ಶಿಗ್ಗಾವ್

ಸರಕಾರಿ ಕಾಲೇಜಿನಲ್ಲಿ ಬಿ.ಸಿ.ಎ ಕೋರ್ಸ್‌ ಪ್ರಾರಂಭಕ್ಕೆ ಆದೇಶ

ಸರಕಾರಿ ಕಾಲೇಜಿನಲ್ಲಿ ಬಿ.ಸಿ.ಎ ಕೋರ್ಸ್‌ ಪ್ರಾರಂಭಕ್ಕೆ ಆದೇಶ

ಶಿಗ್ಗಾವಿ16 : ಪಟ್ಟಣದ ಗೌರಮ್ಮ .ಬ.ಅಂಕಲಕೋಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಇಲಾಖೆ ಬೆಂಗಳೂರ  ಬಿ.ಸಿ.ಎ ಕೋರ್ಸನ್ನು  ನೀಡಿ ಅಧಿಕೃತವಾಗಿ ಆದೇಶ ಮಾಡಿದೆ. 

ಅಲ್ಲದೇ  ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಸೆಯಂತೆ  ಮತ್ತು ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ ಒಕ್ಕೂಟ, ಶಿಕ್ಷಣ ಪ್ರೇಮಿಗಳು ಹಾಗೂ  ಜನಪ್ರತಿನಿಧಿಗಳಿಗೆ ಮತ್ತು ಈ ಭಾಗದ ಸಾರ್ವಜನಿಕರಿಗೆ. ವಿದ್ಯಾರ್ಥಿ ಪಾಲಕರಿಗೆ ತುಂಬಾ ಹರ್ಷವಾಗಿದೆ ಹಾಗೂ ಈ ಭಾಗದ ಜನರ ಮಕ್ಕಳಿಗೆ ಸರಕಾರಿ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಸಿ.ಎ, ಬಿ.ಬಿ.ಎ ಕೋರ್ಸುಗಳನ್ನು ಪ್ರಾರಂಭಿಸಬೇಕೆಂಬ ಒತ್ತಾಯದಂತೆ ಡಾ.ಚನ್ನಬಸಪ್ಪ ಎಸ್ ಕುಮ್ಮೂರ ಪ್ರಾಂಶುಪಾಲರ ಪರಿಶ್ರಮದ ಫಲವಾಗಿ ಈ ಕೋರ್ಸುಗಳು ಲಭ್ಯವಾಗಿವೆ ಇದರ ಸದುಪಯೋಗವನ್ನು ತಾಲೂಕಿನ ವಿಧ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕೋರಿದ್ದಾರೆ. 


ಸುದ್ದಿ ಓದಿ