ಹೂವಿನ ಹಡಗಲಿ

ವಿಮಾನಯಾನ ಸೇವೆಗೆ ಆಯ್ಕೆ: ಓದಿದ ಶಾಲೆಯ ವಿದ್ಯಾರ್ಥಿಗಳಿಗೆ ಹೋಳಿಗೆ ಊಟ

ವಿಮಾನಯಾನ ಸೇವೆಗೆ ಆಯ್ಕೆ: ಓದಿದ ಶಾಲೆಯ ವಿದ್ಯಾರ್ಥಿಗಳಿಗೆ ಹೋಳಿಗೆ ಊಟ

ಹೂವಿನಹಡಗಲಿ 19: ತಾಲ್ಲೂಕಿನ ಗ್ರಾಮದ ಗ್ರಾಮೀಣ ಪ್ರತಿಭೆ ಭೂಮಿಕಾ ಗಗನಸಖಿಯಾಗಿ  ಸೇವೆಗೆ ಆಯ್ಕೆಯಾಗಿದ್ದರಿಂದ ಅಧ್ಯಯನ ಮಾಡಿದ ಪಟ್ಟಣದ ತುಂಗಭದ್ರಾ ಪ್ರೌಢ ಶಾಲೆಯ ಮಕ್ಕಳಿಗೆ ಸೋಮವಾರ ಹೋಳಿಗೆ  ಸಿಹಿಊಟ ಉಣಬಡಿಸಿದರು. ಭೂಮಿಕಾ ಅವರ ತಂದೆ ಜಗದೀಶ, ತಾಯಿ ಮಂಜುಳಾ ಸ್ವತಃ ಹೋಳಿಗೆ350 ಮಕ್ಕಳಿಗೆ ಉಣ ಬಡಿಸಿದರು. ಶಾಲೆಗೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ ಪೂಜಾರ, ಭೂಮಿಕಾ ಸಮನ್ವಯಾಧಿಕಾರಿ ಎ.ಕೋಟೆಪ್ಪ, ದೈಹಿಕ ಶಿಕ್ಷಣ ಅಧೀಕ್ಷಕ ಎಸ್‌.ಮುಸ್ತಫಾ, ಎಚ್‌. ಮಲ್ಲಿಕಾರ್ಜುನ. ತುಂಗಭದ್ರಾ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ ನಿರ್ದೇಶಕ ಗುರುವಿನ ರವೀಂದ್ರ, ಮುಖ್ಯ ಶಿಕ್ಷಕ ಸುರೇಶ ಅಂಗಡಿ, ಶಿಕ್ಷಕರಾದ ಎಸ್‌. ದ್ವಾರಕೀಶ್ ರೆಡ್ಡಿ, ವೈ.ಜಯಮ್ಮ ಪಿ.ಎಂ. ಗೀತಾ, ಸ್ವಾಮಿನಾಥ, ಕೆ.ಬಸವರಾಜ, ಜಿ.ಆನಂದ, ಎಲ್‌.ಗಿಡ್ಡಾನಾಯ್ಕ, ಅಕ್ಷರ ದಾಸೋಹ ಸಿಬ್ಬಂದಿ ಇದ್ದರು. 


ಸುದ್ದಿ ಓದಿ