ಎಲ್ಲ ರಂಗಗಳಲ್ಲಿ ನಮ್ಮ ಸಮಾಜ ಮುಂದೆ ಬರಬೇಕು, ಸಂಘಟಿತರಾಗಿ: ಮಲ್ಲಿಕಾರ್ಜುನ
ಲೋಕದರ್ಶನ ವರದಿ
ಶಿಗ್ಗಾವಿ : ತಾಲೂಕ ಹಡಪದ ಅಪ್ಪಣ್ಣ ಸೇವಾ ಸಂಘದ ವತಿಯಿಂದ ಹಡಪದ ಅಪ್ಪಣ್ಣನವರ 889 ಜಯಂತ್ಯೋತ್ಸವ ನಿಮಿತ್ತ ಹಡಪದ ಅಪ್ಪಣ್ಣ ಸಮಾಜದ ಸಮಾವೇಶ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮವು ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಜರುಗಿತು.
ಪ್ರಾಸ್ಥಾವಿಕವಾಗಿ ಮಾತನಾಡಿದ ಸಮಾಜದ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ ಮಾತನಾಡಿ ಎಲ್ಲ ರಂಗಗಳಲ್ಲಿ ನಮ್ಮ ಸಮಾಜ ಮುಂದೆ ಬರಬೇಕ, ನಾವು ಸಂಘಟಿತರಾಗಬೇಕು, ಸಂಗನಬಸವ ಶ್ರೀಗಳ ಆಶಿರ್ವಾದದಿಂದ ನಮ್ಮ ಸಮಾಜ ಬೆಳೆಯುತ್ತಿದೆ,ಇಂದು ನಮ್ಮ ಸಮಾಜ ನೋವಿನಿಂದ ಸಮಯ ಕಳೆಯುತ್ತಿದೆ ಸೌಲಭ್ಯಗಳಿಂದ ವಂಚಿತವಾಗಿದೆ, ಕೈಯಲ್ಲಿ ಕತ್ತಿಯಿದ್ದರು ಕತ್ತು ಕುಯದ ಸಮಾಜ ನಮ್ಮದು, ಪ್ರಾಮಾಣಿಕತೆಯ ಕಾಯಕದ ಸಮಾಜ ನಮ್ಮದು, ಎಲ್ಲ ಸಮಾಜದವರು ನಮ್ಮನ್ನು ಮತೃ ಹೃದಯದಿಂದ ಕಾಣುತ್ತಿದ್ದಾರೆ, ಸರ್ಕಾರಿ ಜಯಂತಿಯನ್ನಾಗಿ ಆಚರಿಸಲು ಕಾರಣಿಕರ್ತರಾದ ಸಿ ಎಂ ಸಿದ್ದರಾಮಯ್ಯನವರಿಗೆ, ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿದ ಮಾಜಿ ಸಿಎಂ ಬೊಮ್ಮಾಯಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೆವೆ, ಪಟ್ಟಣದಲ್ಲಿ ಒಂದು ಸಮುದಾಯ ಭವನದ ಅವಶ್ಯವಿದೆ ಎಂದರು.
ಕಾರ್ಯಕ್ರಮದ ಸಾನಿದ್ಯವನ್ನು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು.
ಸೋಮಣ್ಣ ಬೇವಿನಮರದ ಮಾತನಾಡಿ ಸಮಾಜದಲ್ಲಿ ಸೋಲು ಗೆಲುವು ಮುಖ್ಯವಲ್ಲ ಸಮಾಜದ ಜೊತೆ ನಿರಂತರ ಸಂಪರ್ಕ ಹೊಂದಿರಬೇಕು, ಮನೆಯಲ್ಲಿ ಸಂಸ್ಕಾರ ಇರಬೇಕು,ಈ ಸಮೂದಾಯ ಇರದಿದ್ದರೆ ಕಾಡು ಮನುಷ್ಯರಿಗೆ ಹೊಲಿಸಬೇಕಾಗಿತ್ತು,ಎಂದರು
ಯಾಸಿರಖಾನ್ ಪಠಾಣ ಮಾತನಾಡಿ ಸಂವಿಧಾನಕ್ಕಿಂತ ಕಡಿಮೆ ಅಲ್ಲ ಬಸವಣ್ಣನವರ ವಚನಗಳು, ಇಂದು ಸಮಾಜದಲ್ಲಿ ಹೆಯ ಕೃತ್ಯಗಳು ನಡೆಯುತ್ತಿವೆ ನಾಗರಿಕ ಸಮಾಜ ತಲೆ ತಗ್ಗಿಸುವಂತ ಘಟನೆಗಳು ನಡೆಯುತ್ತಿವೆ, ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಉತ್ತಮ ಸಂಸ್ಕಾರ ನೀಡಿ ಎಂದರು.
ಹಡಪದ ಅಪ್ಪಣ್ಣ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿಲಾಯಿತು.
ಪಕ್ಕೀರಪ್ಪ ಕುಂದೂರ, ಡಿ.ಎಸ್.ಮಾಳಗಿ, ಸಿ.ಎಸ್.ಪಾಟೀಲ, ಕರೆಪ್ಪ ಕಟ್ಟಿಮನಿ, ಸಮಾಜದ ಗೌರವಾಧ್ಯಕ್ಷ ಬಸವರಾಜ ಹಡಪದ, ಮುತ್ತು ಹಡಪದ, ಶಿವು ಹಡಪದ, ವಿರೇಶ ಹಡಪದ, ಸೇರಿದಂತೆ ವಿವಿಧ ಸಮಾಜದ ಮತ್ತು ಸಮಾಜದ ಗಣ್ಯಮಾನ್ಯರು ಉಪಸ್ಥಿತರಿದ್ದರು. ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು.