ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ಹಲ್ಲೇ : ಎಸ್ ಎಫ್ ಐ ಪ್ರತಿಭಟನೆ, ವಾರ್ಡನ್ ಅಮಾನತ್ತಿಗೆ ಆಗ್ರಹ
ರಾಣೇಬೆನ್ನೂರ: ಡಿ 5- ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ, ಅಮಾನವೀಯ ರೀತಿಯಲ್ಲಿ ಹಲ್ಲೇ ಮಾಡಿದ ವಸತಿ ನಿಲಯದ ವಾರ್ಡನ್, ಅವರ ಮೇಲೆ ಕ್ರಮ ಕೈಗೊಂಡು, ತಕ್ಷಣವೇ ಅಮಾನತ್ತು ಮಾಡಬೇಕೆಂದು ಆಗ್ರಹಿಸಿ, ಮಂಗಳವಾರ ಹಾಸ್ಟೆಲ್ ಎದುರುಗಡೆ ಎಸ್ ಎಫ್ ಐ ಕಾರ್ಯಕರ್ತರು ಪ್ರತಿಭಟಿಸಿದರು.
ಇಲ್ಲಿನ ಮಿನಿ ವಿಧಾನಸೌಧ ಬಳಿಯ, ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿತ ಡಾ: ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ವಸತಿ ಶಾಲೆಯ ಮಕ್ಕಳಿಗೆ, ಸರ್ಕಾರ ನೀಡುವ ಯಾವುದೇ, ಮೂಲಭೂತ ಸವಲತ್ತುಗಳನ್ನು ನೀಡದೆ, ಪ್ರಶ್ನಿಸಿದ ಮಕ್ಕಳಿಗೆ, ಸೌಲಭ್ಯದಿಂದ ವಾಂಚಿಸುತ್ತಾ ಸಾಗಿದ್ದಾರೆ ಎಂದು ಆರೋಪಿಸಿರುವ ಭಾರತ್ ವಿದ್ಯಾರ್ಥಿ ಫೆಡರೇಶನ್, ಸಂಬಂಧಿಸಿದ ವಸತಿ ನಿಲಯದ ಮೇಲ್ವಿಚಾರಕಿ, ಶಿಕ್ಷಕಿ ಹುದ್ದೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದೆ. ವಸತಿ ನಿಲಯದ ಎದುರುಗಡೆ ಪ್ರತಿಭಟನೆ ನಡೆಯುತ್ತಿರುವ ವಿಷಯ ತಿಳಿದ ತಹಶೀಲ್ದಾರ್ ಹನುಮಂತಪ್ಪ ಶಿರಹಟ್ಟಿ ಅವರು ಸ್ಥಳಕ್ಕೆ ಧಾವಿಸಿ, ಎಸ್ ಎಫ್ ಐ, ಮತ್ತು ವಿದ್ಯಾರ್ಥಿಗಳಿಂದ ಹೇಳಿಕೆಗಳನ್ನು ಪಡೆದು, ಈ ಕುರಿತು ಎಸ್ಎಫ್ಐ ಮುಖಂಡರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಎಫ್ ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ್ ಎಸ್, ಅವರು, ಇಲ್ಲಿನ ವಾರ್ಡನ್ ಇಲ್ಲಿರುವ 1 ರಿಂದ 5ನೇ, ತರಗತಿಯ 125 ಮಕ್ಕಳಿಗೆ, ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ವಂಚಿಸುತ್ತಲೇ ಬಂದಿದ್ದಾರೆ. ಮೂಲಭೂತ ಸೌಲಭ್ಯ, ನಿಲಯದಲ್ಲಿ ಗುಣಮಟ್ಟದ ಆಹಾರ ನೀಡದೆ, ಪ್ರಶ್ನಿಸಿದವರಿಗೆ ಬೆದರಿಕೆವೊಡ್ಡಿ ಸಾಗಿದ್ದಾರೆ. ಇದರಿಂದ ಮಕ್ಕಳು ಮಾನಸಿಕವಾಗಿ ನೊಂದಿದ್ದಾರೆ. ಎಂದು ಹೇಳಿದ ಅವರು ಕೂಡಲೇ ಅಮಾನತುಗೊಳಿಸಬೇಕು, ವಿಳಂಬ ಧೋರಣೆ ಅನುಸರಿಸಿದರೆ, ನಿರಂತರ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇಲ್ಲಿನ ವಾರ್ಡನ್ ಸವಿತಾ ಅವರು, ವಿದ್ಯಾರ್ಥಿಗಳ ಸಮಸ್ಯೆ ಹೇಳಿದರೆ ಕೈ ಕಾಲುಗಳಿಗೆ ಘಾಯ ಬರುವ ರೀತಿಯಲ್ಲಿ ಹೊಡೆಯುತ್ತಾರೆ. ಬಿದ್ದು ಗಾಯ ಮಾಡಿಕೊಂಡರೆ, ಆರೋಗ್ಯ ಸರಿ ಇಲ್ಲದಿದ್ದರೆ, ಚಿಕಿತ್ಸೆಗೆ ಕರೆದುಕೊಂಡು ಹೋಗುವುದಿಲ್ಲ. ಯಾವುದೇ ವಸ್ತುಗಳು ವಿತರಣೆ ಮಾಡಲ್ಲ. ಸರಿಯಾಗಿ ನೋಡಿಕೊಳ್ಳುವುದಿಲ್ಲ. ಆದ್ದರಿಂದ ನಮಗೆ ಈ ವಾರ್ಡನ್ ಬೇಡವೇ ಬೇಡ ಎಂದು ಬಿಗಿ ಪಟ್ಟು ಸಡಿಲಿಸದೆ ಕಾರ್ಯಕರ್ತರು, ವಿದ್ಯಾರ್ಥಿಗಳು ಧರಣಿ ನಡೆಸಿದರು.
-ಬಸವರಾಜ್.
ಸ್ಥಳಕ್ಕೆ ದೇವಾ ನಾಯಕ :- ಪ್ರತಿಭಟನೆ ಸುದ್ದಿ ತಿಳಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದೇವಾ ನಾಯಕ ಅವರು, ಈ ಕುರಿತು ಮನವಿ ಸ್ವೀಕರಿಸುವುದಾಗಿ ಹೇಳಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಎಸ್ಎಫ್ಐ ಕಾರ್ಯಕರ್ತರು ತಮ್ಮ ಮೇಲೆ ನಮಗೆ ನಂಬಿಕೆ ಇಲ್ಲ. ನಿಮ್ಮ ಕಾರ್ಯ ವೈಖರಿಇಂದಾಗಿ, ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿವೆ ಕೂಡಲೇ ಅವರನ್ನು ಅಮಾನತ್ತು ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಮತ್ತು ಧರಣಿ ಮುಂದುವರೆಸಿದ್ದರು. ಕ್ರಮ ಕೈಗೊಳ್ಳುವ ಭರವಸೆಯಮೆರೆಗೆ ಧರಣಿ ನಿರತರು ತಮ್ಮ ಧರಣಿ ತಾತ್ಕಾಲಿಕವಾಗಿ ಹಿಂಪಡೆದರು.
ಪ್ರತಿಭಟನೆಯ ಮುಂಚೂಣಿಯಲ್ಲಿ ಎಚ್ಎಫ್ಐ ತಾಲೂಕು ಮುಖಂಡರಾದ ಹೊನ್ನಪ್ಪ ಕುದರಿಹಾಳ, ಬಸವರಾಜ ಬಿ, ವಿದ್ಯಾರ್ಥಿಗಳಾದ ಹರೀಶ್ ಎಸ್ ಜಿ, ರೇಣುಕಾ ಜಾಗಟಿ, ಸಂತೋಷ ಲಮಾಣಿ, ಪ್ರಗತಿ ದಾಸರೆಡ್ಡಿ, ಹನುಮಂತ ಲಮಾಣಿ, ಲಕ್ಷ್ಮೀ, ಕಿರಣ ಸೇರಿದಂತೆ ವಸತಿ ನಿಲಯದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪಿಎಸ್ಐ ಗಡ್ಡೆಪ್ಪ ಗುಂಜುಟಿಗಿ ಎಎಸ್ಐ ವಿಜಯ ಬಳಿಗಾರ, ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ಗಿರೀಶ್ ಹೊಸಮನಿ, ಪೋಲಿಸ್ ಸಿಬ್ಬಂದಿಗಳು, ಹಾಸ್ಟೆಲ್ ಮೇಲ್ವಿಚಾರಕರು ಉಪಸ್ಥಿತರಿದ್ದರು.
ಹೊಟ್ಟೆ ತುಂಬಾ ನೀಡುವುದಿಲ್ಲ, ಹಿಂದೆ ಇರುವ ಶಿಕ್ಷಕರು ಉಚಿತವಾಗಿ ಪೆನ್ನು ರಬ್ಬರ್ ಗಳನ್ನು ನೀಡುತ್ತಿದ್ದರು ಅದರೆ ಈಗ ಮಾರಾಟ ಮಾಡುತ್ತಾರೆ. ಅನ್ನದಲ್ಲಿ ಹುಳು ಬಂದಿರುವ ಆಹಾರ ನೀಡುತ್ತಾರೆ. ಮನೆಗೆ ಪೋನ್ ಮಾಡಲು ನೀಡುವುದಿಲ್ಲ. ಏನಾದರೂ ಸಮಸ್ಯೆಗಳನ್ನು ಹೇಳಿಕೊಂಡರೆ ಬೆದರಿಕೆ ಹಾಕುತ್ತಾರೆ ಎಂದು ಅಳುತ್ತಾ ತನ್ನ ಅಳಲನ್ನು ತೊಡಿಕೊಂಡರು.
ಸಿಂಧು, ವಿದ್ಯಾರ್ಥಿನಿ