ತಾಲೂಕಿನಾದ್ಯಂತ ಸುವ್ಯವಸ್ಥೆಯಿಂದ ಮತದಾನ
ರಾಣಿಬೆನ್ನೂರ 08: ತಾಲೂಕಿನಾದ್ಯಂತ ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಮತದಾನವು ಬಹುತೇಕವಾಗಿ ಶಾಂತಿಯುತ ಹಾಗೂ ಸುವ್ಯವಸ್ಥೆಯಿಂದ ನಡೆಯಿತು.
ಕೆಲವೆಡೆ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಎಲ್ಲೆಡೆ ಶಾಂತಿಯುತ ಮತದಾನವಾಗಿದ್ದು ಕಂಡು ಬಂದಿದೆ ಎಂದು ತಾಲೂಕ ಆಡಳಿತ ಮತ್ತು ಪೋಲಿಸ್ ಇಲಾಖೆಯು ತಿಳಿಸಿದೆ. ಬೆಳಿಗ್ಗೆಯಿಂದಲೇ ಮತದಾನವು ಬಹಳಷ್ಟು ತುರಿಸಿನಿಂದ ನಡೆದ ಬಗ್ಗೆ ವರದಿಯಾಗಿದೆ. ಬಹುತೇಕ ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಸರದಿಯಲ್ಲಿ ಭಾಗವಹಿಸಿದ್ದು ಕಂಡು ಬಂದಿತು. ತಾಲೂಕ ಆಡಳಿತವು ಪ್ರತಿ 2 ಗಂಟೆಗೆ ಒಂದು ಬಾರಿ ಕ್ಷೇತ್ರದ ಒಟ್ಟಾರೆ ಮತದಾನದ ಸರಾಸರಿಯ ಮಾಹಿತಿಯನ್ನು ಬಿಡುಗಡೆಗೊಳಿಸಿತ್ತು. ಈ ಮಧ್ಯ ಬಹುತೇಕ ಮತಗಟ್ಟೆಗಳಲ್ಲಿ ಬಿರುಸಿನಿಂದ ಮತದಾನವಾಗಿದ್ದು ಕಂಡು ಬಂದಿತು.
266 ಮತಗಟ್ಟೆಗಲಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ 9.45, 11ಕ್ಕೆ 25.70, ಮಧ್ಯಾಹ್ನ 1ಕ್ಕೆ 44.81, 3 ಗಂಟೆಗೆ 59.88, ಮತ್ತು ಸಾಯಂಕಾಲ 5 ಗಂಟೆಗೆ 73.23 88847 ಪುರಷರು, 86219 ಮಹಿಳೆಯರು ಸರಾಸರಿಯಷ್ಟು ಮತದಾನ ಮಾಡಿದರು ಎಂದು ಮಾಹಿತಿ ತಿಳಿಸಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಮತದಾರರು ಬಿಸಿಲನ್ನು ಲೆಕ್ಕಿಸದೆ ಮತದಾನ ಮಾಡಲು ಮುಂದಾಗಿದು ಕಂಡು ಬಂದಿತು. ಒಟ್ಟಾರೆ ಮತದಾನವು ಕ್ಷೇತ್ರದಲ್ಲಿ ಶಾಂತಿಯುತ ಮತದಾನವಾಗಿದ್ದು ತಾಲೂಕ್ ಆಡಳಿತ ಮತ್ತು ಪೊಲೀಸ್ ಇಲಾಖೆಯು ನಿಟ್ಟಿಸಿರು ಬಿಟ್ಟಿದೆ. ಇದೀಗ ಎಲ್ಲರ ಚಿತ್ತ ಜೂ. 6ರ ಫಲಿತಾಂಶದತ್ತ ನೆಟ್ಟಿದೆ ಎಂದು ಹೇಳಲಾಗಿದೆ.