ಗಂಗಾವತಿ

ಪ್ರಧಾನಿ ಹುಟ್ಟುಹಬ್ಬದ: ಸ್ವಚ್ಛತಾ ಕಾರ್ಯಕ್ರಮ

ಪ್ರಧಾನಿ ಹುಟ್ಟುಹಬ್ಬದ: ಸ್ವಚ್ಛತಾ ಕಾರ್ಯಕ್ರಮ

ಗಂಗಾವತಿ 19: ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ 71ನೇ ಹುಟ್ಟು ಹಬ್ಬದ ಪ್ರಯುಕ್ತ ಸೇವೆ ಮತ್ತು ಸಮರ್ಪಣಾ ಅಭಿಯಾನದಡಿಯಲ್ಲಿ ಗಂಗಾವತಿ ಗ್ರಾಮೀಣ ಮಂಡಲ ಯುವ ಮೋರ್ಚಾ ವತಿಯಿಂದ ಕಿನ್ನಾಳದ 300 ವರ್ಷಕ್ಕೂ ಹಳೆಯದಾದ ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಯಮನೂರಪ್ಪ ಚೌಡ್ಕಿ, ಗ್ರಾಮೀಣ ಮಂಡಲ ಕಾರ್ಯದರ್ಶಿ ಪ್ರಶಾಂತ್ ಕುಲಕರ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಮಾಲಿಪಾಟೀಲ್, ಯುವ ಮೋರ್ಚಾ ಗ್ರಾಮೀಣ ಮಂಡಲ ಅಧ್ಯಕ್ಷ ಮಂಜುನಾಥ ಆರ್ ನಾಯ್ಕ, ಪ್ರಧಾನ ಕಾರ್ಯದರ್ಶಿ ಹುಲುಗಪ್ಪ ಭಜಂತ್ರಿ, ಹಾಗೂ ಕಿನ್ನಾಳ ಗ್ರಾಮದ ಗುರುಹಿರಿಯರು ಕಾರ್ಯಕರ್ತರು, ಗಂಗಾವತಿ ಗ್ರಾಮೀಣ ಮಂಡಲದ ಉಪಾಧ್ಯಕ್ಷರು, ಸರ್ವ ಸದಸ್ಯರು ಮತ್ತು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿ ಓದಿ