ಬೈಲಹೊಂಗಲ

ಗ್ರಾ.ಪಂ ಸದಸ್ಯನಿಗೆ ಪಿಡಿಓ ಕಪಾಳ ಮೋಕ್ಷ: ದೂರು ದಾಖಲು

ಗ್ರಾ.ಪಂ ಸದಸ್ಯನಿಗೆ ಪಿಡಿಓ ಕಪಾಳ ಮೋಕ್ಷ: ದೂರು ದಾಖಲು

ಬೈಲಹೊಂಗಲ 19: ಗ್ರಾ.ಪಂ ಸದಸ್ಯನೋರ್ವನಿಗೆ ಪಿಡಿಓ ಓರ್ವನು ಕ್ಷುಲ್ಲಕ ಕಾರಣಕ್ಕೆ ಕಪಾಳ ಮೋಕ್ಷ ಮಾಡಿದ ಘಟನೆ ತಾಲೂಕಿನ ನಾಗನೂರ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.

ನಾಗನೂರ ಗ್ರಾಮ ಪಂಚಾಯತಿ ಸದಸ್ಯ ಬಸವರಾಜ ಉಣಕಲ್ಲ ಎಂಬವರಿಗೆ ನಾಗನೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವಿನಾಶ ಅಂಗರಗಟ್ಟಿ  ಅವರು ಕಪಾಳಮೋಕ್ಷ ಮಾಡಿದ್ದಾರೆ.

ಘಟನೆ ವಿವರ:  ನಾಗನೂರು ಗ್ರಾಮದ ಒಬ್ಬ ವ್ಯಕ್ತಿಯ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳ ಬಗ್ಗೆ ಪಿಡಿಓ ಅವರನ್ನು ಸದಸ್ಯ ಬಸವರಾಜ ಉಣಕಲ್ಲ ವಿಚಾರಿಸಿದಾಗ ಪಿಡಿಓ ಸದಸ್ಯನಿಗೆ ಯೂಸ್ಲೆಸ್ ಫೆÉಲೋ ಎಂದು ಬೈದು ಇದನ್ನು ಕೇಳಲು ನೀನಾರು ಎಂದು ನಿಂದಿಸಿ ನಿನ್ನ ಕೆಲಸ ನೀನು ಮಾಡು ನನ್ನ ಚೆಂಬರ್‍ಗೆ ಬಂದು ಮಾತನಾಡಬೇಡ ಎಂದು ಹೇಳಿ ಸದಸ್ಯನಿಗೆ ಕಪಾಳಮೋಕ್ಷ ಮಾಡಿದ್ದಾನೆ.

ಇದರಿಂದ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದ ಅಭಿವೃದ್ಧಿ ಮಾಡಲು ಜನರಿಂದ ಚುನಾಯಿತರಾದ ಸದಸ್ಯರಿಗೆ ಈ ರೀತಿ ದರ್ಪ ತೋರಿಸಿದ್ದಾನೆ ಮುಂದೆ ಜನಸಾಮಾನ್ಯರ ಪಾಡೇನು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಕಪಾಳ ಮೋಕ್ಷದಿಂದ ಸದಸ್ಯನ ಕೆನ್ನೆ ಉದಿಕೊಂಡಿದ್ದು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ದೂರು ದಾಖಲಿಸಿದ್ದಾರೆ. ಇದಲ್ಲದೆ ಪಿಡಿಓ ಸಹ ಗ್ರಾ.ಪಂ ಸದಸ್ಯ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆಂದು ಪ್ರತಿದೂರು ಸಲ್ಲಿಸಿದ್ದಾರೆ. ಈ ಕುರಿತು ನೇಸರಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಓದಿ