ನಮ್ಮ ಶಾಸಕರು ಆರೋಗ್ಯವಾಗಿದ್ದಾರೆ: ಈರಣ್ಣಾ ಚಂದರಗಿ
ಲೋಕದರ್ಶನ ವರದಿ
ಯರಗಟ್ಟಿ 16: ತಾಲೂಕಿನ ಜನತೆ ಭಯಪಡುವ ಅಗತ್ಯವಿಲ್ಲ ನಮ್ಮ ಜನಪ್ರೀಯ ಶಾಸಕರು ಆರೋಗ್ಯವಾಗಿದ್ದಾರೆ ಎಂದು ತಾಲೂಕಾ ಭಾಜಪಾ ಅಧ್ಯಕ್ಷ ಈರಣ್ಣಾ ಚಂದರಗಿ ಹೇಳಿದರು.
ಯರಗಟ್ಟಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಂಡು ಮಾತನಾಡಿದ ಅವರು ತಾಲೂಕಿನ ಜನತೆ ಭಯಪಡುವ ಅಗತ್ಯವಿಲ್ಲ ನಮ್ಮ ಜನಪ್ರೀಯ ಶಾಸಕರು ಆರೋಗ್ಯವಾಗಿದ್ದಾರೆ ಹಾಗೂ ಬರುವ ಸೆ. 17 ರಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಪ್ರತಿ ಬೂತ್ ಮಟ್ಟದಲ್ಲಿ ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ, ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ ಮಾಡಲು ವಿಧಾನ ಸಭಾ ಉಪ ಸಭಾಧ್ಯಕ್ಷ ಆನಂದ ಮಾಮನಿ ತಿಳಿಸಿದ್ದಾರೆ ಎಂದು ಭಾಜಪಾ ಅಧ್ಯಕ್ಷರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರೇಶಖರ ಅಳಗೋಡಿ, ಡಾ. ಶಂಕರಲಿಂಗಪ್ಪ ಮಹಾಂತೇಶ ಗೋಡಿ, ಬಸವರಾಜ ಇಂಚಲ, ಚೇತನ ಜಕಾತಿ, ಅಶೋಕ ಹುಂಡೇಕಾರ, ಸದಾನಂದ ಪಾಟೀಲ, ಸುರೇಶ ಬಂಟನೂರ, ನಾಗಪ್ಪ ಪುಂಜಿ, ಬಸವರಾಜ ಪಟ್ಟಣಶೆಟ್ಟಿ, ಕಾಡಪ್ಪ ವೀರಶೆಟ್ಟಿ ಸೇರಿದಂತೆ ಭಾರತೀಯ ಜನತಾ ಪಾರ್ಟಿ ಕಾರ್ಯಕತರು ಉಪಸ್ಥಿತರಿದ್ದರು.
ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರ ಆರೋಗ್ಯದ ಕುರಿತು ಮಾದ್ಯಮಗಳಲ್ಲಿ ಹರಿದಾಡಿದ ಊಹಾಪೋಹಕ್ಕೆ ಸ್ವತಃ ಅವರೇ ಆರೋಗ್ಯವಾಗಿದ್ದೇನೆಂದು ವಿಡಿಯೋ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಅನಾರೋಗ್ಯ ಇರುವುದು ನಿಜ. ಆದರೆ ಗಂಭೀರ ಸಮಸ್ಯೆ ಏನಿಲ್ಲ. ಮನುಷ್ಯನಿಗೆ ಆರೋಗ್ಯದಲ್ಲಿ ಏರುಪೇರು ಸಹಜ. ಸಧ್ಯ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಮಧುಮೇಹ ಸೇರಿ ಇತರ ಗಂಭೀರ ಕಾಯಿಲೆಗಳಿಂದ ಸ್ಥಿತಿ ಚಿಂತಾಜನಕದ ಕುರಿತು ಮಾದ್ಯಮದಲ್ಲಿ ಹರಡಿದ ವರದಿ ಸುಳ್ಳು. ಇದು ಸತ್ಯಕ್ಕೆ ದೂರವಾದ ಮಾತು.
ಜಾಲಿಕಟ್ಟಿ ಬಸವೇಶ್ವರ, ಎಲ್ಲಮ್ಮನ ಆಶೀರ್ವಾದ ಮತ್ತು ಕುಟುಂಬಸ್ಥರ ಸಹಕಾರದಿಂದ ಸಮಸ್ಯೆಯಿಲ್ಲ. ಸಿ.ಎಮ್ ಬೊಮ್ಮಾಯಿ, ಯಡಿಯೂರ್ಪ ಸೇರಿ ಹಲವು ನಾಯಕರು ದೂರವಾಣಿ ಮೂಲಕ ಚರ್ಚಿಸಿದ್ದಾರೆ. ಕಾರ್ಯಕರ್ತರು ಮತ್ತು ತಾಲೂಕಿನ ಮಹಾಜನತೆ ವದಂತಿಗೆ ಕಿವಿ ಕೊಡದಿರಿ. ಶೀಘ್ರ ಸಂಪೂರ್ಣ ಗುಣಮುಖನಾಗಿ ಮತ್ತೆ ನಿಮ್ಮೆಲ್ಲರ ಸೇವೆಗೆ ಬರುವೆ ಎಂದಿದ್ದಾರೆ.