ಶಾಂತಿ ಪಾಲನೆಗೆ ಪಿಎಸೈ ಪಟಾತರ್ ಕರೆ
ಗುಳೇದಗುಡ್ಡ22: ಯಾವುದೇ ಕಾರಣಕ್ಕೂ ತಮ್ಮಿಂದ ಕಾನೂನುಬಾಹೀರ ಹಾಗೂ ಅಹಿತಕರ ಘಟಣೆಗಳು ನಡೆಯಬಾರದು. ಶಾಂತಿ ಪಾಲಿಸಬೇಕೆಂದು ಪಿಎಸ್‌ಐ ಪುಂಡಲೀಕ ಪಟಾತರ ಹೇಳಿದರು.
ಮಂಗಳವಾರ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಗುಳೇದಗುಡ್ಡ ಪೊಲೀಸ್ ಠಾಣಾ ವ್ಯಾಪ್ತಿಯ ಈ ಹಿಂದೆ ಕಾನೂನುಬಾಹೀರ ಕೃತ್ಯವೆಸಗಿದ ಸುಮಾರು 28 ರೌಡಿಗಳನ್ನು ಕರೆಯಿಸಿ, ರೌಡಿ ಪರೇಡ ನಡೆಸಿದ ಸಂದರ್ಭದಲ್ಲಿ ಮಾತನಾಡಿ, ತಾಲೂಕಾ ವ್ಯಾಪ್ತಿಯಲ್ಲಿ ತಮ್ಮಿಂದ ಯಾವುದೇ ರೀತಿಯಲ್ಲಿ ಅಶಾಂತಿ ಕೃತ್ಯಗಳು, ಕಾನೂನುಬಾಹೀರ ಚಟುವಟಿಕೆಗಳು ನಡೆಯಬಾರದು. ಸಮಾಜದ ಸ್ವಾಸ್ಥ್ಯ ಹದಗೆಡದಂತೆ ನಡೆದುಕೊಳ್ಳಬೇಕು. ಹಾಗೇನಾದರೂ ಕಂಡು ಬಂದರೆ ಮತ್ತೇ ಕಾನೂನುಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಪರಾಧ ವಿಭಾಗದ ಪಿಎಸೈ ಚಂದ್ರಶೇಖರ ಕಿರಶ್ಯಾಳ, ಎಸೈಐ ಸಿದ್ದಣ್ಣವರ್, ಆನಂದ ಮನ್ನಿಕಟ್ಟಿ, ಜಿ.ಬಿ.ಮನ್ನಿಕಟ್ಟಿ, ಮಾಗಿ, ಗೂಗಟಿ ಹಾಗೂ ಇತರರು ಇದ್ದರು.