ಆರ್ಯನ್ ಪಬ್ಲಿಕ್ ಶಾಲೆಯಲ್ಲಿ ಅಂತರ ಶಾಲಾ ಅಥ್ಲೆಟಿಕ್ ಕೂಟವನ್ನು ಏರು್ಡ
ಆರ್ಯನ್ ಪಬ್ಲಿಕ್ ಶಾಲೆಯಲ್ಲಿ ಅಂತರ ಶಾಲಾ ಅಥ್ಲೆಟಿಕ್ ಕೂಟವನ್ನು ಏರು್ಡ
ಧಾರವಾಡ 15 : ನಾರ್ಥ ಕರ್ನಾಟಕ ಸಹೋದಯ ಬಳಗವು ಆರ್ಯನ್ ಪಬ್ಲಿಕ್ ಶಾಲೆಯಲ್ಲಿ ತನ್ನ ಬಳಗದ ಅಡಿಯಲ್ಲಿ ಬರುವ ಶಾಲೆಗಳಿಗಾಗಿ ಅಂತರ ಶಾಲಾ ಅಥ್ಲೆಟಿಕ್ ಕೂಟವನ್ನು ಏರಿ್ಡಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಜೆ.ಎಸ್.ಎಸ್. ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳು 6 ಬಂಗಾರದ ಪದಕ, 6 ಬೆಳ್ಳಿ ಪದಕ, 1 ಕಂಚು ಹಾಗೂ ಬಾಲಕರ ವೈಯಕ್ತಿಕ ವೀರಾಗ್ರಣಿ ಪದಕವನ್ನು ಪಡೆದಿರುತ್ತಾರೆ. ಹಾಗೂ ನಮ್ಮ ಶಾಲೆಯು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆಯುವ ಮೂಲಕ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಈ ಸಾಧನೆಗೆ ಜೆ.ಎಸ್.ಎಸ್ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಅಜಿತ್ ಪ್ರಸಾದ ಜೆ.ಎಸ್.ಎಸ್. ಐ.ಟಿ.ಐ ಕಾಲೇಜಿನ ಪ್ರಾಂಶುಪಾಲರಾದ ಮಹಾವೀರ ಉಪಾದ್ಯೆ ಹಾಗೂ ಶಾಲೆಯ ಪ್ರಾಂಶುಪಾಲರಾದ ಸಾಧನಾ ಎಸ್ ಇವರು ವಿದ್ಯಾರ್ಥಿ ಹಾಗೂ ಕೋಚ್‌ಗಳಾದ ಗೀರೀಶ್ ಹಾವನೂರ ಮತ್ತು ಮೀನಾಕ್ಷಿ ಹೊಸಮನಿ ಇವರನ್ನು ಅಭಿನಂದಿಸಿದರು.