ಗುಳೇಗುಡ್ಡ

ಅಧ್ಯಯನದಿಂದ ಬಡತನ ಮೆಟ್ಟಿ ನಿಲ್ಲಬಹುದು: ಲಮಾಣೆ

ಅಧ್ಯಯನದಿಂದ ಬಡತನ ಮೆಟ್ಟಿ ನಿಲ್ಲಬಹುದು:  ಲಮಾಣೆ
ಗುಳೇದಗುಡ್ಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜರುಗಿತು.

ಗುಳೇದಗುಡ್ಡ10: ಬಡತನ ಯಾವ ವಿಶ್ವವಿದ್ಯಾಲಯ ಕಲಿಸದ ಪಾಠವನ್ನು ಕಲಿಸುತ್ತದೆ. ಆದರೆ ಅಧ್ಯಯನದಿಂದ ಇದೆಲ್ಲವನ್ನು ಮೆಟ್ಟಿ ನಿಂತು ಎಲ್ಲವನ್ನು ಸಾಧಿಸಬಹುದು ಎಂದು ಕಲಾದಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಸಂಪತ್ ಲಮಾಣೆ ಹೇಳಿದರು.

ಅವರು ಬುಧುವಾರ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2020-21 ನೇ ಸಾಲಿನ ಶೈಕ್ಷಣಿಕ ವರ್ಷದ ಕ್ರೀಡಾ, ರೆಡ್‍ಕ್ರಾಸ್, ಸಾಂಸ್ಕೃತಿಕ, ಸ್ಕೌಟ್ ಮತ್ತು ಗೈಡ್ಸ್ ಹಾಗೂ ಇತರೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು

ವಿದ್ಯಾರ್ಥಿಗಳ ಜೀವನದಲ್ಲಿ ಪದವಿ ಹಂತ ಬಹಳ ಪ್ರಮುಖವಾಗಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಶ್ರದ್ಧೆ, ಏಕಾಗ್ರತೆಯಿಂದ ಓದಬೇಕು. ಸೃಷ್ಟಿ-ಸ್ಥಿತಿ-ಲಯವು ಇದೇ ಅವಧಿಯಲ್ಲಿ ಆಗುತ್ತದೆ. ಬಡತನದಿಂದ ಬಂದಿರುವ ನಾವು ಅದನ್ನು ಶಾಪವೆಂದು ತಿಳಿದುಕೊಳ್ಳದೇ ಅದನ್ನು ಮೆಟ್ಟಿ ನಿಂತು ಅಧ್ಯಯನಶೀಲರಾದಾಗ ಜ್ಞಾನವನ್ನು ಹೊಂದುತ್ತೇವೆ ಎಂದರು.

ಇದೇ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಪ್ರಕಾಶ ಹೊಸಮನಿಯವರಿಗೆ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಫಕೀರಪ್ಪ ಚನ್ನಪ್ಪಗೌಡ್ರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀಶೈಲ ಬಡಿಗೇರ, ಭುವನೇಶ್ವರಿ ಬಡಿಗೇರ, ಸಂತೋಷ ಎಚ್. ಎಸ್, ನಾಗರಾಜ ಎಸ್.ಕೆ.  ಎಸ್.ಎಸ್.ಮಡಿವಾಳರ ಉಪ್ಥತರಿದ್ದರು. ಸಂತೋಷ ಮೇಟಿ ಸ್ವಾಗತಿಸಿದರು. ಮೌನೇಶ ಯತ್ನಟ್ಟಿ ವಂದಿಸಿದರು.

ಸುದ್ದಿ ಓದಿ