ಇಂಡಿ

ಅಂಬೇಡ್ಕರ್‌ಯವರ ವಿಚಾರ ಮೈಗೂಡಿಸಿಕೊಂಡು ಸಂಘಟನೆ ಮಾಡಿ: ಪಾಟೀಲ

ಅಂಬೇಡ್ಕರ್‌ಯವರ ವಿಚಾರ ಮೈಗೂಡಿಸಿಕೊಂಡು ಸಂಘಟನೆ ಮಾಡಿ: ಪಾಟೀಲ

ಇಂಡಿ: ಡಾ. ಬಿ.ಆರ್‌. ಅಂಬೇಡ್ಕರರವರ ತತ್ವಾದರ್ಶಗಳನ್ನು ಪಾಲಿಸುತ್ತ ಅವರ ಹಾದಿಯಲ್ಲೆಯೇ ನಡೆದು ಸಮಾಜಕ್ಕಾಗಿ ಏನ್ನಾದರೂ ಒಳಿತು ಮಾಡುವ ಉದ್ದೇಶದಿಂದ ಭೀಮ್ ಆರ್ಮಿಯನ್ನು ಸಂಘಟಿತರಾಗಬೇಕು ಎಂದು ಜೆಡಿಎಸ್ ತಾಲೂಕ ಅಧ್ಯಕ್ಷ ಬಿ.ಡಿ. ಪಾಟೀಲ ಹೇಳಿದರು. 

ಶುಕ್ರವಾರ ತಾಲೂಕಿನ ಹಂಜಗಿ ಗ್ರಾಮದಲ್ಲಿ ಭೀಮ ಆರ್ಮಿ ಭಾರತ ಏಕತಾ ಮಿಷನ್ ಜಿಲ್ಲಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. 

ಬುದ್ದ, ಬಸವಣ್ಣ, ಅಂಬೇಡ್ಕರ್ ರವರ ವಿಚಾರಗಳನ್ನು ಮೈಗೂಡಿಸಿಕೊಂಡು ಸಂಘಟನೆ ಮಾಡಿ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ವಿಚಾರವನ್ನು ಜನಸಾಮಾನ್ಯರಲ್ಲ್ಲಿ ಮುಟ್ಟಿಸಲು ಈ ಸಂಘಟನೆ ಮಾಡಿ. ಶೋಷಿತರ ಬಡವರ, ಮಹಿಳೆಯರ, ದೀನ ದಲಿತರ ಪರವಾದ ಕಾಳಜಿಯನ್ನು ಹೊಂದಿದ ಸಂಘಟನೆ ಸಮಾಜದ ಕನಸು ನನಸು ಮಾಡಲಿ ಎಂದು ಹಾರೈಸುತ್ತೇನೆ ಎಂದರು. 

 ಬಂದಗಿಸಾಬ ಇನಾಮದಾರ, ಯಾಸಿನ್ ಮುಲ್ಲಾ, ಅಯೂಬ್ ನಾಟೀಕರ, ಮಾಲನಬಿ ಚೌಧರಿ, ಶರಣು ಕೂಟ್ಟಲಗಿ, ತೌಫಿಕ್, ದೀಪು, ಶಿವು ಮುರಗುಂಡಿ, ಮಲಕ್ಕಪ್ಪ ತಡಲಗಿ, ಚನ್ನಪ್ಪ ಬಿರಾದಾರ, ಭೀಮರಾಯ ವಾಡಿ, ಶಬ್ಬು ಟೇನಷನರಿ, ರೇಣುಕಾ ವಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು  ತಾಲೂಕಿನ ಹಂಜಗಿ ಗ್ರಾಮದಲ್ಲಿ ಭೀಮ ಆರ್ಮಿ ಭಾರತ ಏಕತಾ ಮಿಷನ್ ಜಿಲ್ಲಾ ಘಟಕ ಉದ್ಘಾಟಿಸಿ ಬಿ.ಡಿ. ಪಾಟೀಲ ಮಾತನಾಡಿದರು. 


ಸುದ್ದಿ ಓದಿ