ಗೋಕಾಕ್

ಪಿಡಿಒ ಉಮೇಶ ಮನಗೂಳಿಗೆ ಸನ್ಮಾನ

ಪಿಡಿಒ ಉಮೇಶ ಮನಗೂಳಿಗೆ ಸನ್ಮಾನ

ಗೋಕಾಕ 8: ನಗರದ ಶೂನ್ಯ ಸಂಪಾದನ ಮಠದಾಶ್ರಯದಲ್ಲಿ ಜರುಗಿದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನವನ್ನು ಆಯೋಜಿಸಲಾಗಿತ್ತು.ಗ್ರಾಮದ ಅಭಿವೃದ್ಧಿಗಾಗಿ ನಿರಂತರ ಕಾಳಜಿವಹಿಸುತ್ತಿರುವ ದುರದುಂಡಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಉಮೇಶ ಮನಗೂಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ  ಸ್ವೀಕರಿಸಿ ಮಾದ್ಯಮದೊಂದಿಗೆ ಮಾತನಾಡಿದ ಪಿಡಿಒ ಉಮೇಶ ಮನಗೂಳಿ ಸರ್ಕಾರಿ ನೌಕರರು ಸಾರ್ವಜನಿಕರ ಸೇವೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಳ್ಳಬೇಕು. ನಮಗೆ ದೇವರ ಸೇವೆ ಮಾಡಲು ಸಿಕ್ಕಿರುವ ಒಳ್ಳೆಯ ಅವಕಾಶವೆಂದು ತಿಳಿಯಬೇಕು. ಇಂಥ ಆಧ್ಯಾತ್ಮ ಪೀಠದಲ್ಲಿ ನನಗೆ ಗೌರವ ಸಲ್ಲುತ್ತಿರುವುದರಿಂದ ಮತ್ತಷ್ಟು ಜನ ಸೇವೆ ಮಾಡಲು ಹಂಬಲ ಹೆಚ್ಚಾಗಿದೆ ಎಂದು ಅಭಿಪ್ರಯ ಪಟ್ಟರು.ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ  ಮಹಾಸ್ವಾಮಿಗಳು, ಕರ್ನಾಟಕ ರಾಜ್ಯ ಕಂಡ ದÀಕ್ಷ ಪೋಲೀಸ್ ಅಧಿಕಾರಿ ರವಿ ಚಣ್ಣನ್ನವರ ಅವರು ಪಿಡಿಒ ಉಮೇಶ ಮನಗೂಳಿ ಅವರನ್ನು ಸನ್ಮಾನಿಸಿದರು. ಘಟಪ್ರಭಾ ಹೆಸ್ಕಾಂ ವಿಭಾಗದ ಮುಖ್ಯ ಲೆಕ್ಕಾಧಿಕಾರಿ ಪ್ರಕಾಶ ಚಿಂಚಲಿ, ಗೋಕಾಕ ನಗರದ ಪಿಡಬ್ಲ್ಯೂಡಿ ಕಿರಿಯ ಇಂಜನೀಯರ್ ಶಿÀವಲಿಂಗ ಪಾಟೀಲ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸುದ್ದಿ ಓದಿ