ಮನರಂಜನೆ

‘ಪಂಕಜ ಕಸ್ತೂರಿ’ ರಚಿತಾ ರಾಮ್ ಹೊಸ ಚಿತ್ರ

‘ಪಂಕಜ ಕಸ್ತೂರಿ’ ರಚಿತಾ ರಾಮ್ ಹೊಸ ಚಿತ್ರ

ಬೆಂಗಳೂರು, ಅ 28: ಡಿಂಪಲ್ ಕ್ವೀನ್ ರಚಿತಾ ರಾಮ್‍ ಬಿಜಿ ನಟಿ.  ಹತ್ತಾರು ಚಿತ್ರಗಳು ಕೈಯ್ಯಲ್ಲಿರುವಾಗಲೇ ಮತ್ತೊಂದು ಹೊಸ ಚಿತ್ರ ‘ಪಂಕಜ ಕಸ್ತೂರಿ’ಯಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ. ಬಹುಕಾಲದ ಗೆಳೆಯ ಹಾಗೂ ನಿರ್ದೇಶಕ ಮಯೂರ ರಾಘವೇಂದ್ರ ನಿರ್ದೇಶನದಲ್ಲಿ ‘ಪಂಕಜ ಕಸ್ತೂರಿ’ ಸಿದ್ಧವಾಗಲಿದ್ದು, ಇದು ಕಾಲಿವುಡ್ ನ ‘ಕೊಲಮಾವು ಕೋಕಿಲ’ ಚಿತ್ರದ ರೀಮೇಕ್ ಆಗಲಿದೆ. 

ಇತ್ತೀಚೆಗಷ್ಟೆ ಈ ಹೊಸ ಚಿತ್ರದ ಕುರಿತು ಘೋಷಣೆಯಾಗಿತ್ತಾದರೂ, ಶೀರ್ಷಿಕೆ ಇನ್ನೂ ಹೊರಬಂದಿರಲಿಲ್ಲ.  ದಸರೆಯ ಶುಭ ಸಂದರ್ಭದಲ್ಲಿ  ಶೀರ್ಷಿಕೆ ರಿವೀಲ್‌ ಮಾಡಲಾಗಿದೆ. ಈ ಹಿಂದೆ ಮಯೂರ ರಾಘವೇಂದ್ರ ನಿರ್ದೇಶನ ಮಾಡಿದ್ದ 'ರಿಷಭಪ್ರಿಯ' ಕಿರುಚಿತ್ರಕ್ಕೆ ರಚಿತಾ ಬಂಡವಾಳ ಹೂಡಿದ್ದರು. ಅಲ್ಲದೆ, ಮಯೂರ ಅವರ ಮೊದಲ ನಿರ್ದೇಶನದ ಸಿನಿಮಾ ‘ಕನ್ನಡ್ ಗೊತ್ತಿಲ್ಲ’ ಚಿತ್ರಕ್ಕೆ ರಚಿತಾ ಅವರೇ ನಾಯಕಿ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ 'ಪಂಕಜ ಕಸ್ತೂರಿ' ಮೂಲಕ ಈ ಜೋಡಿ ಒಂದಾಗಿದೆ.ಮೂಲ ಸಿನಿಮಾ ಕೊಲಮಾವು ಕೋಕಿಲಾ ದಲ್ಲಿ ನಟಿ ನಯನತಾರಾ ನಿಭಾಯಿಸಿದ್ದ ಪಾತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಇನ್ನುಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಕುರಿತು ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ. 

  


ಸುದ್ದಿ ಓದಿ