ಮನರಂಜನೆ

‘1980’ ಪ್ರಿಯಾಂಕ ಉಪೇಂದ್ರ

‘1980’ ಪ್ರಿಯಾಂಕ ಉಪೇಂದ್ರ

ಬೆಂಗಳೂರು, ಅ 19 : ಅಮೋಘ ಅಭಿನಯದ ಮೂಲಕ ಮನೆಮಾತಾಗಿರುವ ಪ್ರಿಯಾಂಕ ಉಪೇಂದ್ರ ಅಭಿನಯದ 1980 ಎಂಬ ಶೀರ್ಷಿಕೆಯ ಚಿತ್ರ ಇದೇ 28 ರಿಂದ ಆರಂಭವಾಗಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಕೊಡಗಿನ‌ ಸುಂದರ ಪರಿಸರದಲ್ಲಿ ನಡೆಯಲಿದೆ. ‘ಸವಾರಿ 2’, ‘ವಸಂತ ಕಾಲ’, ‘ಮಿಸ್ಡ್ ಕಾಲ್’, ‘ಪರಿಧಿ’ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ರಾಜ್ ಕಿರಣ್ ಈ ಚಿತ್ರದ ನಿರ್ದೇಶಕರು. ಇವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.ಪ್ರಿಯಾಂಕ ಉಪೇಂದ್ರ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದ ಉಳಿದ ತಾರಾಬಳಗದಲ್ಲಿ ಅರವಿಂದ್ ರಾವ್, ಶ್ರೀಧರ್, ಮುರಳಿ  ಶರ್ಮ ಮುಂತಾದವರಿದ್ದಾರೆ. ಆರ್ ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚಿಂತನ್ ವಿಕಾಸ್ ಸಂಗೀತ ನಿರ್ದೇಶನ, ಜೀವನ್ ಅಂತೋಣಿ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನವಿದೆ. 

   


ಸುದ್ದಿ ಓದಿ