ಬಿಪಿಟಿ ವಿದ್ಯಾರ್ಥಿಗಳ ಹೊಸ ಬ್ಯಾಚ್‌ಗಾಗಿ ಓರಿಯಂಟೇಶನ್ ಕಾರ್ಯಕ್ರಮ
ಹುಬ್ಬಳ್ಳಿ,06: ಹುಬ್ಬಳ್ಳಿಯ ಕೆಎಲ್‌ಇ ಕಾಲೇಜ ಆಫ್ ಫಿಸಿಯೋಥೆರಫಿ ಯ 2025 ರ ಬಿಪಿಟಿ ವಿದ್ಯಾರ್ಥಿಗಳ ಹೊಸ ಬ್ಯಾಚ್‌ಗಾಗಿ ಓರಿಯಂಟೇಶನ್ ಕಾರ್ಯಕ್ರಮದ ಭಾಗವಾಗಿ ಆ.05. 2024 ರಂದು ಸಾಯಂಕಾಲ ನಡೆದ ಕಾರ್ಯಕ್ರಮದಲ್ಲಿ ಜಿ. ದೇವಕಿ ಯೋಗಾನಂದ ಅವರು ಉದ್ಯಮಶೀಲತೆ ಮತ್ತು ಸ್ವಯಂ ಅಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು.
ಹುಬ್ಬಳ್ಳಿ ಧಾರವಾಡದ ಡಿಸಿಪಿ ರವೀಶ್ ಮುಖ್ಯ ಅತಿಥಿ ಆಗಮಿಸಿ ಆನ್‌ಲೈನ್ ಸೈಬರ್ ಕ್ರೈಮ್ ಮತ್ತು ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಬಗ್ಗೆ ತಿಳುವಳಿಕೆ ನೀಡಿದರು, ವೇದಿಕೆಯ ಮೇಲೆ ಎಸಿಪಿ ಶಿವರಾಜ್ ಮತ್ತು ಸೈಬರ್ ಅಪರಾಧ ಜಾಗೃತಿ ಸೆಷನ್ ನ ಇನ್ಸಪೆಕ್ಟರ್ ಬಿ.ಕೆ.ಪಾಟೀಲ ಉಪಸ್ಥಿತರಿದ್ದು ಇದರ ಅಧ್ಯಕ್ಷತೆಯನ್ನು ಕೆಎಲ್‌ಇ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಶಾಂತ ಮುಕ್ಕಣ್ಣನವರ್ ಉಪಸ್ಥಿತರಿದ್ದರು.
ಕೆಎಲ್‌ಇ ಕಾಲೇಜ ಆಫ್ ಫಿಸಿಯೋಥೆರಪಿ ಬಿಪಿಟಿ ಹೊಸ ಬ್ಯಾಚ್‌ನ ಹಲವಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು.