ತುಂಬಿ ಹರಿಯುತ್ತಿರುವ ಉಮದ್ವತೆ : ಬಾಗಿನ ಅರ್ಪಿಸಿದ ಶಾಸಕ ಪ್ರಕಾಶ್ ಕೋಳಿವಾಡ
ರಾಣೇಬೆನ್ನೂರು :ಜು 28- ತಾಲೂಕಿನ ಹರಿದು ಹೋಗಿರುವ ತುಂಗಭದ್ರೆ ಹಾಗೂ ಕುಮದ್ವತಿ ಜನರ ಮತ್ತು ರೈತರ ಜೀವನಾಡಿಯಾಗಿದೆ. ನೀರು ಕೇವಲ ನೀರಲ್ಲ ಇದು ಜೀವ ಜಲವಾಗಿದೆ. ಭವಿಷ್ಯದಲ್ಲಿ ನೀರಿಗಾಗಿ ಯುದ್ಧವಾಗುವ ಕಾಲ ದೂರವಿಲ್ಲ ಅದಕ್ಕಾಗಿ ಜಲವನ್ನು ರಕ್ಷಿಸುವ ಕಾರ್ಯವು ಈಗಿನಿಂದಲೇ ನಡೆಯಬೇಕಾದ ಅಗತ್ಯವಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಅವರು ರವಿವಾರ, ತಾಲೂಕಿನ ಮುಸ್ಟೂರು ಲಿಂಗದಹಳ್ಳಿ ಬಳಿಯ, ಬರಪುರ್ ಹರಿದು ಹೋಗುತ್ತಿರುವ, ಕುಮದ್ವತಿ ನದಿಗೆ, ತಾಲೂಕಿನ ಸಮಗ್ರ ರೈತರು, ಹಾಗೂ ಸಾರ್ವಜನಿಕರ ಪರವಾಗಿ ಬಾಗಿನ ಸಮರ್ಿಸಿ, ನಂತರ ಮಾಧ್ಯಮದವರೊಂದಿಗೆ ಜೀವ ಜಲ ಮಹತ್ವ ಕುರಿತಂತೆ ಮಾತನಾಡಿದರು. 2023ರಲ್ಲಿ ನದಿ ಹೊಳೆ ಕೆರೆ ಕಟ್ಟೆಗಳು, ಬರಿದಾಗಿ ನೀರಿನ ಕ್ಷಮ ವನ್ನು ಎದುರಿಸುವಂತಹಾಗಿತ್ತು. ರೈತರ ಬೆಳಗಾಗಿ, ಮೋಡ ಬಿತ್ತನೆಗೆ ಸಹ ಮುಂದಾಗಿದ್ದೆವು.
ಕುಡಿಯಲು ನೀರಿಗೂ ಸಹ ಆಹಾಕಾರವೆದ್ದಿತ್ತು. ಭಗವಂತನದಯೆ ಅಷ್ಟರಲ್ಲಿ ಸಮಸ್ಯೆ ಪರಿಹಾರ ಕಾಣುವಂತಾಯಿತು ಎಂದರು. 2024 ಈ ಬಾರಿ ಎಲ್ಲೆಡೆಯೋ ಸಂಪೂರ್ಣ ಮತ್ತು ಪರಿಪೂರ್ಣ ಮಳೆಯಾಗಿದ್ದರಿಂದ ದೃಷ್ಟಿ ಹರಿಸಿದಲ್ಲೆಡೆಯೋ, ನೀರೇ, ನೀರು. ಇದರಿಂದ ನಾಡಿನ, ಜಿಲ್ಲೆಯ ಮತ್ತು ತಾಲೂಕಿನ ಅಷ್ಟೇ ಅಲ್ಲದೇ,ಉತ್ತರ ಕರ್ನಾಟಕದ ಜನರು ಸಂತೃಪ್ತರಾಗಿದ್ದಾರೆ ಎಂದು ವಿಶ್ಲೇಷಿಸಿದ ಅವರು, ಬರಪೂರು ಮಳೆಯಿಂದಾಗಿ ಕೆಲವು ಭಾಗಗಳಲ್ಲಿ, ನದಿ ಪಾತ್ರಗಳಲ್ಲಿ ಹಾದು ಹೋಗಿರುವ, ನೀರಿನಿಂದ ಬೆಳೆ ಹಾನಿಯಾಗಿರಬಹುದು ಅದಕ್ಕೆ ಸೂಕ್ತ ಪರಿಹಾರ ದೊರೆಯಲಿದೆ.
ಆದರೆ ಮಳೆಯೇ ಬಾರದೆ ಇದ್ದಿದ್ದರೆ ಮತ್ತೊಂದು ಜಲ ಕ್ಸಾಮಮವನ್ನು ಎದುರಿಸಬೇಕಾಗುತ್ತಿತ್ತು. ಅದು ತಪ್ಪಿದಂತಾಗಿದೆ ಎಂದರು. ಸದ್ಯ ಭೂಮಿ ಮೇಲೆ ಇರುವ ಪ್ರಾಣಿ ಪಕ್ಷಿಗಳು ಮತ್ತು ಮಾನವ ಜೀವಿಗಳಿಗೆ ಶೇ,0,8 ರಸ್ಟು ನೀರು ಮಾತ್ರ ಇದೆ. ಇದನ್ನು ಇದೀಗ ಬಳಕೆಯಲ್ಲಿದ್ದರೂ ಇದು ಸಹ ರಕ್ಷಿಸುವ ಕಾರ್ಯ ನಡೆಯಬೇಕಾಗಿದೆ. ಬಿದ್ದ ಮಳೆಯನ್ನು, ಇಂಗು ಗುಂಡಿಯ ಮೂಲಕ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಗ್ರಹಿಸಬೇಕಾಗಿದೆ ಇದರಿಂದ ಅಂತರ್ಜಲ ಹೆಚ್ಚಳವಾಗಿ ಹೇರಳವಾಗಿ ನೀರು ಪಡೆಯಬಹುದು ಎಂದು ವಿವರಿಸಿದರು.
ತಾಲೂಕಿನಲ್ಲಿ ಕೆಲವು ಭಾಗಗಳಲ್ಲಿ ನದಿ ಪಾತ್ರದಲ್ಲಿನ ಬ್ಯಾರೇಜ್ಗಳನ್ನು ನಿರ್ಮಿಸುವುದರ ಜೊತೆಗೆ ಅವುಗಳನ್ನು ಎತ್ತರಿಸುವ ಕಾರ್ಯವು ನಡೆಯಲು ತಾವು ಕ್ರಿಯಾಯೋಜನೆ ರೂಪಿಸಲು ಮುಂದಾಗಿದ್ದು, ಗ್ರಾಮೀಣ ಪ್ರದೇಶದಲ್ಲಿನ ನಾಗರಿಕರೊಂದಿಗೆ ಈ ಕುರಿತಂತೆ ಸಮಾಲೋಚನೆ ನಡೆಸಿ ಆದಷ್ಟು ಬೇಗನೆ ಯೋಜನೆ ರೂಪಿಸಿ ಮುಂದಾಗುವುದಾಗಿ ಶಾಸಕ ಪ್ರಕಾಶ್ ಕೋಳಿವಾಡ ಅವರು, ಭರವಸೆ ನೀಡಿದರು. ಬಾಗಿನ ಸಮರಾ್ಣ ಕಾರ್ಯಕ್ರಮದಲ್ಲಿ, ಪಕ್ಷದ ಮುಖಂಡರಾದ ಬಿ.ಎಸ್.ಮರದ, ನೀಲಕಂಠಪ್ಪ ಕುಸುಗೂರು, ರವೀಂದ್ರಗೌಡ ಪಾಟೀಲ್, ಮಂಜನ ಗೌಡ ಪಾಟೀಲ್, ವೀರೇಶ್ ಮೋಟಗಿ, ಪುಟ್ಟಪ್ಪ ಮರಿಯಮ್ಮನವರ, ಸಣ್ಣತಮ್ಮಪ್ಪ ಬಾರ್ಕಿ, ಬಸವರಾಜ ಹುಚ್ಚಗೊಂಡರ, ಶೇಖಣ್ಣ ಹೊಸಗೌಡ್ರು ಕೃಷ್ಣಪ್ಪ ಕಂಬಳಿ, ರಮೇಶ ಬಿಸಲಹಳ್ಳಿ, ಗೀರೀಶ್ ಮಾಗನೂರ, ಹರಿಹರಗೌಡ ಪಾಟೀಲ, ಬಸವಣ್ಣಪ್ಪ ದೇವರಮನಿ, ಜಿ.ಎಂ. ದೇವರಮನಿ ಸೇರಿದಂತೆ ಆ ಭಾಗದ ವಿವಿಧ ಗ್ರಾಮಗಳ, ಗ್ರಾ. ಪಂ.ಅಧ್ಯಕ್ಷರು, ಮುಖಂಡರು ಪದಾಧಿಕಾರಿಗಳು, ರೈತರು ಪಾಲ್ಗೊಂಡಿದ್ದರು.ಊ28-ಖಓಖ02-ನ್ಯೂಸ್. ಅಂಡ್ಫೋಟೋ. ಋಠಿ.