ಹೂವಿನ ಹಡಗಲಿ

ಹೂವಿನಹಡಗಲಿಯಲ್ಲಿ ಒಳ ಮೀಸಲು ಶಿಫಾರಸಿಗೆ ಆಕ್ರೋಶ: ಪ್ರತಿಭಟನೆ ; 32 ತಾಂಡಗಳಲ್ಲಿ ವಿಧಾನ ಸಭೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ

ಹೂವಿನಹಡಗಲಿಯಲ್ಲಿ ಒಳ ಮೀಸಲು ಶಿಫಾರಸಿಗೆ ಆಕ್ರೋಶ: ಪ್ರತಿಭಟನೆ  ; 32 ತಾಂಡಗಳಲ್ಲಿ ವಿಧಾನ ಸಭೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ

ಲೋಕದರ್ಶನ ವರದಿ 

ಹೂವಿನಹಡಗಲಿ.ಮಾ.31- ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ ಮಾಡದೇ ರದ್ದುಪಡಿಸುವಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ,ಬಂಜಾರ,ಭೋವಿ,ಕೊರಮ ಹಾಗೂ ಕೊರಚ ಸಮುದಾಯದವರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟಿಸಿ ತಹಶೀಲ್ದಾರ ಕೆ.ಶರಣಮ್ಮ ಅವರಿಗೆ ಮನವಿ ಸಲ್ಲಿಸಿದರು. 

ಪಟ್ಟಣದ ಶಾಸ್ತ್ರೀವೃತ್ತದಲ್ಲಿ ಪ್ರತಿಭಟನೆ ಆರಂಭಿಸಿ,ಕೆಲಕಾಲ ರಸ್ತೆ ತಡೆ ಮಾಡಿದರು.ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಂಜಾರ ಸಮಾಜದ ಶಿವಪ್ರಕಾಶ್ ಸ್ವಾಮೀಜಿ ಮಾತನಾಡಿ ಸದಾಶಿವ ಆಯೋಗದ ವರದಿ ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿರುವುದನ್ನು ಖಂಡಿಸಿದರು ಜತೆಗೆ ತಾಲೂಕಿನ 32 ತಾಂಡಾಗಳಲ್ಲಿ ಪಕ್ಷತೀತವಾಗಿ ವಿಧಾನಸಭೆ ಚುನಾವಣೆ ಬಹಿಷ್ಕಾರಿಸಲಾಗುತ್ತದೆ ಎಂದು ರಾಜಕಾರಣಿಗಳ ವಿರುದ್ಧ ಕಿಡಿಕಾರಿದರು.  

ಪ್ರಭಟನೆಯಲ್ಲಿ ಯುವಕರು ಹಲಗಿ ಬಾರಿಸುವ ಮೂಲಕ ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಕೊಟ್ರೇಶನಾಯ್ಕ, ಡಾ.ಎಲ್‌.ಪಿ.ಕಠಾರಿನಾಯ್ಕ, ಶ್ರೀನಿವಾಸ ಭೋವಿ, ಜಿ.ಶಾಂತನಾಯ್ಕ ಮಾತನಾಡಿ ಸರ್ಕಾರ ಒಳಮೀಸಲಾತಿ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಸರ್ಕಾರ ವರದಿಯನ್ನು ಜಾರಿ ಮಾಡಬಾರದು ಎಂದು ಒತ್ತಾಯಿಸಿದರು. ಮಾರ​‍್ಪ, ದಾಸರಹಳ್ಳಿ ತಾಂಡದ ಸುರೇಶ, ಜಯನಾಯ್ಕ, ವಿಜಯಕುಮಾರ, ಎಸ್‌.ಸೇವ್ಯಾನಾಯ್ಕ, ಶ್ರೀಧರನಾಯ್ಕ, ಬಿ.ಶೇಖರನಾಯ್ಕ, ನೀಲನಾಯ್ಕ, ಮೀರಬಾಯಿ, ಲಕ್ಷ್ಮೀಬಾಯಿ, ಸುರೇಶ ಶಿವಪುರ, ಮಹಾಬಲೇಶ್ವರ ಇದ್ದರು. 


ಸುದ್ದಿ ಓದಿ