ಕಲಾವಿದ ಶಿಕ್ಷಕರ ಸಮಿತಿಯ ವತಿಯಿಂದ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮ
ಸಿಂದಗಿ 15: ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿಶೇಷ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮವನ್ನು ಕಲಾವಿದ ಶಿಕ್ಷಕರ ಸಮಿತಿ, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್, ಮೈಸೂರು ವಿಜಯಪುರ ಜಿಲ್ಲಾ ಘಟಕ ಆಯೋಜನೆ ಮಾಡಲಾಯಿತು.
ಕಾರ್ಯಕ್ರಮವನ್ನು ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್ ಎಸ್ ನೀರಲಗಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಶಿಕ್ಷಕರು ರಾಷ್ಟ್ರ ನಿರ್ಮಾಪಕರು ಶಿಕ್ಷಕರ ವೃತ್ತಿ ಒಂದು ಆದರ್ಶ ವೃತ್ತಿಯಾಗಿದೆ, ವಿದ್ಯಾರ್ಥಿಗಳ ಭವಿಷÀ್ಯವನ್ನು ಕಟ್ಟುವಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಹೇಳಿದರು.
ಸಿಂದಗಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಸಂತೋಷಕುಮಾರ ಬೀಳಗಿ ಇವರು ಡಾ. ಸರ್ವಪಲ್ಲಿ ರಾಧಾಕೃಷÀ್ಣನ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಚಾಲನೆ ನೀಡಿ ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು, ರಾಷ್ಟ್ರದ ಭದ್ರ ಬುನಾದಿ ಶಿಕ್ಷಣ, ನಾಡಿನ ಏಳಿಗೆಯ ರುವಾರಿಗಳಾದ ಶಿಕ್ಷಕರನ್ನು ಗೌರವಪೂರ್ವಕವಾಗಿ ಅಭಿನಂದಿಸಿದರು.
ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಪಿ.ಮಹೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪರಿಷತ್ತು ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮಗಳ ಕುರಿತು ವಿವರಿಸಿದರು, ಶಿಕ್ಷಣ, ಸೇವೆ ಮತ್ತು ಪುರಸ್ಕಾರ ಎಂಬ ಪರಿಷತ್ತಿನ ಧ್ಯೇಯ ವಾಕ್ಯದಂತೆ ಪರಿಷತ್ತು ಕಾರ್ಯ ನಿರ್ವಹಿಸುತ್ತದೆ. ಸಿದ್ದತೆ, ಬದ್ದತೆ ಹಾಗೂ ಶುದ್ಧತೆ ಇದ್ದರೆ ನಾವು ಕೈಗೊಂಡ ಕಾರ್ಯದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.
ಕಲಾವಿದ ಶಿಕ್ಷಕರ ಸಮಿತಿಯು ಹಮ್ಮಿಕೊಂಡ ಚೊಚ್ಚಲ ಕಾರ್ಯಕ್ರಮವನ್ನು ಮಂಜುಳಾ ಪಾಟೀಲ ಸದಸ್ಯರು ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪ್ರವೀಣಕುಮಾರ ಎಸ್ ಓತಿಹಾಳ ಸಮಿತಿ ಮುಖ್ಯಸ್ಥರು ಸ್ವಾಗತಿಸಿದರು, ನಾಗರಾಜ ಹುಡೇದ ಸಮಿತಿ ಉಸ್ತುವಾರಿಗಳು ಆಶಯ ನುಡಿಗಳನ್ಮಾಡಿದರು, ಮಹಾಂತೇಶ ಚವ್ಹಾಣ ಪ್ರಧಾನ ಕಾರ್ಯದರ್ಶಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ನಾಗರಾಜ ಕೊಡಗನೂರ ಸದಸ್ಯರು ನಿರೂಪಿಸಿದರು, ಡಿ.ಎಸ್.ಚಾಂಬರ ಹಾಗೂ ತ್ರಿವೇಣಿ ಎನ್ ಸದಸ್ಯರು ಅತಿಥಿಗಳನ್ನು ಪರಿಚಯಿಸಿದರು, ಸುನಿತ.ಡಿ ಸದಸ್ಯರು ವಂದಿಸಿದರು.
ಚಲುವೇಗೌಡ ಎನ್ ಕೋಶಾಧ್ಯಕ್ಷರು, ಚಂದ್ರಶೇಖರ ನಾಯಕ್ ತಾಂತ್ರಿಕ ವಿಭಾಗದ ಮುಖ್ಯಸ್ಥರು, ಸಂತೋಷÀ ಬಂಡೆ ಪ್ರಧಾನ ಸಂಯೋಜಕರು, ಸುಮತಿ. ಎಸ್ ಮುಖ್ಯ ಸಂಯೋಜಕರು, ರಂಗಸ್ವಾಮಿ. ಕೆ. ಜಿ ಸಂಯೋಜಕರು ಹಾಗೂ ಕಲಾವಿದ ಶಿಕ್ಷಕರ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.