, ಅಕ್ಕಂದಿರು, ಪತ್ನಿ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸುದೀಪ್ ಅವರ ಪುತ್ರಿ, ಅಪ್ಪನಿಗಾಗಿ ಪತ್ರ ಬರೆದಿದ್ದಾರೆ. ಹಲವು ಆಸಕ್ತಿಕರ ಸಂಗತಿಗಳನ್ನು ಒಳಗೊಂಡಿರುವ ಹಾಗೂ ಸುದೀಪ್  ಕುರಿತಾದ ಮೊದಲ ಪುಸ್ತಕ ಇದಾಗಿದೆ. 

ಸುದ್ದಿ ಓದಿ