ಆಕ್ಸಪರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆ ಫಲಿತಾಂಶ ಶೇ.100
ಸಿಂದಗಿ24: ಸ್ಥಳೀಯ ಪ್ರಕಾಶ ಚೌಧರಿ ಅವರ ಆಕ್ಸಪರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಫಲಿತಾಂಶ ಶೇ.100ರಷ್ಟಾಗಿದೆ. ಪರೀಕ್ಷೆಗೆ ಹಾಜರಿದ್ದ ಎಲ್ಲ 35 ವಿದ್ಯಾರ್ಥಿಗಳ ಪೈಕಿ 32 ಡಿಸ್ಟಿಂಕ್ಷನ್,3ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಅಂಕಿತಾ ದೊಡಮನಿ 625ಕ್ಕೆ 619 ಅಂಕ, ಭಾಗ್ಯಶ್ರೀ ಬಿರಾದಾರ 616, ನೇತ್ರಾ ಕುಂಬಾರ 611, ರಮ್ಯಾ ಅತನೂರ 605, ರಾಜೇಶ್ವರಿ ಜಂಗಿನಮಠ 602, ರಾಮಚಂದ್ರ ಪಾಟೀಲ 602, ಆನಂದ ಬಗಲಿ 601, ಗಣೇಶ ಬಿರಾದಾರ 600, ಲಿಂಗೇಶ ಶಿವಣಗಿ 600 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಪ್ರಥಮ ಭಾಷೆ ಇಂಗ್ಲೀಷ 12 ಜನ ವಿದ್ಯಾರ್ಥಿಗಳು, ದ್ವಿತೀಯ ಭಾಷೆ ಕನ್ನಡದಲ್ಲಿ 17 ತೃತೀಯ ಭಾಷೆ ಹಿಂದಿಯಲ್ಲಿ 19 ಜನ ವಿದ್ಯಾರ್ಥಿಗಳು, ಗಣಿತ ವಿಷಯದಲ್ಲಿ 9 ಜನ, ಸಮಾಜ ವಿಜ್ಞಾನದಲ್ಲಿ 16 ಜನ ಹಾಗೂ ವಿಜ್ಞಾನದಲ್ಲಿ 6 ಜನ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಸಾಧಕರೂ ಸೇರಿ ಪಾಸಾದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಚೌಧರಿ, ಮುಖ್ಯೋಪಾಧ್ಯಾಯ ವಿಶ್ವನಾಥ ಯಾತನೂರ, ಆಢಳಿತ ಮಂಡಳಿವರ್ಗ, ಶಿಕ್ಷಕರು ಹರ್ಷ ವ್ಯಕ್ತ ಪಡೆಸಿದ್ದಾರೆ.